ಅನಿವಾಸಿ

ಸ್ನೇಲ್ಪುರಾಣ

In ಚಿತ್ರಗಳು, ಪದ್ಯ, ಸೈನ್ಸ್ ಪದ್ಯ on April 24, 2009 at 3:46 pm

basavana_hulu_02

ಬಸವನ ಹುಳ
ಕ್ಕೆ
ಸ್ನೇಲ್‌ ಪೇಸು
ಎಂಜಲು ಮೈ

ಚಿಪ್ಪಲ್ಲಿ ಸುತ್ತಕೊಂಡು
ಮಳೆ ಬಂತೋ ಹೊರಗೆ ಸುರಕೊಂಡು
ಮೂಸಿ ಮೂಸಿ
ಮುಂದಿನ ಮಳೆವರೆಗೂ ಬೇಕಾಗೋಷ್ಟು
ಎಲೆನೂ ಮಣ್ಣಿನ ವಾಸನೇನೂ
ಒಳಗೆ ತುಂಬ್ಕೊಂಡು ಒಳಗೆ ಹೋದರೆ
ಚಳೀಲಾಗಲಿ, ಬೇಸಿಗೆಲಾಗಲೀ
ಮತ್ತೆ ಧ್ಯಾನ
ದಂತಹ ನಿದ್ದೆ
ಎದ್ದಾಗ ಮುಂಚಿನಂಗೆ
ಮತ್ತೆ ಹಸಿವೆ.

basavana_hulu_02ಅಣ್ಣಾನೆ ಅಕ್ಕಾನೂ ಆಗಿರೋ
ತಂಗೀನೇ ತಮ್ಮಾನೂ ಆಗಿರೋ
ಎದೆ ಗೂಡಿಲ್ದೆ ನೀರಲ್ಲೀಜೋ
ಚಿಪ್ಪಿಲ್ಲದೇ ಎಂಜಲುಮೈಯೇ ಮೈಯಾಗಿರೋ
ವರಿಗೆಲ್ಲಾ
ಈ ಚಿಪ್ಪು ಕಂಡರೆ ಹೊಟ್ಟೆಕಿಚ್ಚು
ಆದರೆ ಎಲ್ಲಾವೂ
ಕತ್ತಿ ಅಲುಗಿನ ಮೇಲೆ ತೆವಳೀನೂ
ಉಳಿಕೋತಾವೆ
ಯಾರ ಕೈಲಿ ಆಗತ್ತೇಳಿ ಅಂತಹ
ಮೈಯಿಟ್ಕೊಂಡು
ಎಂಜಲು ಇಲ್ದೇ ಹೋದ್ರೆ

  1. ಅನಿವಾಸಿ,
    ಕವಿತೆಯ ಭಾಷೆ ಸಖತ್ ಇಷ್ಟ ಆಯ್ತು. ತುಂಬ ಹೊತ್ತು ಪದಗಳ ನಡುವೆಯೇ ತೇಲಾಡುವಂತೆ ಆಯ್ತು!! ನನ್ನ ಮಗಳು ಎಲ್ಲಾದ್ರು ಬಸವನ್ಹುಳು ಕಂಡರೆ ಇಡಿ ದಿನ ಆದರ ಹಿಂದೆನೆ ಬಿದ್ದಿರ್ತಾಳೆ. ಅವಳಿಗೆ ಕವಿತೆಯ ಮೊದಲ್ನೆ ಸ್ಟಾಂಜಾ ಓದಿ ಹೇಳ್ದೆ. ಖುಶ್ಯಾಗ್ಬಿಟ್ಳು.

  2. ಟೀನಾ-
    ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
    ನಿಮ್ಮ ಮಗಳಿಗೆ ಕವಿತೆ ಇಷ್ಟ ಆಗಿದ್ದು – ನಿಮಗೆ ತೇಲಾಡುವಂತಾಗಿದ್ದಕ್ಕಿಂತ ಹೆಚ್ಚು ಸಂತಸ ತಂದಿತು. ಆಕೆಗೆ ನನ್ನ ಥ್ಯಾಂಕ್ಸ್‌ನ್ನು ಆತ್ಮೀಯವಾಗಿ ತಿಳಿಸಿ :)

    ಒಂದು ತರ ಸೈನ್ಸ್ ಪದ್ಯ ಬರೆಯುವ ಅಂತ ಹೊರಟಿದ್ದು. ಇನ್ನು ಮೇಲೆ ಹೀಗೆ ಬರೆಯೋಣ ಅಂತ ಅನಿಸಿದೆ. ನೋಡೋಣ!