ಅನಿವಾಸಿ

Archive for February, 2008

ಬೆಳವಣಿಗೆ

In ನೀಲುಗಳು, ಪದ್ಯ on February 20, 2008 at 8:05 pm

ಹದಿನಾರರ ಈಚೆ
ಖುಷಿಯೂ ಅಳಲೂ ತಟ್ಟತಟ್ಟನೆ ದಟ್ಟ.
ಹದಿನಾರರ ಆಚೆ
ಖುಷಿ ಮತ್ತು ಅಳಲು
ಯಾವುದರೊಳಗೆ ಯಾವುದು
ಹುಡುಕಿಕೊಳ್ಳುವುದೇ ದೊಡ್ಡ ಪಾಠ.

ಮುರಿಯುವ ಮಳೆ ಹಾಗು ಮೀರುವ ಮನಸ್ಸು

In ಅಂದಂದು, ಯೋಚನೆ on February 13, 2008 at 8:35 pm
ಎರಡು ವಾರದಿಂದ ಎಡೆಬಿಡದ ಮಳೆ. ಆಸ್ಟ್ರೇಲಿಯಾದ ಮೂಡಲ ಕಡಲತಡಿಯುದ್ದಕ್ಕೂ ಹೊಡೆದಿದ್ದೇ ಹೊಡೆದಿದ್ದು. ಬರಗಾಲ ಕೊನೆಗೊಳಿಸಲು ಹಟತೊಟ್ಟಂತೆ. ಇದು ಯಾವ ನಕ್ಷತ್ರದ ಮಳೆಯೋ ಎಂದುಕೊಳ್ಳುತ್ತೇನೆ. ಹೊಳೆ, ನದಿ, ಕೆರೆ, ಕೊಳ್ಳ ಎಲ್ಲ ತುಂಬಿ ಉಕ್ಕಿ ಹರಿದ ಸಂತಸ.  ಸಿಡ್ನಿಯಲ್ಲಿ ಪುರಂದರ ಆರಾಧನೆ – ಮೊನ್ನೆ ಭಾನುವಾರ. ನನ್ನ ತಲೆಯಲ್ಲಿ ಮರುಕಳಿಸಿದ ಒಂದೆರಡು ಪ್ರಶ್ನೆಗಳು. ಹಿಂದಿನ ದಿನವಷ್ಟೇ ಮಳೆ ನಿಂತು ಎಲ್ಲ ತಿಳಿಯಾಗಿ ಸೂರ್ಯ ಹಚ್ಚಗೆ ನಗುತ್ತಿದ್ದ. Read the rest of this entry »

ಸತ್ಯಕ್ಕೆ ಲಿಂಕ್

In ಕಲ್ಪನೆ, ಯೋಚನೆ on February 10, 2008 at 8:36 pm

ಆವತ್ತು ಸತ್ಯ ಡೋನ್‌ಲೋಡ್ ಮಾಡಿಕೊಳ್ಳುತ್ತಿದ್ದೆ. ನನ್ನ ಗೆಳೆಯ ಯಾವುದೋ ಲಿಂಕ್ ಕಳಿಸಿದ್ದ. ಬರೀ ಸುಳ್ಳನ್ನೇ ಹೇಳ್ಕೊಂಡು, ಸುಳ್ಳನ್ನೇ ಕೇಳ್ಕೊಂಡು ಅದರಲ್ಲೇ ಜೀವನ ಮಾಡ್ಕೊಂಡಿದ್ಯ. ಸ್ವಲ್ಪ ಇದನ್ನ ಡೌನಲೋಡ್ ಮಾಡಿಕೊಂಡು ನೋಡು. ಸುಳ್ಳಿನ್ನ ತಲೇ ಮೇಲೆ ಹೊಡೆದ ಹಾಗಿದೆ ಅಂದ. ಶಾಕ್ ಹೊಡೆದ ಹಾಗಾಯ್ತು. ಸುಳ್ಳಿನ ತಲೆ ಮೇಲೆ ಹೊಡೆದ ಹಾಗೆ ಸತ್ಯ ಯಾಕಿರಬೇಕು ಅಂತ ತೊದಲಿದೆ. ಅನೈತಿಕ ಪ್ರಶ್ನೆಗಳನ್ನ ಕೇಳಬೇಡ ಅಂತ ಗದರಿದ. ಸರಿ ಸರಿ ಅಂತ ಗೊಣಗಿಕೊಂಡೆ.

Read the rest of this entry »

ಕಾದಾಟ

In ನೀಲುಗಳು, ಪದ್ಯ on February 7, 2008 at 9:38 pm

ಎಷ್ಟು ಜಗ್ಗಾಡಿದರೂ
ಕಾವ್ಯವಾಗದ ಪದದ ಸಾಲಿಗೆ
ಗಿಲೀಟು ಮಾಡುವುದು ಬರೇ ಪೋಲು. Read the rest of this entry »

ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು

In ಯೋಚನೆ on February 4, 2008 at 8:59 pm
ಪ್ರಚಾರಕ್ಕೆ ಹಲವು ದಾರಿಗಳನ್ನು ಬಹುಪಾಲು ಎಲ್ಲ ಧರ್ಮಗಳೂ ಕಂಡುಕೊಂಡಿದೆ. ಇದು ಹರಡುತ್ತಿರುವ ಧರ್ಮಕ್ಕೆ ಮಾತ್ರವಲ್ಲ ಬೇರು ಬಿಟ್ಟ ಧರ್ಮಗಳಿಗೂ ಅನ್ವಯಿಸುವ ಮಾತು. ಏಕೆಂದರೆ ಧರ್ಮ ಪ್ರಚಾರ ಅನ್ನುವುದು ನಿರಂತರ ನಡೆಯಬೇಕಾದ ಕೆಲಸ.  ಬಾಲ್ಯ, ಕೌಮಾರ್ಯ, ಯೌವ್ವನದಲ್ಲಿರುವವರಿಗೆ ಇದು ಸದಾ ನಡೆಯಬೇಕಾದ ಶಿಕ್ಷಣ. Read the rest of this entry »