ಅನಿವಾಸಿ

ಈಡ: ಹುಡುಗಿ ಕತೆ

In ಪದ್ಯ, ವಿಜ್ಞಾನ, ಸೈನ್ಸ್ ಪದ್ಯ on September 4, 2009 at 8:40 pm


ಪುಟ್ಟ ಹುಡುಗಿ
ಈಡ ಕೈಗೂಸಾಗಿರುವಾಲೇ
ಮಣಿಗಂಟು ಮುರಕೊಂಡಿರಬೇಕು
ಬಾಯಾರಿ ನೀರಿಗೆಂದು
ಆ ಕೊಳಕ್ಕಿಳಿದು ಜಾರಿ ಬಿದ್ದಿರಬೇಕು
ನೀರಿನಡಿ ಮೆಸ್ಸಿಲ್ ಜ್ವಾಲಾಮುಖಿಯ
ವಿಷದನಿಲ ಮೈಸೇರಿ ಸತ್ತಿರಬೇಕು
ಸತ್ತು ಕೊಳದ ತಳಸೇರಿ
ಪಳೆಯುಳಿಕೆಯಾಗಿ
ನಲವತ್ತೇಳು ಮಿಲಿಯನ್ ವರ್ಷ
ನಮ್ಮ ಕಣ್ಣಿಗೆ ಕಾದು ಕೂತಿದ್ದಾಳೆ ಹುಡುಗಿ
ಈಡ
ಡಾರ್ವಿನಿಯಸ್ ಮೆಸ್ಸಿಲ್ಲೇಯಾಗಿ

ಪ್ರಾಣಿಲೋಕ ಅರಳಿಕೊಂಡ
ಕತೆಗು ನಮಗು
ಮಿಸ್ಸಿಂಗ್ ಲಿಂಕಂತೆ ಈಡ
ಮಾನವ ಮೂಡಿದ ರೆಂಬೆ ಬಿಟ್ಟು ಹೊರಟ
ಲೆಮೂರ್‍ಗಳಂತೆ ಇವಳಿಗೆ
ಬಾಚಣಿಗೆ ಹಲ್ಲು ಇಲ್ಲವಂತೆ
ಪರಚುಗುರು ಪಂಜ ಇಲ್ಲವಂತೆ
ಜೋಡಿಸಿಟ್ಟ ಹಲ್ಲುಸಾಲು ನಮ್ಮಂತೆ,
ಹಿಮ್ಮಡಿಯ ಟೇಲಸ್ ಮೂಳೆ ನಮ್ಮಂತೆ
ಹೀಗೆ ಹತ್ತಾರು ಪ್ರೈಮೇಟು ಲಕ್ಷಣವಂತೆ
ಈಡ

ಮಿಸ್ಸಿಂಗ್ ಲಿಂಕಾಗಲು ಸಾಕೆ
ಹಲ್ಲು ಹಿಮ್ಮಡಿಯಂತ ಹತ್ತಾರು ಆಭರಣ?
ದಿಟದಲ್ಲೂ ಹೌದೇ ಈಡ
ಪಶುವಿಗು ನಮ್ಮಗು ನಡುವಿನ ತೋರಣ?

ಹೆಚ್ಚಿನ ವಿವರಣೆಗೆ:

ಸುದರ್ಶನ್ ಕಾಲಂ: ಮಿಲಿಯಾಂತರದ ಹುಡುಗಿ ಈಡಾಳ ಕಥೆ