ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು

ಪ್ರಚಾರಕ್ಕೆ ಹಲವು ದಾರಿಗಳನ್ನು ಬಹುಪಾಲು ಎಲ್ಲ ಧರ್ಮಗಳೂ ಕಂಡುಕೊಂಡಿದೆ. ಇದು ಹರಡುತ್ತಿರುವ ಧರ್ಮಕ್ಕೆ ಮಾತ್ರವಲ್ಲ ಬೇರು ಬಿಟ್ಟ ಧರ್ಮಗಳಿಗೂ ಅನ್ವಯಿಸುವ ಮಾತು. ಏಕೆಂದರೆ ಧರ್ಮ ಪ್ರಚಾರ ಅನ್ನುವುದು ನಿರಂತರ ನಡೆಯಬೇಕಾದ ಕೆಲಸ.  ಬಾಲ್ಯ, ಕೌಮಾರ್ಯ, ಯೌವ್ವನದಲ್ಲಿರುವವರಿಗೆ ಇದು ಸದಾ ನಡೆಯಬೇಕಾದ ಶಿಕ್ಷಣ. ಇಲ್ಲದಿದ್ದರೆ ಧರ್ಮ ಅದರ ಸುತ್ತಲಿನ ನಂಬಿಕೆ ಮತ್ತು ಸಂಸ್ಥೆಗಳ ಉಳಿವಿಗೆ ತೊಡರಾಗುತ್ತದೆ. ವಿಶ್ವಾಸದ ಮೇಲೆ ಹೆಚ್ಚು ಅವಲಂಬಿಸುವ ಹಾಗು ಸುಲಭದಲ್ಲಿ ಯಾವುದನ್ನೂ ನಂಬದ ಮನಸ್ಸಿಗೆ ನಂಬಿಕೆ ಕಲಿಸಬೇಕು. ಇದು ಮೊದಲು. ಕಲಿಸುವುದು ಕಷ್ಟವಾದರೆ ನಂಬುವಂತೆ ದಿಗಿಲು ಮೂಡಿಸಬೇಕು. ಅದೂ ನಡೆಯದಿದ್ದರೆ ನಂಬಿಕೆಯನ್ನು ನೈತಿಕ ಪ್ರಶ್ನೆ ಮಾಡಬೇಕು. ನೈತಿಕ ಪ್ರಶ್ನೆ ಮಾಡಿದಾಗ ಎಂತ ಬಲವಾದ ಮನಸ್ಸೂ ಕೂಡ ಬಗ್ಗುವುದರಲ್ಲಿ ಸಂಶಯವಿಲ್ಲ.
ಧರ್ಮಪ್ರಚಾರಕ್ಕೆ ಇರುವ ಹಲವು ಸಾಧನಗಳಲ್ಲಿ ಬಹುಶಃ ಅತಿ ಮುಖ್ಯವಾದ ಮತ್ತು ಯಶಸ್ವಿಯಾದ ಮಾರ್ಗ ಸಂಗೀತ ಕಲಾಮಾಧ್ಯಮ. ಧರ್ಮದ ಪ್ರಚಾರದಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ಕಲಾ ಮಾಧ್ಯಮ ಸಂಗೀತವೇ. ಕಾವ್ಯ, ನಾಟಕ, ಚಲನಚಿತ್ರಗಳೂ ಬಳಕೆಯಾಗಿವೆ. ಆದರೆ ಸಂಗೀತ ತುಂಬಾ ಹಿಂದಿನಿಂದ ಇಂದಿನವರೆಗೂ ಸುಲಭದಲ್ಲಿ ದಕ್ಕುವ ಮಾಧ್ಯಮ. ಧರ್ಮ ಪ್ರಚಾರಕ್ಕೆ ಸಂಗೀತದ ಬಳಕೆಯಾದ್ದರಿಂದ ಸಂಗೀತ ಬೆಳೆಯಿತು ಎಂಬ ಮಾತೂ ಕೇಳಿರುತ್ತೇವೆ. ಆದರೆ ಸಂಗೀತ ಧರ್ಮಮಯವಾಗಿದ್ದು ಕೂಡ ಅದರ ಇನ್ನೊಂದು ಮುಖ ಎಂದು ಹೇಳುವವರೂ ಇದ್ದಾರೆ.ಎರಡನೆಯದಾಗಿ, ದೇವಸ್ಥಾನವೆಂಬ ಸಂಸ್ಥೆ ಮನುಷ್ಯರಲ್ಲಿ ಧರ್ಮವನ್ನು ಪ್ರಚುರಪಡಿಸಲು, ನಂಬಿಕೆಯನ್ನು ಧೃಡೀಕರಿಸಲು ಬಹು ದೊಡ್ಡ ಸಾಮುದಾಯಿಕ ಕೆಲಸ ಮಾಡುತ್ತವೆ. ಹಿಂದೆ ದೇವಾಲಯಗಳು ಸಮುದಾಯದ ಅಂತರಂಗವನ್ನು ಹಿಡಿದಿಡಲು, ಅಲ್ಲಾಡಿಸಲು ಬಳಕೆಯಾಗುತ್ತಿತ್ತಂತೆ. ದೇವಾಲಯಗಳ ಹಾಳುಗೆಡಹಿದ ಚರಿತ್ರೆಯ ಪುಟಗಳಿಂದ ಇದನ್ನು ನೀವು ಅರಿಯಬಹುದು. ಹಾಗೆಯೇ  ಇವತ್ತಿಗೂ ದೇವಾಲಯಗಳ ಆ ಕೆಲಸ ಅವಿರತವಾಗಿ, ಯಶಸ್ವಿಯಾಗಿ ನಡೆಯುತ್ತಲೇ ಬಂದಿದೆ.
ನಂಬಿಕೆ ಜಡ್ಡು ಹಿಡಿಯಕೂಡದು. ನಂಬಿದವರಿಗೆ ತಮ್ಮ ನಂಬಿಕೆಯ ಬಗ್ಗೆ ಸದಾ ಅರಿವಿರಬೇಕು. ಇಲ್ಲದಿದ್ದರೆ ಆ ನಂಬಿಕೆಯಿಂದ ಧರ್ಮಕ್ಕೆ ಹೆಚ್ಚೇನೂ ಲಾಭವಿಲ್ಲ. ಜಡ್ಡು ಹಿಡಿದ ನಂಬಿಕೆಯನ್ನು ಎಚ್ಚರಿಸಲು, ಶಾಕ್ ಟ್ರೀಟ್‌ಮೆಂಟಿನ ಹಾಗೆ ಪವಾಡಗಳ ಬಳಕೆ ತುಂಬಾ ಮುಖ್ಯ. ಪವಾಡಗಳ ಚಮತ್ಕಾರ ಮತ್ತು ನಾಟಕೀಯತೆ ಜಡ್ಡು ಹಿಡಿದ ಮನಸ್ಸಿನ ನಂಬಿಕೆಯನ್ನು ಎಚ್ಚರಿಸಿ ಚುರುಕಾಗಿಸುತ್ತದೆ ಹಾಗು ದೃಢೀಕರಿಸುತ್ತದೆ. ನವಯುಗದಲ್ಲಿ ಇದನ್ನು ತಮಾಷೆಯಾಗಿ ನೋಡಿದರೆ ಪ್ರಯೋಜನವಿಲ್ಲ. ಯಾಕೆಂದರೆ ಪವಾಡಗಳ ಚಮತ್ಕಾರಕ್ಕೆ ಮಾರುಹೋಗುವ ಮನಸ್ಸುಗಳನ್ನು ನೀವೂ ಭೇಟಿಮಾಡಿಯೇ ಇರುತ್ತೀರಿ. ಪವಾಡದ ಪ್ರಭಾವದ ಬಗ್ಗೆ ಸಂಶಯ ಬೇಡ.

ಇನ್ನು ಯಾತ್ರೆಯೆಂಬ ಸಾಮಾಜಿಕ ಚಟುವಟಿಕೆಯಿಂದ ಧರ್ಮಕ್ಕೆ ಹಲವು ಪ್ರಯೋಜನಗಳಿವೆ. ನಮ್ಮ ಮನೆಯಲ್ಲಿ ಮಾತ್ರವಲ್ಲ, ಊರಿನಲ್ಲಿ ಮಾತ್ರವಲ್ಲ ಬೇರೆ ಊರಗಳಲ್ಲೂ ನಮ್ಮ ನಂಬಿಕೆಗಳು ಪ್ರಚಲಿತದಲ್ಲಿರುವುದು ಖಾತ್ರಿಯಾಗುತ್ತದೆ. ಇದರಿಂದ ನಂಬಿಕೆ ಮತ್ತಷ್ಟು ಆಳಕ್ಕೆ ಬೇರೂರುವುದಲ್ಲದೆ ಹೆಚ್ಚು ಜನಪ್ರಿಯತೆ ಪಡೆಯಲು ಅನುಕೂಲವಾಗುತ್ತದೆ. ಈ ಅಂಗದಲ್ಲಿ ಈಗೀಗ ಚಲನಚಿತ್ರ ತಾರೆಯರು ತುಂಬಾ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಭಕ್ತಿಯಿಂದಲೋ ಅಥವಾ ಇನ್ನಾವುದೋ ಕಾರಣಕ್ಕೆ ತಾವು ಯಾತ್ರೆಗಳನ್ನು ಕೈಗೊಂಡು, ಆ ಕ್ಷೇತ್ರವನ್ನೋ, ದೇವಾಲಯವನ್ನೋ ಹೆಚ್ಚು ಜನಪ್ರಿಯಗೊಳಿಸುತ್ತಾರೆ. ಇದು ಧರ್ಮ ಪ್ರಚಾರಕ್ಕೆ ತುಂಬಾ ನೆರವು ನೀಡುತ್ತವೆ.

ಇವಿಷ್ಟು ಸ್ಥೂಲವಾಗಿ ಧರ್ಮಪ್ರಚಾರದ ಕೆಲವು ಸಾಧನಗಳು ಮತ್ತು ಅವು ನೆರವಾಗುವ ಬಗೆಗಳು.

ಇದನ್ನು ಓದಿದವರಿಗೆಲ್ಲಾ ದೈವಾನುಗ್ರಹ ಪ್ರಾಪ್ತವಾಗಲಿ ಎಂದು ಆ ಪರಮಾತ್ಮನಲ್ಲಿ ಕೋರುತ್ತೇನೆ.

Advertisements

One thought on “ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು

Add yours

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

Up ↑

%d bloggers like this: