ಭಾನುವಾರದ ಬೆಳಗಿನ ಮೌನ

ಭಾನುವಾರದ ಬೆಳಗಿನ ಮೌನ ನನಗೆ ಇಷ್ಟ. ನನಗಂತೂ ಭಾನುವಾರ ಎಲ್ಲ ಜಗ್ಗಾಟದ ದಿನಗಳ ನಡುವೆ ತಣ್ಣಗೆ ತೇಲುವ ನಡುಗಡ್ಡೆ.

ಶನಿವಾರದ ವೀಕೆಂಡ್ ಅಬ್ಬರಗಳು ಮುಗಿದಿದೆ. ಶುಕ್ರವಾರದ – ಕೆಲಸದ ಕಡೆಯ ದಿನದ – ಸಂತೋಷ ಕರಗಿದೆ. ಗುರುವಾರದ – ವೀಕೆಂಡ್ ಬಂತೆ – ಎಂಬ ಪ್ರಶ್ನ ಆಗಲೆ ಉತ್ತರವಾಗದೆ. ಬುಧವಾರದ ವೀಕೆಂಡ್ ಯಾವಗಪ್ಪ – ಹಿಂದಕ್ಕಾಗಿದೆ. ಮಂಗಳವಾರದ – ವೀಕೆಂಡಿನ ಕನಸು ನಿಜವಾ – ಎಂಬ ಅನುಮಾನ ನಿಜವಾಗಿದೆ. ಸೋಮವಾರದ – ಮತ್ತೆ ಶುರುವಾಯಿತಲ್ಲ-ದ ಬೇಸರ ಹೋದ ಶತಮಾನದ್ದು ಅನಿಸುತ್ತಿದೆ.

ಭಾನುವಾರದ ಬೆಳಗಿನ ಮೌನ ನನಗೆ ಇಷ್ಟ. ಆಗಲೇ ಇದನ್ನು ಬರೆಯುತ್ತಿದ್ದೇನೆ. ಇದು ನನ್ನ ಇಷ್ಟದ ಸವಿಯನ್ನು ಹೆಚ್ಚಿಸಿದೆ.

ದೂರದಲ್ಲಿ ನನ್ನ ಹಾಗೆ ಬೇಗ ಎಚ್ಚರವಾದ ಹಕ್ಕಿ ಯಾರನ್ನೋ ಕರೆಯುತ್ತಿದೆ. ಅಥವಾ ಭಾನುವಾರದ ಬೆಳಗಿನ ಮೌನ ಅದಕ್ಕೆ ಅಸಹನೀಯವಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

%d bloggers like this: