ಬಾಣಲೆ ಬೆಂಕಿ

ಕರ್ನಾಟಕದ “ವಚನಭ್ರಷ್ಟತೆ”, “ಮಾನ-ಅವಮಾನ”, “ಗೌರವ-ಅಗೌರವ” ಗಳ ಹುಡುಗಾಟದ ಅಭದ್ರತೆಯಿಂದ ನಾನು ನೇರ ಬಂದಿಳಿದದ್ದು ಆಸ್ಟ್ರೇಲಿಯಾದ ಚುನಾವಣಾ ಪ್ರಚಾರದ ಕೂಗಾಟ, ಹಾರಾಟದ ನಡುವಿಗೆ.

ಒಣ ತಾತ್ವಿಕತೆ, ಹಸಿ ಸುಳ್ಳುಗಳ್ಳಿಂದ ತುಂಬಿ ಹೋಗಿರುವ ಕರ್ನಾಟಕದ ರಾಜಕೀಯ ಭಾಷೆಯನ್ನು ಕೇಳಿ ಏನೋ-ಎಲ್ಲೋ-ಯಾರೋ-ಯಾರಿಗೋ ಮಾತಾಡುತ್ತಿದ್ದಾರೆ ಅನಿಸಿತ್ತು. ಇದು ಮಾಧ್ಯಮಗಳ ತುಂಡಾಟ ಇರಬಹುದೆನ್ನುವ ಗುಮಾನಿಯೂ ಇಲ್ಲದಿಲ್ಲ. ಇದೆಲ್ಲವನ್ನು ರಾಜಕೀಯ ಎಂದು ಕರೆಯುವುದು ಕೂಡ ಸರಿಯಲ್ಲ. ರಾಜಕೀಯದ ಘನತೆಯನ್ನು ರಾಜಕಾರಣಿಗಳಿಗೆ ತಿಳಿಸಿಕೊಡುವ ಮಾರ್ಗ ಜನಕ್ಕಿದೆಯೆ ಎಂದು ಯೋಚಿಸುವಂತಾಯಿತು. ಕರ್ನಾಟಕದ ಪ್ರಜಾತಂತ್ರದಲ್ಲಿ ಇನ್ನೂ ಪ್ರಬಲವಾಗಿರುವ ಫ್ಯೂಡಲ್ ವ್ಯವಸ್ಥೆ ಬೇಡವೆಂದರೂ ಕಣ್ಣಿಗೆ ರಾಚುತ್ತದೆ. ದೊಡ್ಡ-ದೊಡ್ಡ ಹಾರಗಳು, ದೊಡ್ಡ-ದೊಡ್ಡ ಸಿಂಹಾಸನದಂಥ ಕುರ್ಚಿಗಳು, ದೊಡ್ಡ-ದೊಡ್ಡ ಚೇಲಾಗಳ ಗುಂಪು, ದೊಡ್ಡ-ದೊಡ್ಡ ಮಾನ-ಅವಮಾನದ ಮಾತುಗಳು. ಇವೆಲ್ಲವನ್ನು ಹೇಸಿಗೆಯಿಂದ ನೋಡಿ ಪ್ರಯೋಜನವಿಲ್ಲ. ಇವೆಲ್ಲಾ ಜನತೆಯ ಮನಸ್ಸಿನ ಮೇಲೆ ಪ್ರಭಾವ ಬೀರುವ ಕ್ರಿಯಾಶೀಲ ಕುರುಹುಗಳು. “ಪ್ರಜಾತಂತ್ರ” ಎಂದುಕೊಳ್ಳುವ ನಮ್ಮ ವ್ಯವಸ್ಥೆಯಲ್ಲಿ, ನಮ್ಮ ಜನರ ಸುಪ್ತಪ್ರಜ್ಞೆಗೆ ಸಲ್ಲುವಂಥ ಆಟಗಳು. ಹೊರ ಜಗತ್ತಿನ ತವಕ-ತಲ್ಲಣಗಳನ್ನು, ಆಸೆ-ಭದ್ರತೆಗಳ ಹಾತೊರೆಯುವಿಕೆಯನ್ನು ಒಳಮನಸ್ಸಲ್ಲಿ ಸೂಕ್ಷ್ಮವಾಗಿ ತಣಿಸಲು ಹವಣಿಸುವ ಪ್ರಯತ್ನಗಳು. ಎಷ್ಟೇ ಕುಟಿಲವಾಗಿದ್ದರೂ ಕೂಡ ಅವು ನಿಜ, ವಾಸ್ತವ ಎಂದು ಗೊತ್ತಾಗಲು ಹೆಚ್ಚು ಶ್ರಮಬೇಕಾಗುವುದಿಲ್ಲ.

ಇನ್ನು ಆಸ್ಟ್ರೇಲಿಯಾದ ರಾಜಕೀಯದಲ್ಲಿ ಎಲ್ಲ ತಾತ್ವಿಕತೆಗಳನ್ನು ಮೂಲೆಗೆ ತಳ್ಳಿರುವುದು ಬೇಡವೆಂದರೂ ಕಣ್ಣಿಗೆ ರಾಚುತ್ತದೆ. ರಾಶಿ ರಾಶಿ ಸುಳ್ಳು ಹೇಳಿ ಸಿಕ್ಕಿಬಿದ್ದಿರುವ ಈ ಸರ್ಕಾರ ಯಾವ ಮುಖದಿಂದ ಜನರನ್ನು ವೋಟು ಕೇಳೀತು ಎಂದು ಅಚ್ಚರಿಪಡುವುದು ಮುಗ್ಧತೆ ಅನಿಸುತ್ತದೆ. ಈ ಸರ್ಕಾರ ಆಸ್ಟ್ರೇಲಿಯಾದ ಆದಿವಾಸಿಗಳನ್ನು, ಅಂಗವಿಕಲರನ್ನು, ವಯೋವೃದ್ಧರನ್ನು, ಮಕ್ಕಳನ್ನು, ಬಡವರನ್ನು, ನಿರಾಶ್ರಿತರನ್ನು ನಡೆಸಿಕೊಂಡ ರೀತಿ ಎಂಥ ಕಲ್ಲೆದೆಯವರನ್ನೂ ನಾಚಿಸುವಂಥದು. ಅದಾವುದೂ ಈ ಚುನಾವಣಾ ಮಾತುಕತೆಗಳಲ್ಲಿ ಸುಳಿಯುತ್ತಿಲ್ಲ. ಮನೆ ಕೊಳ್ಳಲು ಸಹಾಯವಾಗುವಂಥ ಪಾಲಿಸಿ ಯಾರು ಮುಂದೊಡ್ಡುತ್ತಾರೆ, ವೇತನ ಹೆಚ್ಚುವಂಥ ಪಾಲಿಸಿ ಯಾರು ಮುಂದೊಡ್ಡುತ್ತಾರೆ ಎಂಬಂಥ ಒಂದೆರಡು ಕ್ಷುಲ್ಲಕ ವಿಷಯಗಳೇ ಮಹತ್ತರವಾಗಿಬಿಟ್ಟಿದೆ. ನಾಡಿನ ಒಳಗಿಗೆ ಹಿಡಿದಿರುವ ಅನೈತಿಕ ಒರಲೆಯ ಬಗ್ಗೆ ಅನುಕೂಲಕರ ನಿರ್ಲಕ್ಷ್ಯವನ್ನು ಗಮನಿಸಿದರೆ ವಾಕರಿಕೆಯಾಗುತ್ತದೆ. ಇರುವ ಎರಡು ಮುಖ್ಯ ಪಾರ್ಟಿಗಳು ಒಂದೇ ಬಗೆಯ ಮಾತಾಡುತ್ತಿರುವುದು ವಿರೋಧ ಪಕ್ಷದ ನರಹೀನತೆಯನ್ನು ಜಗಜ್ಜಾಹೀರು ಮಾಡಿದೆ.

ರಾಜಕೀಯ ಯಾವಾಗಲೂ ಎಲ್ಲ ಕಡೆಯೂ ಹೀಗೆಯೆ ಎಂಬ ಒಣನಿಲುವು ತಳೆಯಲಾದೀತೆ? ನಾವು ಯಾವಾಗಲೂ ಹೀಗೇ ಎಂಬುದನ್ನು ಹತಾಶರು ಇನ್ನೊಂದು ರೀತಿಯಲ್ಲಿ ಹೇಳಿದಂತಲ್ಲವೆ ಅದು?

ಇರಲಿ, ಎಲ್ಲ ಬಿಟ್ಟು ನನ್ನೆದುರಿಗಿರುವ ಬೇಸಿಗೆಯಲ್ಲಿ ಒಂದಷ್ಟು ಅಲೆದಾಡಬೇಕು. ಈ ಹಿಂದೆ ಹೋಗಿರದ, “ಅಲ್ಲೇನಿದೆ” ಎಂದು ಯಾರೂ ಹೋಗದ ಕಡೆಯೆಲ್ಲಾ ಅಲೆಯಬೇಕು. ಅಲೆದಾಡಿ ಹೊಸ ಜನರನ್ನು ಮಾತಾಡಿಸಬೇಕು ಎಂದು ಹುರಿದುಂಬಿಸಿಕೊಳ್ಳುತ್ತೇನೆ.

Advertisements

2 thoughts on “ಬಾಣಲೆ ಬೆಂಕಿ

Add yours

 1. I believe there’s a big difference between what’s happening in Karnataka to what’s happening in Australia though.

  In Australia, the political parties are concentrating on issues that are important to most of the electorate (may be at the cost of weaker sections). I don’t believe that’s the case in Karnataka.

  I hope you write more about Australian politics. We don’t get to read much of that in India, especially in Kannada.

  Regards.

 2. ನೀವು ಹೇಳುವುದು ಸರಿ, ವ್ಯತ್ಯಾಸವಿದೆ. ಎರಡು ರಾಜಕೀಯದ ಆಟಗಳ ಹಿಂದಿರುವ ಡ್ರೈವ್‌ಗಳು ಭಿನ್ನ.
  ನಾವಿನ್ನೂ ನೈತಿಕತೆ ಆಧಾರಿತ ರಾಜಕೀಯದ ಸೋಗಿನಲ್ಲಿದ್ದರೆ, ಆಸ್ಟ್ರೇಲಿಯಾದಲ್ಲಿ ಅದನ್ನು ಮರೆತು ಮುನ್ನುಗ್ಗುತ್ತಿದ್ದಾರಲ್ಲ ಎನ್ನುವುದೇ ನನ್ನ ಅಚ್ಚರಿ.
  ರಾಜಕೀಯವನ್ನು ನೈತಿಕತೆ ನಡೆಸಬೇಕೇ ಹೊರತು ಅದೇ ಪ್ರಣಾಳಿಕೆ ಆಗಬಾರದು. ಇಶ್ಯೂ ಆಧಾರಿತ ರಾಜಕೀಯವನ್ನೂ ಕೂಡ ಇಂದಿನ ಮಾಧ್ಯಮಗಳ ಭರಾಟೆಯಲ್ಲಿ ದಿಕ್ಕುತಪ್ಪಿಸುವುದು ನಡೆದಿದೆಯಲ್ಲ, ಅದನ್ನು ಹೇಗೆ ಇದಿರುಸುವುದು ಎಂದು ನನ್ನ ಯೋಚನೆ.
  ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

Up ↑

%d bloggers like this: