ಒಂದು ಕೆಟ್ಟ ದಾಸರ ಪದ

ಕೇಳೋ ಸಚ್ಚರಿತ, ಮನುಜಾ
ಧೃಡ ಭಕ್ತಿಯಿಂದಲಿ ಹರಿಯ ನೆನೆದರೆ ಪಡೆವ ಮೋಕ್ಷ ಸಾಕ್ಷಿ || ಮನುಜಾ
ಧೃಡ ಭಕ್ತಿಯಿಲ್ಲದೆ ಹರಿಯ ನೆನೆದರೆ ಪಡುವ ನರಕವೇ ಸಾಕ್ಷಿ || ಮನುಜಾ ಕೇಳೋ ಸಚ್ಚರಿತ

ಕನ್ಯಾದಾನವ ಮಾಡಿದವರಿಗೆ ಹೆಣ್ಣಿನ ಭೋಗವೇ ಸಾಕ್ಷಿ
ಕನ್ಯಾದಾನವ ಮಾಡದವರಿಗೆ ಹೆಣ್ಣಿನ ಕಾಟವೇ ಸಾಕ್ಷಿ || ಕೇಳೋ

ಪಂಕ್ತಿ ವಂಚನೆ ಮಾಡಿದವರಿಗೆ ಜನ್ಮರೋಗವೇ ಸಾಕ್ಷಿ
ಪಂಕ್ತಿ ವಂಚನೆ ಮಾಡದವರಿಗೆ ಪುತ್ರ ಭಾಗ್ಯವೇ ಸಾಕ್ಷಿ || ಕೇಳೋ

ಅನ್ನದಾನವ ಮಾಡಿದವರಿಗೆ ಉಣ್ಣುವ ಊಟವೇ ಸಾಕ್ಷಿ
ಅನ್ನದಾನವ ಮಾಡದವರಿಗೆ ಅನ್ನಕಳವುದೇ ಸಾಕ್ಷಿ || ಕೇಳೋ

ಆಡಿದ ಮಾತಿಗೆ ಹರಿಯೆ ಸಾಕ್ಷಿ ತೋಡಿದ ಬಾವಿಗೆ ಜಲವೇ ಸಾಕ್ಷಿ
ಮಾಡಿದ ಪಾಪಕೆ ಮನವೇ ಸಾಕ್ಷಿ ಸಾಟಿಗೆ ಪುರಂದರ ವಿಠಲನೇ ಸಾಕ್ಷಿ

ತಮಗೆ ಸರಿಕಾಣದ ಹಲವು ಲೋಕ ರೂಢಿಗಳನ್ನು ಟೀಕಿಸುವ ಪದಗಳನ್ನು ಪುರಂದರದಾಸರು ಬರೆದಿದ್ದಾರೆ. ಅಂತಹವುಗಳನ್ನು ಉದ್ಧರಿಸಿ ನಾವು ಅವರ ಮಹಿಮೆಯನ್ನು ಕೊಂಡಾಡುತ್ತೇವೆ. ಹಾಗೆಯೇ ಕೆಲವು ಕೆಟ್ಟ ಪದಗಳೂ ಇವೆ. ಅವನ್ನು ಗುರುತಿಸಿ ಹಾಗೆ ಯೋಚಿಸುವುದು ಸರಿಯಲ್ಲ ಎಂದು ಎಚ್ಚರಿಸಿಕೊಳ್ಳುವುದೂ ಮುಖ್ಯವೇ. ಅಂತಹ ಒಂದು ಪದ ಮೊನ್ನೆ ಕೇಳಿದೆ.

ಮೋಕ್ಷ/ಸ್ವರ್ಗ-ನರಕದ ಪ್ರತಿಮೆಗಳನ್ನು ಪುರಂದರ ದಾಸರು ಸಿಕ್ಕಾಪಟ್ಟೆ ಬಳಸುತ್ತಾರೆ. ದೇವರನ್ನು ವಿವರಿಸುವ/ಹೊಗಳುವ ಹಲವು ಸಾಲುಗಳನ್ನು ಬರೆದಿದ್ದಾರೆ. ಆದರೆ ಈ ಮೇಲಿನ ಪದ್ಯದಲ್ಲಿ ಹೆಣ್ಣಿನ ಬಗ್ಗೆ, ಜಾತಿಯ ಬಗ್ಗೆ ಅವರು ತಳೆವ ನಿಲುವು ಇಂದಿಗಲ್ಲ, ಅಂದಿಗಾದರೂ ಒಪ್ಪುತ್ತದೆಯೇ ಎಂಬ ಪ್ರಶ್ನೆ ಏಳುತ್ತದೆ.

ಇಲ್ಲಿ ಕನ್ಯಾದಾನದ ಬಗ್ಗೆ ಹೇಳುವ ಮೊದಲ ಸಾಲು ಒಳ್ಳೆಯ ಬಗೆಯಲ್ಲಿ ಹೇಗೆ ಅರ್ಥೈಸಿಕೊಳ್ಳುವುದು ಎಂದು ಯೋಚಿಸಿದೆ. ಎರಡನೆಯ ಸಾಲಂತೂ ಹೆಣ್ಣನ್ನು ನೋಡುವ ದೃಷ್ಟಿ ಆರೋಗ್ಯಕರವೇ ಅಲ್ಲ ಅನಿಸಿತು. ಇನ್ನು ಪಂಕ್ತಿ ವಂಚನೆಯ ಬಗ್ಗೆ ಯೋಚಿಸಿ ನೋಡಿ. ಪಂಕ್ತಿ ವಂಚನೆ ಅಂದರೇನು? ಯಾರು ಯಾರಿಗೆ ವಂಚನೆ ಮಾಡುತ್ತಿರುವುದು? ಅಂತಹವರಿಗೆ ಕಾದಿರುವುದು ಜನ್ಮರೋಗ(?) ಬೇರೆ! ಇನ್ನು ಪಂಕ್ತಿ ವಂಚನೆ ಮಾಡದವರಿಗೆ ಗಂಡು ಮಗು ಹುಟ್ಟುತದಂತೆ! ಅನ್ನದಾನದ ವಿಜೃಂಭಣೆ ಇರುವುದರಲ್ಲೇ ಕೊಂಚ ಸರಿಯಪ್ಪ ಅನ್ನಿಸುವಂತಹ ಸಾಲು.

ಇಂತಹ ಹಾಡುಗಳನ್ನು ಇಂದಿಗೂ ಹಾಡುವುದು ಕೇಳಿದಾಗ ಇವು ನಮಗೆ ಏನು ಹೇಳುತ್ತದೆ? ಮಕ್ಕಳು ಇದನ್ನು ಕೇಳಿದರೆ ಹೇಗೆ ಅರ್ಥೈಸಿಕೊಳ್ಳುತ್ತಾರೆ? ಇಂತಹ ಪದಗಳು ರೂಪಿಸುವ ಮನಸ್ಸು ಎಂತಹದಿರುತ್ತದೆ? ಸಣ್ಣವರಿಗೆ ಇದನ್ನು ಪುರಂದರದಾಸರ ಕಾಲಕ್ಕೆ ಹೊಂದಿಸಿಕೊಂಡು ನೋಡು ಎಂದು ಹೇಳುವುದು ಹೇಗೆ? ಅದು ಎಷ್ಟು ಸರಿ? ಅದೂ ಕೂಡ, ಅವರ ಜೀವನದ ಹಲವು ವಿವರಗಳನ್ನು ನೆನ್ನೆ ತಾನೆ ನಡೆದಿದ್ದು ಎನ್ನುವಂತೆ ಹೇಳುವಾಗ? ಪವಾಡ ಮತ್ತು ನಂಬಿಕೆಗಳನ್ನು ಚರಿತ್ರೆ ಎನ್ನುವಂತೆ ಹೇಳುವಾಗ?

ಇವುಗಳಿಂದಾಗುವ ಅಪಾಯಗಳೇನು ಎಂದು ತುಸುವಾದರೂ ಯೋಚಿಸುವುದು ಒಳ್ಳೆಯದು.

Advertisements

19 thoughts on “ಒಂದು ಕೆಟ್ಟ ದಾಸರ ಪದ

Add yours

 1. ಅನಿವಾಸಿ,
  ಹೊಗಳಿ ಬರೆವವರು ಸುಮಾರು ಜನ ಸಿಗುತ್ತಾರೆ ಬಿಡಿ. ವಿವೇಚಿಸಿ ಬರೆವವರು ಸಿಗುವುದು ಬಹಳ ಕಮ್ಮಿ. ನಿಮ್ಮ ಈ ಲೇಖನದ ವಿಶ್ಲೇಷಣೆ ಈ ಕಾರಣಕ್ಕಾಗಿಯೆ ಹಿಡಿಸಿತು. ನಾನೂ ದಾಸರ ಪದಗಳ ಅಭಿಮಾನಿ. ಆಗಿನ ಕಾಲಕ್ಕೆ, ಆಚಾರಗಳಿಗೆ ನೀವು ಉಲ್ಲೇಖಿಸಿರುವ ಪದಗಳು ಸರಿಹೋಗಿರಬಹುದು.. ಆದರೆ ಇವನ್ನು ಈಗಿನ ಹಾಡುಗಾರರು ಹಾಡುತ್ತಾರೆಯೆ? ಇವು ಹೆಚ್ಚಿಗೆ ಬಳಕೆಯಲ್ಲಿದ್ದ ಹಾಗೆ ಕಾಣೆ. ಏನೆ ಆಗಲಿ, ಕೇಳಿ ಸುಮ್ಮನಿರದೆ ಬರೆದಿದೀರಿ. ಅದು ನಮಗೆ ಬೇಕು.

 2. ಟೀನಾ-
  ಕಾಮೆಂಟಿಗೆ ಥ್ಯಾಂಕ್ಸ್.
  ಹೌದು ಈಗಲೂ ಹಾಡುತ್ತಾರೆ. ಅದೂ ಚೆನ್ನಾಗಿ ಬೇರೆ ಹಾಡುತ್ತಾರೆ 🙂 ಇದನ್ನು ಒಂದು ರಾಗಮಾಲಿಕೆಯಲ್ಲಿ ಹಾಡಿದ್ದು ಕೇಳಿದೆ.
  ಶೀರ್ಷಿಕೆಯಿಂದ ಹಿಡಿದು, ಈ ಹಾಡಿನ ಅರ್ಥಗಳ ಬಗ್ಗೆ ನಡೆದಿರುವ ಕೆಲವು ಮಾತುಕತೆಗೆ ಇಲ್ಲಿ ನೋಡಿ- http://www.sampada.net/blog/anivaasi/16/06/2008/9319

 3. ಉಫ್!!!
  ಓದಿ ಸುಸ್ತಾಗಿ ಹೋದೆ ಕಣ್ರಿ!!
  ಹ್ಯಾಗೇ ರೀಡಿಂಗು ಕೊಡಲಿ, ಹೆಚ್ಚಿನ ಪಕ್ಷ ಎಲ್ಲ ಓದುಗರಿಗೂ ಈ ಪದಗಳು ಇಷ್ಟ ಆಗಿಲ್ಲ ಅನ್ನೋದು ಸುಸ್ಪಷ್ಟವಾಯಿತು. ಒಳ್ಳೆಯ ಡಿಸ್ಕಶನ್. ಅಂದಹಾಗೆ ನೀವು ಸ್ಕೂಲಿನ ದಿನಗಳಲ್ಲಿ ಡಿಬೇಟರ್ ಆಗಿದ್ದಿರೇನು? 🙂 ಪ್ರತಿಯೊಂದು ಪ್ರಶ್ನೆಗೂ ಚೆನ್ನಾಗಿ ಉತ್ತರಿಸಿದೀರಿ!!

 4. “ಹೌದು ಈಗಲೂ ಹಾಡುತ್ತಾರೆ. ಅದೂ ಚೆನ್ನಾಗಿ ಬೇರೆ ಹಾಡುತ್ತಾರೆ 🙂 ಇದನ್ನು ಒಂದು ರಾಗಮಾಲಿಕೆಯಲ್ಲಿ ಹಾಡಿದ್ದು ಕೇಳಿದೆ.”

  ಹೌದ್ರಿ 🙂 ಮಾಂಡ್, ಕಾನಡ ಮತ್ತೆ ಕಾಪಿ ರಾಗಗಳಲ್ಲಿ ಹೇಳಿರುದನ್ನು ನಾನೂ ಕೇಳಿರುವೆ..

 5. I read your comments and dont agree on it. Any devotional song created by any of the DASA’s, there will be either historical brackground / story wherein the meaning of is hidden in it or it is told to get the vairagya for other people. First of all we should know who Purandara Dasa is and will he make such kind of mistakes? he is not an ordinary man like us to make mistakes, he is the avatar of narada himself. So please dont make any comments on any devotional songs of anybody.

 6. To tell something is bad is easy……………but to realise the truth is difficult. What is the era when purandara dasa wrote this is also equally important and you have to know what god, caste, man and woman means in hindu philosophy. It is not just physical meaning attached to these words that matter, but as a reader you have to understand the contextual meaning of these words. They represent a higher thought or philosophy. Man represents courage, strength,…….and woman represents love, care and affection. This doesn’t mean that the qualities mentioned for one is not applicable to other, but they are choosen to represent qualities that nature has defined. So my humble request is that please know the facts and then make a comment.

 7. ಗಾಯತ್ರಿಯವರೆ ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
  ರವೀಶರ ಕಾಮೆಂಟು ಓದಿದ್ದೆ. ಅದರಲ್ಲಿ ಹೊಸದಾಗಲೀ, ವಿಶೇಷವಾಗಲೀ ಏನೂ ಇಲ್ಲ. ಅದೇ ಚರ್ವಿತ ಚರ್ವಣ, ಆಧ್ಯಾತ್ಮಿಕ ಪಲಾಯನ!
  ನಾನು ಎಷ್ಟು ಕನ್ನಡ ಸಾಹಿತ್ಯ ಓದುತ್ತೇನೆ ಎಂದು ನಿಮಗೆ ಹೇಗೋ ಗೊತ್ತಾಗಿಬಿಟ್ಟಿರುವಂತಿದೆ 🙂 ಇರಲಿ, ನನಗೆ ನಿಲುಕಿದಲ್ಲಿಂದಲೇ ದಾಸರ ಪದವನ್ನು ಅರ್ಥೈಸಿ, ಪ್ರಶ್ನಿಸಿದ್ದೇನೆ ಎಂಬ ಅರಿವು ನನಗೆ ಇದೆ. ನಿಮಗೆ ದಾಸರ ಪರವಾಗಿ, ಈ ಪದ್ಯದಲ್ಲಿ ಅದ್ಭುತವಾದದ್ದು ಕಂಡಿದ್ದರೆ ತಿಳಿಸಿ.

 8. “kanyadana”da bagge neevu tumba besara madikondiddiri. Avaru hennannu neechvendu tiliyabedi, kanyadana madidavarige olley phala ide hennina bhoga endare neevu kama endu eke tiliyuttiri? hennu tayiyagi, sahodariyagi hagu hendatiyagi bere ritiyalli devaru kapaduttane endu adara artha. modern kaladalli kooda hennannu kadime endu haliyuvavaru idaare.aggina kaladalliye avaru ishtondu neethi helidare neevu ketta sahitya ennuvudu sariye?

  1. ಗಾಯತ್ರಿಯವರೆ,
   ನಾನು ‘ಭೋಗ’ ಎಂದರೆ ಕಾಮ ಎಂಬ ಒಂದೇ ಅರ್ಥ ಅಂದು ಕೊಂಡಿಲ್ಲ. ಆದರೆ, ಹೆಣ್ಣನ್ನು “ದಾನ” ಮಾಡುವ, “ಅನುಭವಿಸುವ” ವಸ್ತುವಾಗಿ ನೋಡಿದ್ದಾರೆ. ಇದನ್ನು ಆವತ್ತಿನ ನಿಲುವು ಎಂದು ತಿಪ್ಪೆ ಸಾರಿಸುವಂತಿಲ್ಲ. ಏಕೆಂದರೆ, ವಚನಕಾರರು ಬಂದು ಆಗಲೇ ಮುನ್ನೂರು ವರ್ಷದ ಮೇಲಾಗಿತ್ತು!
   ಇನ್ನು ‘ಪಂಕ್ತಿ ವಂಚನೆ” ಯನ್ನು ಹೇಗಾದರೂ ಸಮರ್ಥಿಸಿಕೊಳ್ಳಿ ಆದರೆ, ಅದನ್ನು ಮಾಡದವರಿಗೆ “ಪುತ್ರ” ಭಾಗ್ಯವಂತೆ. ಇಲ್ಲದಿದ್ದರೆ ಹೆಣ್ಣು ಹುಟ್ಟುವ ಶಾಪವೇ?!

   ಕೊನೆಯದಾಗಿ, ಪುರಂದರ ದಾಸರ ತಪ್ಪು ತೋರಿಸುವುದೊಂದೇ ಇಲ್ಲಿ ಮುಖ್ಯ ಅಲ್ಲ. ಇಂತಹ ಪದಗಳನ್ನು ಇಂದಿಗೂ ನಾವು ಹಾಡುವುದು ಎಷ್ಟು ಸರಿ ಎಂಬುದನ್ನು ನಾವು ಯೋಚಿಸಲೇ ಬೇಕು.

   ನಿಮ್ಮ ಆಸಕ್ತಿಗೆ ಥ್ಯಾಂಕ್ಸ್.

 9. ಗಾಯತ್ರಿಯವರೆ,
  ಕನ್ಯಾದಾನ ಎಂದರೆ ಹೆಣ್ಣು ಮಗುವಿನ ದಾನವಲ್ಲವೆ? “ಅನುಭವಿಸುವ” ಶಬ್ದ ಅಲ್ಲಿಲ್ಲ ಎಂದು ನನಗೂ ಗೊತ್ತು! ಅದಕ್ಕೆ ಅದನ್ನು ನಾನು ಕೋಟ್ಸಿನಲ್ಲಿ ಹಾಕಿರುವುದು. ಮೊದಲು ಕೊಂಚ ಓದಲು ಕಲಿಯಿರಿ.
  ಬಹುಶಃ ದಾಸರ ದಾಸರಾಗಿ ನಿಮಗೆ ಕುರುಡು ರೋಗ ಹಿಡಿದಂತಿದೆ. ಅಲ್ಲದೆ, ನೀವೇ ಹೆಚ್ಚೆಚ್ಚು ಓದಬೇಕಾಗಿದೆಯೇನೋ ಎಂದೂ ಅನಿಸುತ್ತಿದೆ.
  ಗುಡ್ ಬೈ.

  1. ಗಾಯತ್ರಿಯವರೆ,
   ನೀವೀಗ ಏನೇನೋ ಬಡಬಡಿಸುತ್ತಿದ್ದೀರ. ಚರ್ಚೆ ಆರೋಗ್ಯಕರವಾಗಿರಬೇಕು ಎಂಬುದು ನನ್ನ ಅನಿಸಿಕೆ ಕೂಡ – ಅದಕ್ಕೆ ಮೊದಲು ನಿಮ್ಮ ಕುರುಡುತನ ಹೋಗಬೇಕು – ಅದು ತುಂಬಾ ಅನಾರೋಗ್ಯಕರ.
   ವಂದನೆಗಳು.

 10. I happen to come across a mail in my inbox, after a year, about the comment that I had made in your blog. It might be irrelevant to comment here after any year. However, I find nothing wrong in expressing my point as you have asked me to answer your question. I am an atheist and prefer to view things with its practical and psychological point of view.
  If I tell you to do something that is against your nature, would you really agree to do it? No, you will do what you like to do. If I fill fear in your mind in the name of god and religion, you will do things that I say. You do it not because I asked you to do it, but instead you do it out of fear. God and devil are no different; they are the beautiful creation of human mind for a purpose. By carefully studying the growth of human civilization, it is very evident that to build a civilization you need order in the society. God and religion were used to establish order among people. Humans fear a lot about something that they don’t know or don’t understand. Even though they know there is no god, they don’t have the courage to say it. Reason, they are afraid and confused as they don’t know or can’t understand the secrets of the creation of the universe. Which till date nothing but a big question mark.
  Philosophy as one believes is not some stupid thing or fake. It is also a part of psychology where instead of logic, experiment and data, philosophy uses god, religion and fear of unknown to control and train human brain.
  Some people who stared preaching about god knew that there is no god and used the concept of god and religion to control people and push things that they believed will help to maintain order in the society, in-turn promoting the growth of the society. Many other, believed that god really existed and started preaching and practicing their own or existing religion blindly. Many went to an extent that they started telling that they saw god, god has appointed them as his messengers, etc. No doubt, many such believers of god have helped human beings to control their animal instinct and made humans civilized. It is also true that the same god and religion is used to cause harm to the same human society just for the sake of power and money.
  I really don’t know to which category does Sri Purandara Dasa belongs to – whether he preached values knowing that god is a creation of human brain or blindly believing in god. However, reading the history and studying his literature I can surely tell that his intensions were big – he wanted the help humans to live a happy and gracious life. He, through his literature, is trying to build a strong society based on some rules. Remember, no rule is invincible and perfect. It has its flip side. For example, the concept of “Democracy” is full of loopholes and false understanding of freedom. However, we are still practicing it. Why? Because we believe that change is possible. We very well know that it is not possible to nullify the disadvantages, but we try to regulate.
  I neither support nor criticize the poem, the author, or the people who sing it because criticism in no way will help to solve the problem and it spreads hatred. Since, it only escalates the tension and fails to give a constructive solution to solve the social problems. The comments here are the best example to tell that criticism will provoke people, which is of no use. Instead of barking at something, try to educate the people around you. Don’t point fingers and say that someone or something is bad. Instead, make them realize that your point is correct through proof. Remember, humans are no machines they are emotional beings. If you hit their emotions, they will react back sharply. If you make them realize, then they will respond to you. It might take time to make them realize, but it is more effective then criticism.
  Moreover, how can we say that our methods, techniques and thoughts are correct? Every method, technique and thoughts can be misused/misinterpreted to its best. When we ourselves are not perfect, how can we expect the world to be perfect? We humans have tried and tested hundreds of techniques and methods to bring a social order in society. Even today, we are learning and experimenting new ways to build a good society. Viewing the past through the prism of present will make things in the past look ugly. Even today, we are neither using science nor philosophy to build better society. As we are pointing fingers blaming others just to show prove that I am special and I am correct. Such people will cause more harm than good to the society.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

%d bloggers like this: