ಅನಿವಾಸಿ

Archive for the ‘ನೀಲುಗಳು’ Category

ಕನಸಿನ ಪ್ರಾಯ ಹಾಗು ಮರೆತದ್ದು

In ನೀಲುಗಳು, ಪದ್ಯ on November 7, 2008 at 5:47 am

ಕನಸಿನ ಪ್ರಾಯ

“ಯೌವ್ವನದಲ್ಲಿ ಕನಸದವರಿಲ್ಲವಂತೆ
ನಡುವಯಸ್ಸಲ್ಲಿ ಕನಸದವರು ವ್ಯರ್ಥವಂತೆ
Read the rest of this entry »

ಹೊಳಪು, ಅರಸಿದ್ದು

In ನೀಲುಗಳು, ಪದ್ಯ on October 20, 2008 at 5:51 am

ಹೊಳಪು

ಐವತ್ತು ದಾಟಿದ ಅತ್ಯಂತ ಚೆಲುವೆಯ
ಕಣ್ಣಲ್ಲಿ ಕಂಡಿದ್ದು-
Read the rest of this entry »

ಪರಸ್ಪರ, ಸರ್ವಾಂತರ್ಯಾಮಿ

In ನೀಲುಗಳು, ಪದ್ಯ on September 27, 2008 at 12:32 pm

ಪರಸ್ಪರ

ಗುಡ್ಡದ ಮೇಲೆ ಹುಡುಕುವ ಪಾರಮಾರ್ಥದವರು
ಕೆಸರಲ್ಲಿ ಕಾಲಿಟ್ಟು ತಡಕುವ ಲೌಕಿಕರ ಕಂಡು
ಮತ್ತು
Read the rest of this entry »

ಏನಕ್ಕಾಗಿ, ನುಂಗಿಕೊಂಡದ್ದು

In ನೀಲುಗಳು, ಪದ್ಯ on August 27, 2008 at 8:55 am

ಏನಕ್ಕಾಗಿ

ನಲ್ಲ-
ಮುಂಜಾನೆ ಜಗಳವಾಡಿ ಹೋದ ನಿನ್ನ
ದಾರಿ ಕಾಯುವಾಗ ಸಂಜೆ
ಮೆಲ್ಲನೆ ಕತ್ತಲಿಳಿಯುತ್ತಾ
ಕಿಟಕಿಗಾಜಿನ ಮೇಲೆ ಮಳೆಯ ಹನಿ
ಆತುರಪಡದೆ ಸಾವಕಾಶ ಜಾರುತ್ತದೆ.

————————————

ನುಂಗಿಕೊಂಡದ್ದು

ನಗುತ್ತೀನೋ ನಲ್ಲ-
ಹೊಸತರಲ್ಲಿ ಚಳಿಗಾಲದ ಬಿಸಿಲಂತಿದ್ದವನು
ಇತ್ತಿತ್ತ
ರಣಬೇಸಿಗೆಯ ಬಿಸಿಲಾಗಿ
ಒಣಗಿಸುತ್ತಿದ್ದೀಯ
ಅಂತ ನಿನಗೇ ಗೊತ್ತಿಲ್ಲದೆ
ಉದಾರವಾದಿಯಂತಾಡಿದಾಗ.

ಸೋಜಿಗ

In ನೀಲುಗಳು, ಪದ್ಯ on July 29, 2008 at 7:59 pm

ಸೋಜಿಗ

ಪ್ರಾಮಾಣಿಕತೆಗೆ
ಬೇಕಾದ ಮನಸ್ಥಿತಿ
ಸಂಸ್ಕೃತಿ ಚರಿತ್ರೆ ದೇಶ ಕಾಲಕ್ಕೆಲ್ಲಾ
Read the rest of this entry »

ಅವನು ಇವನು ನೀಲುಗಳು

In ನೀಲುಗಳು, ಪದ್ಯ on July 17, 2008 at 10:22 am

ಕೇಳಿದ್ದು ಹೇಳಿದ್ದು

“ಬಾಗಿಲು ತಟ್ಟಿದ ಸದ್ದಾಯಿತು” ಅಂದ ಅವನು.
“ಸದ್ದು ಬಾಗಿಲ ತಟ್ಟಿತು” ಅಂದ ಇವನು.
Read the rest of this entry »

ನೀಳ್ಗತೆ

In ನೀಲುಗಳು, ಪದ್ಯ on June 26, 2008 at 9:52 pm

ಮೆಲ್ಲಗೆ ಜಾರುವ ರೈಲಲ್ಲಿ
ಹಣ್ಣುಹಣ್ಣು ಮುದುಕ ಮುದುಕಿ
ಆಕೆಯ ಸುಕ್ಕುಗಟ್ಟಿದ ಅಂಗೈಯೊಳಗೆ
ಆತನ ಸುಕ್ಕುಗಟ್ಟಿದ ಅಂಗೈ
ದಾರಿಯುದ್ದಕ್ಕೂ ಮಾತುಕತೆ-
ಮುದುಕಿ : “ಕೇಳಿಸ್ತ?”; ಮುದುಕ : “ಅಂ?”
ಮುದುಕಿ : “ಕೇಳಿಸ್ತ?”; ಮುದುಕ : “ಅಂ?”
ಮುದುಕಿ : “ಕೇಳಿಸ್ತ?”; ಮುದುಕ : “ಅಂ?”

ಅಂಗೈಗಳು
ಒಂದನ್ನೊಂದು ಸವರುತ್ತಲೇ ಇದ್ದವು.

ರಾಮಾವತಾರ ಮತ್ತು ಹುಡುಕಾಟ

In ನೀಲುಗಳು, ಪದ್ಯ on June 19, 2008 at 7:06 pm

ರಾಮಾವತಾರ

ನನ್ನೊಡನೆ
ಪ್ರೀತಿಯ ಉತ್ಕಟತೆಯಲ್ಲಿ ಮೈಮರೆಯುವಾಗ
Read the rest of this entry »

ಎರಡು ಬೆಸ್ತರ ನೀಲುಗಳು

In ನೀಲುಗಳು, ಪದ್ಯ on June 6, 2008 at 10:34 am

ನಡುನಡುವೆ

ಪಟ್ಣಣದತ್ತ ಕಣ್ಣಿಟ್ಟ ಬೆಸ್ತರ ಹುಡುಗ
“ಮೀನಲ್ಲಿ… ಭವಿಷ್ಯ… ಇಲ್ಲ… ಏನು ಮಾಡೋದು” ಅಂತ
ತಡೆತಡೆದು ಆಡಿದ ಮಾತುಗಳ ನಡುವೆಲ್ಲಾ
Read the rest of this entry »

ವಿಮರ್ಶೆ

In ನೀಲುಗಳು, ಪದ್ಯ on May 22, 2008 at 7:30 am

ಹಾಲಿವುಡ್ಡಿನ
ಮರಗಳಿಗೇ ಬೇರು
Read the rest of this entry »

ನನ್ನದು

In ನೀಲುಗಳು, ಪದ್ಯ on May 6, 2008 at 10:22 pm

ಕಿವಿಯೊಳಗೇ ಬಂದು ಹೂತ ಸಂಗೀತ ಕಛೇರಿ
ಕಣ್ಣೆದುರೇ ಬಂದು ಕುಣಿಯೋ ಜಗತ್ತು
Read the rest of this entry »

ಮಿಗಿಲಾದುದು

In ನೀಲುಗಳು, ಪದ್ಯ on April 28, 2008 at 9:57 pm

ಪ್ರೀತಿಯ ಗಾಢತೆಯಲ್ಲಿ ಸದಾ ಸಿಗುತ್ತಿದ್ದ ನಲ್ಲ
ಈಗೀಗ
ಸಮಯ ಸಿಕ್ಕಾಗ ಸಿಗುತ್ತಾನೆ

Read the rest of this entry »

ಮಹಿಳೆ

In ನೀಲುಗಳು, ಪದ್ಯ on April 20, 2008 at 7:05 pm

ಮುಟ್ಟಲಾರದ ಕೆಂಡದ ಕೆಂಪು
ಹೊತ್ತು ಹೊರೆಯುವ ಬಸಿರ ಹಸಿರು
Read the rest of this entry »

ಸರಳವಂತೆ

In ನೀಲುಗಳು, ಪದ್ಯ on April 10, 2008 at 8:10 pm

ನನ್ನ ನಲ್ಲ ಗಡ್ಡಬಿಟ್ಟಾಗ
ಅವನ ಕೆನ್ನೆಯ ನುಣುಪು ನೆನಪಾಗುತ್ತದೆ

Read the rest of this entry »

ಮೈದಾಸ

In ನೀಲುಗಳು, ಪದ್ಯ on April 6, 2008 at 5:24 pm

ಕಬ್ಬಿಣ, ಚಿನ್ನ, ಪೆಟ್ರೋಲು
ಗಣಿಯಾಳದಲ್ಲಿ
ಅದಿರು ಆಸೆಯ ಹೊಳೆ
ಕೈಯಲ್ಲಿ ಮಣ್ಣು Read the rest of this entry »

ನೀಲು

In ನೀಲುಗಳು, ಪದ್ಯ on March 8, 2008 at 5:52 am

ಮಾತಿಗೆ ಸಿಕ್ಕ ಒಂದು ಮಧ್ಯಾಹ್ನ
“ಗುಂಡಿಲ್ಲದೆ ಎಕ್ಸೈಟ್‌ಮೆಂಟ್ ಸಿಗೋದಾದರೆ ಕುಡೀಬೇಡಿ”
ಎಂದು ಹೇಳಿಕೊಂಡು ತನಗೊಬ್ಬಳಿಗೇ
ವಿಸ್ಕಿ ಸುರಿದುಕೊಳ್ಳುತ್ತಾ ತುಂಟ
ನಗೆಯಲ್ಲಿ ಮಗ್ನಳಾದಳು

(ಲಂಕೇಶ್ ಹುಟ್ಟು ಹಬ್ಬ-ನೆನಪು ಮತ್ತು ಮಹಿಳಾ ದಿನಾಚರಣೆ!)

ಬೆಳವಣಿಗೆ

In ನೀಲುಗಳು, ಪದ್ಯ on February 20, 2008 at 8:05 pm

ಹದಿನಾರರ ಈಚೆ
ಖುಷಿಯೂ ಅಳಲೂ ತಟ್ಟತಟ್ಟನೆ ದಟ್ಟ.
ಹದಿನಾರರ ಆಚೆ
ಖುಷಿ ಮತ್ತು ಅಳಲು
ಯಾವುದರೊಳಗೆ ಯಾವುದು
ಹುಡುಕಿಕೊಳ್ಳುವುದೇ ದೊಡ್ಡ ಪಾಠ.

ಕಾದಾಟ

In ನೀಲುಗಳು, ಪದ್ಯ on February 7, 2008 at 9:38 pm

ಎಷ್ಟು ಜಗ್ಗಾಡಿದರೂ
ಕಾವ್ಯವಾಗದ ಪದದ ಸಾಲಿಗೆ
ಗಿಲೀಟು ಮಾಡುವುದು ಬರೇ ಪೋಲು. Read the rest of this entry »

ಸುಲಭ

In ನೀಲುಗಳು, ಪದ್ಯ on January 21, 2008 at 9:53 pm

ಅರೆಬಿರಿದ ನನ್ನ ತುಟಿಗಳ ಮಾದಕತೆ
ನಲ್ಲನಿಗೆ ಮತ್ತೇರಿಸುವುದು
Read the rest of this entry »

ರುಚಿ

In ನೀಲುಗಳು, ಪದ್ಯ on January 10, 2008 at 5:59 am

ತೊಡೆ ಸೊಂಟ ಮತ್ತು ಮೊಲೆಯನ್ನು
ಗಂಡಸರು ಚಪ್ಪರಿಸುವಂತಾದಾಗ
ಚಂದದ ಕುಣಿತವೂ
ತನ್ನ ಪ್ರಶ್ನೆಯ ಮೊನಚು ಕಳಕೊಂಡು
ಅರೆಭಾವಕ್ಕೆ ಉತ್ತರದಂತೆ.

ಪಾಠ

In ನೀಲುಗಳು, ಪದ್ಯ on January 3, 2008 at 8:37 pm

ರೈಲು ಬ್ರಿಡ್ಜಿನಡಿ ತೊರೆಯ ನೀರಲ್ಲಿ
ಆಡುವ ಬಾತುಕೋಳಿ ಜೋಡಿ
ಉರುಳುವ ಗಾಲಿ ಎಬ್ಬಿಸುವ ನೀರ ಕಂಪನಕ್ಕೆ
ಮೈ ಒಡ್ಡುತ್ತ ನಲಿದಿದೆ

ನಾಗರಿಕತೆ

In ನೀಲುಗಳು, ಪದ್ಯ on December 28, 2007 at 5:10 am


ಹದ್ದು ಮೀರಿದ ನಗರಕ್ಕೆ ಸಾಕ್ಷಿ-
ಕೊಟ್ಟಿಗೆಯಲ್ಲಿ ಕರು
ಹಾಕಿ ಬಂದ ದನ ಬಸ್‌ಸ್ಟಾಂಡಿನಲ್ಲಿ
“ಅಂಬಾ”
ಎಂದು ಕೂಗುವುದು.

ಮಧ್ಯಸ್ತಿಕೆ

In ನೀಲುಗಳು, ಪದ್ಯ on December 12, 2007 at 10:26 am


ನಮ್ಮ ನೆರಳುಗಳನ್ನು
ಸಹಜ ನಿರ್ಲಜ್ಜೆಯಿಂದ
ತಬ್ಬಿಸುತ್ತಾನೆ ಬೆಳಗಿನ ಸೂರ್ಯ
ನನ್ನ ನಲ್ಲ ಸಿಟ್ಟಾಗಿ
ದೂರ ನಿಂತಾಗಲೂ ಕೂಡ

ಅಕ್ಷರತೆ

In ನೀಲುಗಳು, ಪದ್ಯ on December 7, 2007 at 9:41 pm

ಬೀದೀಲಿ, ಪೇಟೇಲಿ
ತಮತಮಗೆ ಬೇಕಾದ್ದನ್ನ
ನನ್ನ ಮುಖದ ಮೇಲೆ ಓದಿಕೋತಾರಲ್ಲ
ಜನ
ಅದು ಯಾವ ಭಾಷೇಲಿ
ಅಂತ ಕೇಳೋದು ಹೇಗೆ?

ಜಗದಗಲ

In ನೀಲುಗಳು, ಪದ್ಯ on November 30, 2007 at 5:34 am


ಸಿಡ್ನಿಯಲ್ಲಿ ಹುಲ್ಲು
ತರಿದು ಹಾಸಿದ ಕಾಂಕ್ರೀಟ್ ಅಂಗಳವನ್ನು
ಮುಚ್ಚಿಕೊಳ್ಳುವ ದರಲೆ ಗುಡಿಸುವಾಗ
ಮೂಲೆಯಲ್ಲಿ
ಕೊತ್ತಂಬರಿ ಸೊಪ್ಪಿನ ಕಂತೆ ಹಿಡಿದು
ಶಿಕಾಗೋದ ಏ.ಕೆ.ರಾಮಾನುಜಂ
“ಹಚ್ಚಗೆ” ನಗುತ್ತಾರಲ್ಲ!

ಸೇವೆ

In ನೀಲುಗಳು, ಪದ್ಯ on November 21, 2007 at 5:51 am


ಆಗಸಕ್ಕೇ ಪರದೆ ಹಿಡಿಯಲು ಹೊರಟ
ಮರ
ನಾಕು ಜನಕ್ಕೆ ಸೊಂಪಾದ
ನೆರಳಂತೂ ಆಗಿಯೇ ಆಯಿತು.

ಟೀಕೆ

In ನೀಲುಗಳು, ಪದ್ಯ on November 7, 2007 at 9:46 pm

ದಟ್ಟತೆ ತೆಳುವಾಗೋದನ್ನು ಸಹಿಸಲಾಗದೆ
ಹರೆಯದಲ್ಲೇ ನೇಣು ಹಾಕ್ಕೊಂಡು ಜೀವ ಬಿಟ್ಟ
ಗೆಳತಿ
ಮೊನ್ನೆ ನಲ್ಲನ ಮಾತಿಗೆ ನಾನು ಕುಲುಕುಲಿಸುವಾಗ
ನೋಡುತ್ತಾ ನಿಂತಿದ್ದಳು ಮರೆತುಬಿಟ್ಟೆಯ ಅನ್ನುವಂತೆ.

ಅಗತ್ಯ

In ನೀಲುಗಳು, ಪದ್ಯ on November 2, 2007 at 1:40 pm

ಪದ್ಯಕ್ಕೆರಡು
ಕಾಲಿರೋದು ಒಳ್ಳೇದಂತೆ
ನಿಲ್ಲೋದಕ್ಕೆ
ಜತೇನಲ್ಲಿ ಕುಣಿಯೋದಕ್ಕೆ
ಸಿಟ್ಟಾದವರ ಕೈಗೆ ಸಿಕ್ಕದ ಹಾಗೆ
ಓಡಿ
ಬಚ್ಚಿಟ್ಟುಕೊಳ್ಳೋದಕ್ಕೆ.

ದಿಕ್ಕು

In ನೀಲುಗಳು, ಪದ್ಯ on October 31, 2007 at 3:26 pm

ತಲೆಯಲ್ಲೇಳುವ ಅನುಮಾನ
ಮಾತಿನಲ್ಲಿ ಪ್ರಶ್ನೆಯಾಗುವುದು ಬಿಟ್ಟು
ಕಗ್ಗಂಟಾಗಿ ಎದೆಗಿಳಿದು
ಗಪ್ಪಾಗಿ ಬಿಗಿಯುವವರೆಗೂ
ಪದ್ಯ
ನುಡಿ ನಾಚಿಕೆಯಿಂದ ದೂರದಲ್ಲೇ ತುಟಿಕಚ್ಚಿ ನಿಲ್ಲುತ್ತದಲ್ಲ…!

ಪಲಾಯನ

In ನೀಲುಗಳು, ಪದ್ಯ on October 24, 2007 at 2:32 pm

ತಾನು ಬರೆದ ಬೃಹತ್‌ಗ್ರಂಥವನ್ನು
ಪಕ್ಕಕ್ಕೆ ಸರಿಸಿ
ನನ್ನನ್ನು ಹಿಡಿದು ಮುದ್ದಿಸುತ್ತಾನೆ ನನ್ನ ನಲ್ಲ;
ಅದರೊಳಗಿರುವ ಜೊಳ್ಳಿನ ಬಗ್ಗೆ
ನನ್ನ ಟೀಕೆಗೆ ಹೆದರಿಯೇ ಇರಬೇಕೆಂದು
ಅನುಮಾನಿಸಿದಾಗ
ಅವನ ಸಿಟ್ಟಿಗೆ ಪಾರವೇ ಇಲ್ಲ!

ಅಚ್ಚುಕಟ್ಟು

In ನೀಲುಗಳು, ಪದ್ಯ on October 11, 2007 at 6:59 am

ಬಿಸಿಲೇರುವವರೆಗೂ
ನನ್ನ ನಲ್ಲನ ತೋಳುಗಳ ನಡುವೆ
ಸರಸವಾಡಿ ಎದ್ದ ದಿನವೆಲ್ಲಾ ನಿದ್ದೆಗಣ್ಣು.
ಕೂದಲ ಜಿಡುಕಲ್ಲಿ ಆಲಸಿ ಬೆರಳು.
ಬಾಚಿ ಬಿಗಿದು ಕಟ್ಟಿದ ಕೂದಲ
ಏಕಾಂಗಿ ಗೆಳತಿ
ಏನೋ ನೆಪಮಾಡಿ ಸಿಡುಕುತ್ತಾಳೆ-
ಎದುರಾಡಲಿಲ್ಲ
ಎಂದಿನಂತೆ!

ಸಮರ್ಥನೆ

In ನೀಲುಗಳು, ಪದ್ಯ on September 30, 2007 at 12:35 pm

tonge-neelu.jpg

ಎರಡು ಕುರೋಸಾವಾ ನೀಲುಗಳು

In ಚಲನಚಿತ್ರ, ಚಿತ್ರಗಳು, ನೀಲುಗಳು, ಪದ್ಯ on September 26, 2007 at 10:03 pm

ಪ್ರಗತಿ

In ನೀಲುಗಳು, ಪದ್ಯ on September 24, 2007 at 6:53 am

ಬೆಳದಿಂಗಳಲ್ಲಿ ಬೆಳ್ಳಗೆ ನಿಂತ
ಅಪಾರ್ಟ್‌ಮೆಂಟಿನ ಎದುರಿನ ಹೆದ್ದಾರಿಯಲ್ಲಿ
ದಾರಿ ಕಾಣದೆ
ಎರಡು ಬಾತುಕೋಳಿಗಳ
ಚಟ್ಟೆಗಾಲಿನ ತಡಕಾಟ

ಅಂಕುರ

In ನೀಲುಗಳು, ಪದ್ಯ on September 17, 2007 at 6:41 am

ಯಾಕೆ
ಪದ್ಯ ಹುಟ್ಟುವ ಮೊದಲೇ
ಪದಗಳ ಕುಲಾವಿಯ ಸಡಗರ?
ಹುಟ್ಟಿದ ಮೇಲೋ-
ತೊದಲು, ಜೊಲ್ಲು,
ಅಕಸ್ಮಾತ್
ನಿದ್ದೆಯಲ್ಲೇ ನಗುವ ಚಮತ್ಕಾರ!

ನೇರನುಡಿ

In ನೀಲುಗಳು, ಪದ್ಯ on September 10, 2007 at 11:08 pm

ವಕ್ರೋಕ್ತಿ ಪಂಡಿತನಿಗೆ
ಒಳಗೊಳಗೇ
ಬಾಣದಂತೆ ನುಡಿವ ಹಂಬಲವಂತೆ;
ಅದಕ್ಕಾಗಿ ಮನಸ್ಸನ್ನು ಬಿಲ್ಲಂತೆ
ಬಗ್ಗಿಸುವುದು ತನ್ನಿಂದಾಗದು
ಎಂದು ಕೊಂಕಾಡಿ ನಕ್ಕನಂತೆ.

ಬೇಟ

In ನೀಲುಗಳು, ಪದ್ಯ on September 3, 2007 at 7:00 am

ಪದ್ಯದ ಬೇಟೆ ಆಡಿ
ಸೋತು ಹೂಂಕರಿಸುವ ಕವಿಯ ಬೆನ್ನ ಹಿಂದೆ
ಕುಲುಕುಲು ನಗುತ್ತಾ
ಚಿಗರೆಯಂತೆ ಕುಣಿವ
ಪದ್ಯದ
ಕ್ರೌರ್ಯ ಮತ್ತು ಉಪಟಳ
ಹಾಸ್ಯ ಮೀರಿದ ವಾಸ್ತವ.

ಗೆಳೆಯ

In ನೀಲುಗಳು, ಪದ್ಯ on August 29, 2007 at 6:54 am

ತುಂಬ ದಿನದ ಮೇಲೆ
ಎಲ್ಲೋ ಸಿಕ್ಕ ನನ್ನ ನಲ್ಲನ ಕ್ಷೌರಿಕ-
ನಲ್ಲನ ಉದ್ದಗೂದಲಿನ ಸೊಗಸುಗಾರಿಕೆ
ನೋಡಿಯೂ ನೋಡದವನಂತೆ
ಹೇಗಿದ್ದೀರೆಂದು ಮಾತ್ರ ವಿಚಾರಿಸಿ
ಬೀಳ್ಕೊಟ್ಟ
ದೊಡ್ಡ ಮನಸ್ಸಿನ ವಿಶಾಲತೆಯಲ್ಲಿ.

ಅವತಾರ

In ನೀಲುಗಳು, ಪದ್ಯ on August 20, 2007 at 6:40 am

ಕೊಲೆಯ ಕತೆ ಹೇಳಿ ಮೈ ನಡುಗಿಸಿ
ನಡುರಾತ್ರಿ ಮಾಯವಾಗುವ ನಲ್ಲ
ಮುಂಜಾವದ ಕನಸಲ್ಲಿ ಕಾಣಿಸಿಕೊಂಡು
ನಾಚಿಕೆ ಬಿಟ್ಟು ತಬ್ಬುವುದು
ಆಕಸ್ಮಿಕವಲ್ಲ
ಅವನ ಇನ್ನೊಂದು ಮಗ್ಗುಲು ಅಷ್ಟೆ.

ಹೂತಿದ್ದು

In ನೀಲುಗಳು, ಪದ್ಯ on August 16, 2007 at 10:26 pm

ಸಂದಣಿಯಲ್ಲೆಲ್ಲೋ
ಅಕಸ್ಮಾತ್ ಕಿವಿಗೆ ಬಿದ್ದ
ಯಾರದೋ ತುಂಡು ಮಾತು
ಹತ್ತಾರು ವರ್ಷದ ಮೇಲೆ ಧಿಗ್ಗನೆ ಅರ್ಥ ಹೊಳೆಸಿ
ದಿನವಹಿ ಮಾತುಗಳನ್ನು
ಕರುಣೆಯಲ್ಲಿ ತೊಳೆಯುತ್ತದೆ.

ಮುಕ್ತಾಯ

In ನೀಲುಗಳು, ಪದ್ಯ on August 7, 2007 at 10:31 pm

“ಕಾಲಚಕ್ರ ಉರುಳಿದಂತೆ
ಬದುಕಲ್ಲಿ ಬಂದದ್ದು ಹೋಗುತ್ತದೆ,
ಹೋದದ್ದು ಬರುತ್ತದೆ”
ಎಂಬ ಅವನ ಉಪದೇಶ ಕೇಳಿ
-”ಆ ಚಕ್ರದ ನಡು ಎಲ್ಲಿದೆ?”
-”ಯೌವ್ವನ ಯಾವಾಗ ಮರಳತ್ತೆ?”
ಎಂದೆಲ್ಲಾ ಅವನನ್ನು ಮುದ್ದಿಸಿ
ಚರ್ಚೆಯನ್ನೇ ನಾಚಿಸಿಬಿಟ್ಟಳು ತುಂಟಿ.

ಗೋಡೆ

In ನೀಲುಗಳು, ಪದ್ಯ on July 27, 2007 at 7:02 am

ಕಿವಿಯಲ್ಲಿ ಐಪಾಡ್
ಬೆಳೆದವನ ಪಕ್ಕದಲ್ಲೇ
ಗಳಗಳ ಅತ್ತರೂ ಅವನು
ನಿಶ್ಚಿಂತ…

ನೆಪ

In ನೀಲುಗಳು, ಪದ್ಯ on July 25, 2007 at 6:47 am

ಹಾದರಕ್ಕಿಳಿದ ಗಂಡನ ಕತ್ತಿನಪಟ್ಟಿ
ನನ್ನ ಮುಷ್ಟಿಯಲ್ಲಿ ಕೊಸರುವಾಗ
“ಮಹಾಭಾರತದಲ್ಲೇ ಹಾದರವಿದೆ…” ಎಂಬ ಅವನ
ಒಡಕು ದನಿಯ ಸಣ್ಣ ಮಾತು
ನನ್ನ ಮುಟ್ಟದೆ
ಅಷ್ಟು ದೂರ ನಡುಗಾಳಿಯಲ್ಲಿ
ತತ್ತರಿಸಿತು.

ಗಂಡಾಂತರ

In ನೀಲುಗಳು, ಪದ್ಯ on July 20, 2007 at 6:54 am

ಮರ ಕಡಿದು
ನೆಟ್ಟ ಲೈಟ್‌ ಕಂಬದ ತುದಿಯಲ್ಲಿ
ಎರಡು ಮರಿ ಹಕ್ಕಿಗಳು
ಕೊಕ್ಕಿಗೆ ಕೊಕ್ಕು ತಿಕ್ಕುತ್ತಿದ್ದವು
ನಿರಂತರ ಪ್ರೇಮದ ಮುಗ್ಧತೆಯಲ್ಲಿ.

ಮಾರ್ಪಾಡು

In ನೀಲುಗಳು, ಪದ್ಯ on July 17, 2007 at 9:45 pm

ರೈಲು ಹೊರಟಾಗ
ಚಿಲಿಪಿಲಿ ನಗುವಿನ ಗೆಳತಿಯರು-
ತಮ್ಮ ಊರು ಬಂದಾಗ
ಮೌನ ತೊಟ್ಟು ಇಳಿದರೆ
ಕರೆದೊಯ್ಯಲು ಬಂದ ಗಂಡಂದಿರ ದನಿ ಮಾತ್ರ
ರೈಲಿನ ಶಿಳ್ಳೆಯ ಜತೆ
ಜಗಳಕ್ಕಿಳಿಯಿತು.

ಜೀವನೀತಿ

In ನೀಲುಗಳು, ಪದ್ಯ on July 10, 2007 at 9:42 pm

ಚಿಗುರು ಮೀಸೆ, ಎಳೆ ಮೊಲೆಗಳ ಕೌಮಾರ್ಯ
ಮೋಹ ಹಾಗು ಕಾಮದ ಕುರುಡಿಂದ
ಹುಚ್ಚಾಗದೆ ಹೋದರೆ

ಯವ್ವನದ ಸೊಕ್ಕು
ದೇಶ ಹಾಗು ನೆಲದ, ಆದರ್ಶ ಮತ್ತು ನಿರಾಶೆಯ
ಕಾಟಕ್ಕೆ ಕಂಗೆಡದೇ ಹೋದರೆ

ನಡುವಯಸ್ಸಿನ ಬಿರುಸಲ್ಲೇ
ಜಪಮಣಿ-ಪಾರಮಾರ್ಥ ಸುತ್ತಿಕೊಳ್ಳುವುದನ್ನು
ತಪ್ಪಿಸಲಾದೀತೆ?

ಪೋಲಿ ಭಜನೆ

In ನೀಲುಗಳು, ಪದ್ಯ on July 5, 2007 at 10:43 pm

ಸಂತ ಕವಿಯ
ಪೋಲಿ ಪದ್ಯದ ಸೊಲ್ಲುಗಳೆಲ್ಲಾ
ಭಜನೆಯಂತಿದೆ ಎಂಬ ಪೋಲಿಗಳ,
ಪೋಲಿಯಾಗಿದೆ ಎಂಬ ಭಕ್ತಾದಿಗಳ
ಚೀತ್ಕಾರ-
ಸಂತ ಕವಿಯ ಗಂಟು ಮುಖದಲ್ಲಿ
ನಗುವಿನ ಸಣ್ಣ ಗೆರೆ ಎಬ್ಬಿಸಿದ್ದು ನೋಡಿದಿರ?

ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

In ನೀಲುಗಳು, ಪದ್ಯ, ಪುಸ್ತಕ on June 26, 2007 at 7:50 pm

ಜಾಣ ಜಾಣೆಯರ “ಲಂಕೇಶ್ ಪತ್ರಿಕೆ”ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! Read the rest of this entry »

ನೆರಳು

In ನೀಲುಗಳು, ಪದ್ಯ on June 15, 2007 at 2:12 pm

ನನ್ನ ಬಳುಕದ ಮನಸ್ಸಿನ ಮೇಲೆ ನಿನ್ನ ನೆರಳು
ನೆರಳಲ್ಲೂ ಕೆಂಪು ಹೂ
ಗಿಡದ ಚಿಗುರು.
ನಿನ್ನ ತೊನೆಯುವ ಮೈ ಮೇಲೆ ನನ್ನ ನೆರಳು
ತೇವದಲ್ಲಿ
ಮಣ್ಣುಳ
ಜಿಗಣೆ
ಇರುವೆಗೂಡು.

ಡೌಲು

In ನೀಲುಗಳು, ಪದ್ಯ on June 14, 2007 at 8:42 pm

ನನ್ನ ಚಂದದ ತುಟಿಗಳನ್ನು
ನೋಡಲು ನಿನಗೆ
ಡೌಲಿಗಿಂತ ನಾಚಿಕೆಯಾಗುವುದೇ
ನನಗೆ ಇಷ್ಟ.
ಆದರೆ ನಾಚಿಕೆ ಮುಚ್ಚಲು ಹೋಗಿ ನೀನು
ತುಟಿಬಿಗಿದು ಡೌಲನ್ನೇ ಮೆರೆಸುತ್ತೀಯ!

ತಾಳಬದ್ಧ

In ನೀಲುಗಳು, ಪದ್ಯ on June 13, 2007 at 10:19 pm

“ನನ್ನ ಕನಸಿನ ಪಕಳೆಯಲಿ ನೀ ನಿದ್ದೆ ಮಾಡುವ ಹುಡುಗನಂತೆ
ನಿನ್ನ ಕನಸಿನ ನೆರಿಗೆಯಲಿ ನಾ ಸುತ್ತಿ ಅಲೆಯುವ ಹುಚ್ಚಿಯಂತೆ”

ಎಷ್ಟು ತಾಳಬದ್ಧವಾದರೇನು ಬಂತು-
ನನ್ನ ಕನಸಲ್ಲಿ ನಿನ್ನ ಉಡಾಫೆ
ನಿನ್ನ ಕನಸಲ್ಲಿ ನನ್ನ ಮಗ್ನತೆ
ಗೊತ್ತಾಗದ ಮೇಲೆ!

ಮದ್ದು

In ನೀಲುಗಳು, ಪದ್ಯ on June 10, 2007 at 8:10 am

ನಿನ್ನ ಕುರುಡಿಗೆ
ನನ್ನ ಸೊಂಟ, ಎದೆ, ತುಟಿ, ಕಣ್ಣು, ಹುಬ್ಬು, ಹೆರಳು
ಇವುಗಳದೇ ಸಂಭ್ರಮ

ನನ್ನ ದಿಟ್ಟ ಹೆಜ್ಜೆ ನಡುವಿನ ಅನುಮಾನ
ಮತ್ತು ಗಟ್ಟಿ ದನಿಯಾಳದ ನಡುಕ
ನಿನ್ನ ಸಂಭ್ರಮಕ್ಕೆ ಮದ್ದರೆಯುತ್ತವೆ
ಮೌನವಾಗಿ.

ಮದುವೆ

In ನೀಲುಗಳು, ಪದ್ಯ on June 7, 2007 at 3:22 pm

ಮಳೆಗೆ ಹಿಡಿದ ಕೊಡೆಯ ನೆರಳು
ಶಲ್ಯವಿಳಿದ ನರಿಯ ಹೆಗಲು
ಗೆಜ್ಜೆತೊಟ್ಟ ಕಾಗೆ ಕಾಲು
ಹೊಳೆವ ಹನಿಯ ತೋರಣ
ದುಗುಡ ಕೇಕೆ ದಿಬ್ಬಣ

ಸವಾಲು

In ನೀಲುಗಳು, ಪದ್ಯ on June 6, 2007 at 11:24 pm

ಹೇಳೊ ಹುಡುಗಾ-
ಒಣಗನಸಿನ ಬಣವೆಯಲ್ಲಿ
ಹುಡುಕುವೆಯಾ ಕಳೆದ ಹಸಿರು?

ಇಲ್ಲಿ ಉತ್ತರಕ್ಕೆ ತಿರುಗಿ
ಕಾದ ಸೂಜಿ
ಗಲ್ಲು ಮನಸು!