You are currently browsing the category archive for the 'ಚಿತ್ರಗಳು' category.
ಎವಲ್ಯೂಷನ್ ಬಯಾಲಜಿಸ್ಟ್ ಆಗಿರುವ ಡಾ|| ರಿಚರ್ಡ್ ಡಾಕಿನ್ಸ್ ನಾಸ್ತಿಕರೂ ಹೌದು. ಅವರ ಪುಸ್ತಕ ಓದಿದವರಿಗೆ, ಅವರ ಮಾತುಗಳನ್ನು ಕೇಳಿದವರಿಗೆ ಅವರು ಯಾಕೆ ನಾಸ್ತಿಕರು ಮತ್ತು ಅದನ್ನು ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಹೇಳಬೇಕಾಗಿಲ್ಲ.
Read the rest of this entry »
ಈ ಹಣ್ಣು/ತರಕಾರಿ ಅಂಗಡಿ ಇರುವುದು ಸಿಡ್ನಿಯ ಕ್ಯಾಬ್ರಾಮಟ ಎಂಬಲ್ಲಿ.
ಅಂಗಡಿಯ ಒಳಗಿನ ಬಾಳೆಹಣ್ಣು ಅಲಂಕಾರ ಕಣ್ಸೆಳೆದರೆ
ಅಂಗಡಿಯ ಹೊರಗೆ ಮೇಲಿಂದ ಹೇಗೆ ಕಂಡೀತೆಂದು ಕುತೂಹಲವಾಯಿತು… Read the rest of this entry »
ಅಕ್ಟೋಬರ್‌ನಲ್ಲಿ ಮೂಡಬಿದ್ರಿಯ ಸಾವಿರ ಕಂಬದ ಬಸದಿಯ ಹೊರಗೆ ಅಡ್ಡಾಡುತ್ತಾ ತೆಗೆದ ಚಿತ್ರಗಳಲ್ಲಿ ಒಂದೆರಡು ಇವು - Read the rest of this entry »
ಹಾದಿಯಲ್ಲಿ ರಕ್ಷೆಗಾಗಿ… Read the rest of this entry »

ಸಿಡ್ನಿ ಹಾರ್ಬರಿನ ತಟ.
ಸಂಜೆ ಬೆಳಕಲ್ಲಿ “ಜಗದ್ವಿಖ್ಯಾತ” ಬ್ರಿಡ್ಜು ಭವನಗಳನ್ನು ಕಣ್ಣೆವೆಯಿಕ್ಕದೆ ನೋಡುತ್ತಾರೆ ಮಂದಿ. ಕೊರಳಿಂದ ನೇತಾಡುವ ಕಣ್ಣುಗಳಲ್ಲಿ ಅದನ್ನೆಲ್ಲಾ ಸೆರೆಹಿಡಿಯುವ ಮಂದಿ. ಅವರಿಗೆಲ್ಲ ತೊಂದರೆಯಾಗದ ಹಾಗೆ; ಅವರ “ವೀಕ್ಷಣೆ”ಗೆ ಅಡ್ಡಬಾರದ ಹಾಗೆ; ಅವರನ್ನೆಲ್ಲಾ ಅಲ್ಲೇ ಬಿಟ್ಟು ಮೆಲ್ಲನೆ ಹಿಂದು ಹಿಂದಕ್ಕೆ ಸರಿಯಬೇಕು. ಪಕ್ಕದಲ್ಲೇ ಬಚ್ಚಿಟ್ಟುಕೊಂಡಿರುವ ಹಳೆಮನೆ, ಓಣಿ, ಒಳದಾರಿಗಳ ಮಗ್ಗುಲಿಗೆ.

ಮೊದಮೊದಲು ವಲಸಿಗರು ಬಂದಿಳಿದ ಎಡೆ ಇವು. ಇನ್ನೂ ಹಲವಾರು ಹಳೆಮನೆಗಳು ಕಾಲ ಬದಲಾದರೂ ಮರೆತು ಹಾಗೇ ನಿಂತಿವೆ. ಅಂದಿನ ವಲಸಿಗರು ಹೊಸ ಊರನ್ನು ಹೊಕ್ಕ ಉನ್ಮಾದದಲ್ಲಿ ಅಲೆದ ಓಣಿಗಳ ಪಕ್ಕದಲ್ಲೆ. ಸಣ್ಣ ಬಿಗುಮಾನದಿಂದ ಸಂಜೆ ಬೆಳಕನ್ನ ಬೇಕಾದಷ್ಟೇ ಒಳಬಿಟ್ಟುಕೊಂಡು ನಲಿಯುತ್ತದೆ.

ಮುಖ್ಯ ಬೀದಿಗಳ ಕಣ್ಣು ತಪ್ಪಿಸಿ ಒಳಗೊಳಗೆ ಒಳದಾರಿಗಳು ಕದ್ದು ಮುಚ್ಚಿ ಸಂಜೆಯಲ್ಲಿ ಸಣ್ಣಗೆ ಹಾಡುತ್ತವೆ. ಏರು ಪೇರಿನ ಸಂದಿಗಳ ಮೆಟ್ಟಿಲು ಹತ್ತಿ ಇಳಿವಾಗ ಆ ಹಾಡಿನ ಗುನುಗು, ತಾಳ ಕೇಳುತ್ತದೆ.

ಹೇಗಾದರೂ ಮಾಡಿ ಹೊಸ ರೂಪಕ್ಕೊಗಿಸುವ ಹಟ ಕೂಡ ಕಾಣುತ್ತದೆ. ಹಟ ಗೆದ್ದ ಕಡೆ ಕೆಲವು ಹೊಸ ರೂಪಗಳ ಮೇಲೆ ಸಂಜೆ ಬಿಸಿಲಿನ ಮೂರನೇ ಪ್ರತಿಫಲನ ಕಣ್ಣಿಗೆ ಹಿತವಾಗಿ ಮಿನುಗುತ್ತದೆ. ಹಟ ನೋಡಿ ನಗುವಂತೆ.
ಮರೆಯಲಾಗದು ಇದು.
ಊರ ಒಡಲಲ್ಲಿ ಬೆಚ್ಚಗೆ ಮಲಗಿರುವ ಎಡೆಗಳು ಇವು.
ಊರಿನ ಒಳರೂಪ ಇವು.
ಹಳೆರೂಪ ಇವು.
ಬೆಳವಣಿಗೆಯ ತಳರೂಪ ಇವು.









ನಿಮ್ಮ ಮಾತು