ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

ಭೈರಪ್ಪನ ಮೇಲೆ ನನಗಿರುವಂತೇ ಅಗಾಧ ಪ್ರೀತಿಯಿಂದ ಅವರು ಹೇಳೋದನ್ನ ನಂಬಿಕೊಂಡು ಅವರ ಲೇಖನವನ್ನು ಮನೆಯಲ್ಲಿ ಎಲ್ಲರಿಗೆ ಕಾಣೋ ಹಾಗೆ ಇಡಬೇಡಿ. ಕನಿಷ್ಟ ನಿಮ್ಮ ಮಕ್ಕಳ ಕೈಗೆ ಸಿಗದ ಹಾಗೆ ನೋಡಿಕೊಳ್ಳಿ. ಯಾಕೆಂದರೆ, ಅದನ್ನು ನೋಡಿಕೊಂಡು ಹೋಗಿ ನಿಮ್ಮ ಮಕ್ಕಳು ಪರೀಕ್ಷೆ ಬರೆದರೆ ಫೇಲ್ ಆಗೋ ಸಾಧ್ಯತೇನೇ ಹೆಚ್ಚು.

ಮೊನ್ನೆ ವಿಜಯ ಕರ್ನಾಟಕದಲ್ಲಿ ಭೈರಪ್ಪನವರ ಉದ್ದಾನ ಲೇಖನ ಬಂದಿತ್ತಲ್ಲ. ಅದರೊಳಗೆ ಕ್ರಿಶ್ಚಿಯಾನ್ಸನ್ನ ಝಾಡಿಸಿದ್ದಾರಲ್ಲ ಅದು. ಅಲ್ಲ, ಝಾಡಿಸಲಿ ಬಿಡಿ – ಮುಳ್ಳನ್ನು ಮುಳ್ಳಿಂದಲೇ ತೆಗೀಬೇಕು, eye for an eye, ಧರ್ಮಾಂಧತೆಗೆ ಧರ್ಮಾಂಧತೆಯೇ ಮದ್ದು ಅನ್ನೋರಲ್ವ ಇವರು. ಇವರು ಅವರನ್ನ, ಅವರು ಇವರನ್ನ ಝಾಡಿಸಿದರೆ ನಮಗೊಳ್ಳೇದೆ – ಯಾಕಂದರೆ, ಎಲ್ಲಾ ಧರ್ಮದ ದೋಸೇನೂ ತೂತು ಅಂತ ಗೊತ್ತಾಗತ್ತೆ!

ಆ ಲೇಖನದ ಗಲಾಟೆಯಲ್ಲಿ ಯಾರೋ ಕೆಲವರು “ಅಂಕಿ ಅಂಶಗಳ ಸಮೇತ ಅವರ ಮಾತನ್ನು ಅಲ್ಲಗಳೆಯಲಿ” ಎಂದು ಸವಾಲೆಸೆದರು. ನನಗೋ ಹಂಗೆಲ್ಲಾ ಎದೆತಟ್ಟಿಕೊಂಡು ಯಾರಾದರೂ ಮಾತಾಡಿಬಿಟ್ಟರೆ ಅಂಜಿಕೆಯಾಗತ್ತೆ. ಸುಳ್ಳು ಹೇಳೋರು ಎದೆ ತಟ್ಟಿಕೊಂಡು ಹೇಳ್ತಾರ ಅಂತ. ಆದರೂ ಯಾರೂ ಇಲ್ಲದಾಗ ಏನಿರಬಹುದು ಅಂತಹ “ಮಹಾನ್ ಸತ್ಯ” ಅಂತ ಕುತೂಹಲ ಶುರು ಆಯ್ತು. ನೋಡಿದರೆ ಭೈರಪ್ಪನವರು ತಮ್ಮ ಯಥಾ ಬಗೆಯಲ್ಲಿ ಉಸಿರು ಬಿಗಿಹಿಡಿದು ಬರೆದ, ಕಾಮ, ಕೋಲನ್, ಸೆಮಿಕೊಲನ್ ಇಲ್ಲದ ಉದ್ದುದ್ದ ಪ್ಯಾರಾಗ್ರಾಫ್ ನೋಡೀನೇ ಸುಸ್ತಾಯ್ತು.

ಆಮೇಲೆ ಹತ್ತಾರು %ಗಳು ಒಂದೇ ಪ್ಯಾರಾದಲ್ಲಿ ಕಿಕ್ಕಿರಿದಿದ್ವು. ಇಲ್ಲಿ ಬಹುಪಾಲು ಸತ್ಯ ಇರಲೇಬೇಕು ಅಂತ ಹತ್ತಿರ ಹೋಗಿ ನೋಡಿದೆ. ಏನೋ ಏರುಪೇರು ಇದೆಯಲ್ಲಾ ಅನ್ನಿಸ್ತು. ನೋಡೋಕೆ ಶುರುಮಾಡಿದೆ. ಸಹಾಯಕ್ಕೆ ವಿಕೀಪಿಡಿಯಾ [“ಬಡವರ ಎನ್ಸೈಕ್ಲೋಪೀಡಿಯ”], ಅಲ್ಲದೆ world factbook ಕೂಡ ಆನ್‌ಲೈನ್ ಇದೆ.

ಸರಿ, ಅವುಗಳನ್ನಿಟ್ಟುಕೊಂಡು ಭೈರಪ್ಪನವರ “ಕ್ರೈಸ್ತರಾಗಿರುವ ಶೇಕಡವಾರು ಸಂಖ್ಯೆ ಪಟ್ಟಿ” ನೋಡಿದರೆ, ಬರೀ ತಪ್ಪು ತಪ್ಪು ಅಂಕಿ-ಅಂಶ! ಹುಡುಕ್ತಾ ಕಂಡಿದ್ದನ್ನ ಇಲ್ಲಿ ಕಾಪಿ-ಪೇಸ್ಟ್ ಮಾಡಿದೀನಿ. ಜತೆ ಜತೆಗೆ, ಭೈರಪ್ಪಂಗೆ ಬೇಡವಾದ, ಹಾಗಾಗಿ ಅವರು ಹೇಳದ ಕೆಲವು ಇಂಟರೆಸ್ಟಿಂಗ್ ಸಂಗತಿಗಳೂ ಸಿಕ್ಕವು! ಅಷ್ಟಕ್ಕಾದರೂ ಭೈರಪ್ಪಂಗೆ ಥ್ಯಾಂಕ್ಸ್ ಹೇಳಲೇಬೇಕು.

ಅಂಗೋಲಾ : ಭೈರಪ್ಪ ಹೇಳೋ ೯೦ ಅಲ್ಲ ಬರೇ ೫೩! [indigenous beliefs 47%, Roman Catholic 38%, Protestant 15% (1998 est.)

ಬುರುಂಡಿ : ೭೮ ಅಲ್ಲ ೬೭ [ ಆದರೆ ಬುರುಂಡಿ ಮಕ್ಕಳ ಓದಿಗೆ ಇಂಡಿಯಾಕ್ಕಿಂತ ಹೆಚ್ಚು ಖರ್ಚು ಮಾಡತ್ತಂತೆ! 5.1%,GDP ಖರ್ಚು ಮಾಡಿದರೆ ಇಂಡಿಯ – 3.2% of GDP (2005) )

ಗಬನ್ – ೭೩ ಅಲ್ಲ ೫೫ ರಿಂದ ೭೫ ಇರಬಹುದಂತೆ! [including non-citizens practice at least some elements of Christianity. ಇಷ್ಟಾಗಿ ಈ ದೇಶಕ್ಕೆ ಅಧ್ಯಕ್ಷ ಒಬ್ಬ ಮುಸ್ಲಿಮ್] Christian 55%-75%, animist, Muslim less than 1%

ಚಾಡ್ – ೩೩ ಅಲ್ಲ ೩೪ [Muslim 53.1%, Catholic 20.1%, Protestant 14.2%, animist 7.3%, other 0.5%, unknown 1.7%, atheist 3.1% (1993 census) ]

ಕಾಂಗೋ (ಇದು ಯಾವ ಕಾಂಗೋ ಅಂತ ಕೂಡ ಬರದಿಲ್ಲ, ಎರಡಿದೆಯಲ್ಲ! ಬಹುಶಃ ರಿಪಬ್ಲಿಕ್ ಆಫ್ ಕಾಂಗೋ) – ೬೨ ಅಲ್ಲ ೫೦ : Christian 50%, animist 48%, Muslim 2%

ಕೆಮರೂನ್ : ೩೫ ಅಲ್ಲ ೪೦ [Muslim centres and Christian churches of various denominations operate freely throughout Cameroon…. The country is generally characterized by a high degree of religious tolerance. [ indigenous beliefs 40%, Christian 40%, Muslim 20% ]

ಈಸ್ಟ್-ಟಿಮೋರ್‍ : ೯೮[ಕರೆಕ್ಟ್!] Roman Catholic 98%, Muslim 1%, Protestant 1% (2005)

ಈಕ್ವಟೋರಿಯಲ್ ಗಿನಿ : ಯಾರಿಗೂ ಗೊತ್ತಿಲ್ಲ. ಭೈರಪ್ಪನ ಬಿಟ್ಟು : ೯೪ ಅಂತೆ! [nominally Christian and predominantly Roman Catholic, pagan practices]

ಇಥಿಯೋಪಿಯ : ೫೨ ಅಲ್ಲ ೬೦ [ Christian 60.8% (Orthodox 50.6%, Protestant 10.2%), Muslim 32.8%, traditional 4.6%, other 1.8% (1994 census) ]

ಟಾನ್ಸೇನಿಯಾ : ೨೦ ಅಲ್ಲ ೩೦ [ mainland – Christian 30%, Muslim 35%, indigenous beliefs 35%; Zanzibar – more than 99% Muslim ] Current statistics on religion in Tanzania are unavailable because religious surveys were eliminated from government census reports after 1967. Religious leaders and sociologists estimate that the Christian and Muslim communities are equal, each accounting for 30 to 40 percent of the population,

ಟೊಗೊ : ೨೩ ಅಲ್ಲ ೨೯ [ Christian 29%, Muslim 20%, indigenous beliefs 51% ]

ಉಗಾಂಡಾ : ೭೦ ಅಲ್ಲ ೮೪ [ Roman Catholic 41.9%, Protestant 42% (Anglican 35.9%, Pentecostal 4.6%, Seventh Day Adventist 1.5%), Muslim 12.1%, other 3.1%, none 0.9% (2002 census)]

ಲೈಬೀರಿಯಾ ೬೮ ಅಲ್ಲ ೪೦ [ Christian 40%, Muslim 20%, indigenous beliefs 40% ]

ಮೊಜಾಂಬಿಕ್ :೩೧ ಅಲ್ಲ ೪೧ [ Catholic 23.8%, Muslim 17.8%, Zionist Christian 17.5%, other 17.8%, none 23.1% (1997 census) ]

ಕೆನ್ಯಾ:೨೫ ಅಲ್ಲ ೭೮! [Protestant 45%, Roman Catholic 33%, Muslim 10%, indigenous beliefs 10%, other 2%
note: a large majority of Kenyans are Christian, but estimates for the percentage of the population that adheres to Islam or indigenous beliefs vary widely] Christianity was first brought to Kenya in the fifteenth century by the Portuguese and spread rapidly during the nineteenth century, when it experienced a revival. Today, the main Christian denominations in Kenya are Protestant confessions, which make up 38% of the country’s religious composition.

ಮೊಜಾಂಬಿಕ್ : ೩೧ ಅಲ್ಲ ೪೬ [ half of the population does not profess to practice a religion or creed … There are 732 religious denominations and 144 religious organizations registered with the Department of Religious Affairs of the Ministry of Justice.]

ನೈಜೀರಿಯಾ : ೫೨ ಅಲ್ಲ ೪೦ – [Muslim 50%, Christian 40%, indigenous beliefs 10% ] ನೈಜೀರಿಯಾದಲ್ಲಿ ಕ್ರಿಶ್ಚಿಯನ್ – ಮುಸ್ಲಿಮ್ ಹೊಡದಾಟದ ನಡುವೆ ಕ್ರಿಸ್ಲಾಂ ಅಂತ ಇದೆಯಂತೆ! [Chrislam is a blend of Christianity and Islam that takes practises from both the Bible and the Koran. It hopes to quell religious feuds among Nigerians.]

ಫಿಲಿಪೀನ್ಸ್ : ೮೪ ಅಲ್ಲ ೮೮ (ಅದರ್‍ ಕ್ರಿಶ್ಚಿಯನ್ನರಿಗೆ ಬೇಜಾರಾಗಬಾರದಲ್ಲ…) [Roman Catholic 80.9%, Muslim 5%, Evangelical 2.8%, Iglesia ni Kristo 2.3%, Aglipayan 2%, other Christian 4.5%, other 1.8%, unspecified 0.6%, none 0.1% (2000 census)]

ರುವಾಂಡಾ : ೬೯ ಅಲ್ಲ ೮೭ : [ Roman Catholic 56.5%, Protestant 26%, Adventist 11.1%, Muslim 4.6%, indigenous beliefs 0.1%, none 1.7% (2001) ]

ದಕ್ಷಿಣ ಆಫ್ರಿಕಾ ೭೮ ಅಲ್ಲ ೪೪ + ೩೬ = ೮೦ (ಇಲ್ಲಿ ಅದರ್‍ ಕ್ರಿಶ್ಚಿಯನ್ನರೂ ಸೇರಿಸಿಕೊಂಡಿದ್ದಾರೆ! ಆದರೂ ತಪ್ಪು!)  [ Zion Christian 11.1%, Pentecostal/Charismatic 8.2%, Catholic 7.1%, Methodist 6.8%, Dutch Reformed 6.7%, Anglican 3.8%, Muslim 1.5%, other Christian 36%, other 2.3%, unspecified 1.4%, none 15.1% (2001 census)]

ಸುಡಾನ್ : ೩೦ ಅಲ್ಲ ೫ (ಇದ್ಯಾಕೋ ತುಂಬಾ ಎಡವಟ್ಟು!) [ Sunni Muslim 70% (in north), Christian 5% (mostly in south and Khartoum), indigenous beliefs 25% ] Christianity reached what is now northern Sudan by about the fourth century. During the 19th century, British missionaries introduced the faith into the South Sudan.

ಸೌತ್ ಕೊರಿಯ : ೪೯ ಅಲ್ಲ ೨೬  [Christian 26.3% (Protestant 19.7%, Roman Catholic 6.6%), Buddhist 23.2%, other or unknown 1.3%, none 49.3% (1995 census) ]

ಪಾಪುವ ನ್ಯೂ ಗಿನಿ : ೯೭ ಅಲ್ಲ ೯೯ ಆದರೆ ಕ್ರಿಶ್ಚಿಯನ್ನರೊಳಗೇ ಇರುವ ಹಲವು ಪ್ರಬೇಧಗಳನ್ನು ಕ್ಯಾರೆ ಅನ್ನದೆ ಒಟ್ಟಿಗೆ ಲೆಕ್ಕ ಹಾಕಬೇಕು. [Roman Catholic 27%, Evangelical Lutheran 19.5%, United Church 11.5%, Seventh-Day Adventist 10%, Pentecostal 8.6%, Evangelical Alliance 5.2%, Anglican 3.2%, Baptist 2.5%, other Protestant 8.9%, Bahai 0.3%, indigenous beliefs and other 3.3% (2000 census)]

ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ : ೮೨ ಅಲ್ಲ ೫೦ [ indigenous beliefs 35%, Protestant 25%, Roman Catholic 25%, Muslim 15% note: animistic beliefs and practices strongly influence the Christian majority ]

ಜೈರೆ (zaire? ಇದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಇರಬೇಕು!) ೯೦ ಅಲ್ಲ ೯೪ [Roman Catholic 50%, Protestant 20%, Kimbanguist 10%, Muslim 10%, other (includes syncretic sects and indigenous beliefs) 10% ] The number of persons who can be categorized as belonging exclusively to one group or another is limited. Overlapping affiliations are more common… In the search for spiritual resources, the Congolese have frequently displayed a marked openness and pragmatism… Protestant churches are valued, as are their Catholic counterparts, not only for the medical and educational services they provide, but also for serving as islands of integrity in a sea of corruption.  ಆದರೆ ಜೈರೆ ಅಂತ ಒಂದು ದೇಶವೇ ಈಗಿಲ್ಲ! ಸುಮಾರು ಹನ್ನೊಂದು ವರ್ಷದ ಹಿಂದೆಯೇ ಅದಕ್ಕೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಅಂತ ನಾಮಕರಣವಾಗಿದೆ. ಇದು ಭೈರಪ್ಪನವರ ದಿವ್ಯಮತಿಗೆ ಗೊತ್ತಿಲ್ಲದೇ ಇದ್ದೀತೆ?

ಮೇಲಿನ ಅಂಕಿ ಅಂಶದ ತಪ್ಪುಗಳು ಅವರ ವಾದಕ್ಕೆ ತೊಂದರೆ ಏನೂ ಮಾಡಲ್ಲ, ಬಿಡಿ. ಕತ್ತೆಗೆ ಮೂರೇ ಕಾಲು ಅಂದುಕೊಂಡೇ ಅವರು ಸಾಧಿಸೋಕೆ ಹೊರಟಿರೋದನ್ನ ಸಾಧಿಸಿಬಿಡಬಹುದು! ಆದರೂ, ಅಲ್ರಿ, ಸತ್ಯದ ದೃಷ್ಟಾರ ಬರೆದಿರುವ ಅಂಕಿ-ಅಂಶ ಆಧಾರಿತ ಲೇಖನದಲ್ಲಿ ಸುಳ್ಳು, ತಪ್ಪು ಇರೋಕೆ ಸಾಧ್ಯನ? ಅವರ integrity ಬಗ್ಗೆ ಒಂದು ಚೂರಾದರೂ ಗೌರವ ವಿಶ್ವಾಸ ಇರಕೂಡದ? ಒಂದು ಪ್ಯಾರಾದಲ್ಲೇ ಇಷ್ಟೆಲ್ಲ ಸುಲಭದ ತಪ್ಪುಗಳು ಇರೋವಾಗ ಭೈರಪ್ಪ ತಮ್ಮ ಮಾತುಗಳನ್ನು ತೂಗಿ ಆಡ್ತಾರೆ ಅಂತೀರ? ತಮ್ಮ ವಿಷಯದ ಬಗ್ಗೆ ಕೊಂಚನಾದರೂ ಗಂಭೀರವಾದ ಕಾಳಜಿ, ಚಿಂತನೆ ಇದ್ದಿದ್ದರೆ, ಇಂತಹ ಕ್ಷುಲ್ಲಕ ತಪ್ಪುಗಳು ಯಾರಾದರೂ ಮಾಡ್ತಾರ? ಇದು ಕನ್ನಡದ ಜನಪ್ರಿಯ ಪೇಪರಿನಲ್ಲಿ ಬಂದಿರೋ ಕನ್ನಡದ ಜನಪ್ರಿಯ ಲೇಖಕರು ಬರೆದಿದ್ದು ಅಂತ ನಿಮ್ಮ ಮಕ್ಕಳಿಗೆ ಗೊತ್ತಾದರೆ, ಅವರು ಆಮೇಲೆ ಕನ್ನಡ ಓದೋದೆ ಬಿಟ್ಟುಬಿಟ್ಟಾರು. ಕನ್ನಡ ಸಾರಸ್ವತ ಲೋಕದಲ್ಲಿ ಭೈರಪ್ಪ “ಓದುಗರನ್ನು ಉತ್ಪಾದನೆ ಮಾಡಿದವರು” ಅಂತ ಹೇಳಿಕೊಳ್ಳೋರಿಗೆ ಇದು ಕುಚೋದ್ಯ ಅನಿಸಬಹುದು. ನಿಜ, ಭೈರಪ್ಪ ಕವಾಯತು ಮಾಡಿಸಿದ ಸೈನ್ಯ ಬೆಂಗಾವಲಿಗೆ ಇರೋದು ಅವರ “ಉತ್ಪಾದನೆ”ಯ ಫಲಕ್ಕೆ ಸಾಕ್ಷಿ ಅಲ್ಲವೆ?

ಇನ್ನೂ ಬೇಕಾದಷ್ಟು “%ನ ಸತ್ಯಗಳು” ಅಲ್ಲಿವೆ. ಅದರ ಬಗ್ಗೆ ನೀವೇ ಒಂದು ಚೂರು ಟೈಮಿದ್ದರೆ ನೋಡಿ. ಆದರೂ ಇನ್ನೊಂದು ವಿಷಯ: “ಹಿಟ್ಲರ್ಸ್ ಪೋಪ್” ಪುಸ್ತಕದ ಬಗ್ಗೆ ಬೇರೆ ಕೂಗಿದಾರೆ. ಅದರ ಬಗೆಗಿನ ಅನುಮಾನಗಳು ಎಷ್ಟು ದಟ್ಟವಾಗಿದೆಯೆಂದರೆ, ಆ ಪುಸ್ತಕದ ಲೇಖಕನೇ ಹಿಂದೇಟು ಹಾಕಿದ್ದಾನೆ. ಆದರೆ, ಭೈರಪ್ಪನವರು ಅದನ್ನು ಹಿಡಿದು ಕಿರುಚುತಾನೇ ಇದ್ದಾರೆ! ಇನ್ನು ಕಾನ್ರಾಡ್  ಎಲ್ಸ್‌ಟ್ / ಗೋತಿಯೆ / ಎನ್.ಎಸ್.ರಾಜಾರಾಂ – ದ ಫ್ರಾಡ್ (ಈ ಸಲ ಫ್ರಾಲಿನ ಯಾಕೋ ಬಿಟ್ಟುಬಿಟ್ಟಿದ್ದಾರೆ) ಇವರ ಬಗ್ಗೆ ನೀವೇ ಓದಿಕೊಳ್ಳಿ. ಇವರೆಲ್ಲರ ಪರವಾಗಿ ಬೇಕಾದಷ್ಟು ಜನ ಸದ್ದು ಮಾಡ್ತಿದ್ದಾರೆ. ಆದರೆ ಸವಾಲೆಸದೋರು ಬೇಕಂತಂದರೆ ತುಸು ಹುಡುಕಬೇಕು.

ನಾನಿಷ್ಟು ನೋಡಿದ್ದೀನಿ. ನೀವಷ್ಟು ನೋಡಿಕೊಳ್ಳಿ.

ಅಂದ ಹಾಗೆ, ಭೈರಪ್ಪನವರ ಲೇಖನ ಮಕ್ಕಳ ಕೈಗೆ ಸಿಕ್ಕದ ಹಾಗೆ ನೋಡಿಕೊಳ್ಳಿ, ಗುಡ್ ಲಕ್! 🙂

Wikipedia: http://en.wikipedia.org/wiki/Christianity_in_Africa
World Fact Book: https://www.cia.gov/library/publications/the-world-factbook

Advertisements

17 thoughts on “ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

Add yours

 1. ಬ್ರಿಲಿಯಂಟ್! ಇದನ್ನು ವಿಜಯಕರ್ನಾಟಕಕ್ಕೆ ಕಳಿಸಿದರೂ ಪ್ರಕಟ ಆಗತ್ತೆ ಅನ್ನುವ ಗ್ಯಾರೆಂಟಿ ಇಲ್ಲ. ಲೇಖನದಲ್ಲಿ ಇರುವ north-east ಬಗೆಗಿನ assumptionಗಳನ್ನು ಪ್ರಶ್ನಿಸಿ ಕಳಿಸಿದ ಎಂ.ಎಸ್. ಪ್ರಭಾಕರ ಅವರ ಪ್ರತಿಕ್ರಿಯ ಇಲ್ಲಿಯ ವರೆಗೂ ಪ್ರಕಟ ಆಗಿಲ್ಲ. ಭೈರಪ್ಪನವರ “argumens” ಪ್ರಶ್ನಿಸುವ ಲೇಖನಗಳು ಕೆಲವು ಪ್ರಕಟ ಆದರೂ, “facts” ಪ್ರಶ್ನಿಸುವವು ಪ್ರಕಟ ಆಗಿಲ್ಲ.

 2. preetiya anivasiyavare,
  nivu bairappa lekanakke react agi bareda anki sanki mahitige thanx.. bairappa egaste alla modalindalu avara kadambariyalli vakilike madutta bandavaru.. adu avra svabhava avra lekanada bagge charchesuva mulaka navu avrige prachara kodutiddeva anno anumana nannu kaduta ide.. irli ondu olle lekena baredidakke vandanegalu..

 3. ಮಂದಾರ ಹಾಗು ಬಾಗೇಶ್ರಿಯವರೆ,
  ವಿ.ಕ.ಕ್ಕೆ ವಾದದ ಸತ್ಯಾಸತ್ಯತೆಯ ಬಗ್ಗೆ ಆಸಕ್ತಿಯಿರುವುದಿಲ್ಲ. ಅವರಿಗೆ ತಮ್ಮ ಪತ್ರಿಕೆಯ ಚಲಾವಣೆಯನ್ನು ಹೆಚ್ಚಿಸುವವರ ಮಾತುಗಳಷ್ಟೇ ಬೇಕು. ಹಾಗಾಗಿ ಅವರ ಬಗ್ಗೆ ಭರವಸೆ ಇಟ್ಟುಕೊಳ್ಳುವುದು ವ್ಯರ್ಥ. ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್.
  ಸುಧಾಕರರೆ,
  ನಿಮ್ಮ ಮಾತು ಮತ್ತು ಕಾಳಜಿ ನನ್ನನ್ನೂ ಕಾಡಿದೆ. ಆದರೆ, ಭೈರಪ್ಪನವರ ಮಾತನ್ನು ವೇದವಾಕ್ಯ ಎಂದುಕೊಳ್ಳುವ ಕೆಲವರನ್ನಾದರೂ ಯೋಚನೆಗೆ ಹಚ್ಚುವ ದಿಕ್ಕಲ್ಲಿ ಪ್ರಯತ್ನ ನಿಲ್ಲಕೂಡದಲ್ಲವೆ?
  ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.

 4. ಅನಿವಾಸಿಯವರ ಪ್ರಯತ್ನ ನಿಜಕ್ಕೂ ಮೆಚ್ಚುತ್ತೇನೆ. ಸುಳ್ಳರನ್ನು ಗಣಿತದ ಮೇಷ್ಟ್ರರಂತೆ ಪತ್ತೆ ಹಚ್ಚಿದ್ದೀರಿ. ಇಷ್ಟೊಂದು ರಿಸ್ಕ್ ತೊಗೊಂಡು ಯಾರು ಹುಡುಕಿ ಮಾಹಿತಿ ಕೊಡ್ತಾರೆ. ತುಂಬಾ ಥ್ಯಾಂಕ್ಸ್.
  ಆದರೂ ಸುಳ್ಳು ಹೆಣೆದು ಈಗಾಗಲೇ ಬಿಕರಿಮಾಡಿರುವ ಜನ ಇದನೆಲ್ಲಾ ಒಪ್ಪುತ್ತಾರಾ? ಡ್ಯಾಮೇಜ್ ಎಲ್ಲಿ ಆಗಬೇಕೋ? ಎಷ್ಟು ಆಗಬೇಕೋ? ಅಷ್ಟು ಈಗಾಗಲೇ ಆಗಿ ಹೋಗಿರುತ್ತೆ. ಅವರ ಪರ್ಪಸ್ ಈಡೇರಿರುತ್ತೆ.
  ಆ ಲೇಖನ ಬೈರಪ್ಪ ಒಬ್ಬರೇ ಬರೆದಿರುವಂತೆ ತೋರುವುದಿಲ್ಲ. ಅದೊಂದು ಸಾಂಘಿಕ ಯತ್ನದಂತಿದೆ. ಅನೇಕ ತಲೆ,ಹಲ್ಲುಗಳು ಒಟ್ಟಿಗೆ ಸೇರಿ ಚರ್ಚಿಸಿದ ಚರ್ವಣವನ್ನು ಸಂಪಾದಕರಾದ ಬೈರಪ್ಪ ಕಕ್ಕಿದ್ದಾರೆ ಅಂತನ್ನಿಸುತ್ತೆ. ಹೀಗೆ ವಿಷ ಕಕ್ಕುವ ಕಾರ್ಖಾನೆಗಳೇ, ಸುಳ್ಳಿನ ಸಮುದ್ರವೇ ಅವರಲ್ಲಿ ಲಭ್ಯವಿರುವ ತನಕ ಈ ಸಾಮಾಜಿಕ ವಿಷಮತೆಯ ಅವಘಡಗಳು ನಡೆಯುತ್ತಲೇ ಇರುತ್ತವೆ.
  ಕಲೀಮ್ ಉಲ್ಲಾ.

 5. ಅಲ್ರೀ, ನಿಮ್ಮ % ಗಳಲ್ಲೇ ಅನೇಕವು ಭೈರಪ್ಪನವರ % ಗಿಂತ ಹೆಚ್ಚಾಗಿವೆ ಮತ್ತು ಕೆಲವು ಕಡಿಮೆ ಇವೆ, ಆದರೂ ಪರಸ್ಪರ ಸನಿಹವಿದ್ದಾವೆ. ಸುಡಾನ್ ಒಂದನ್ನು ಬಿಟ್ಟು. ನೀವು ವಿಕಿಪೀಡಿಯಾ ನೋಡಿದ್ದಂತೆ, ಭೈರಪ್ಪ ಮಿಕಿಪೀಡಿಯಾ ನೋಡಿರಬಹುದು. ಸರ್ವೇ ಡೇಟಾಗಳು ಯಾವಾಗಲು + ಅಥವಾ – ೫% ಇದ್ದೇ ಇರುತ್ತವೆಂಬ ಸತ್ಯ ನಿಮ್ಮಂಥಹ ಅನಿವಾಸಿಗಳಿಗೇ ಗೊತ್ತೇ ಇರುತ್ತದೆ. ಹೀಗಿದ್ದಲ್ಲಿ ನಿಮ್ಮ ಮೂಗಿನ ನೇರಕ್ಕೆ, ಯಾವುದೋ ವಿಚಾರದ ಪೂರ್ವಾಗ್ರಹಪೀಡಿತರಾಗಿ ನಿಮ್ಮ ಲೇಖನವನ್ನು ಬರೆದಿದ್ದೀರೆಂದು ನಿಮಗನಿಸುತ್ತಿಲ್ಲವೇ? ಅಲ್ಲಾ, ಭೈರಪ್ಪ ಕೂಡಾ ತಮ್ಮ ಲೇಖನವನ್ನು ಪೂರ್ವಾಗ್ರಹಪೀಡಿತರಾಗಿಯೇ ಬರೆದಿರಬಹುದು. ಆದರೆ ಅದನ್ನು ನೀವು ಅಲ್ಲಗಳೆದಿರುವ ವಿಧಾನ ಸರಿಯಿಲ್ಲ. ಏಕೆಂದರೆ ಸರ್ವೇಕ್ಷಣಗಳ ಫಲಿತಾಂಶ ಯಾವಾಗಲೂ ಐದಾರು ಶೇಕಡಾವಾರು ಹೆಚ್ಚು ಕಡಿಮೆ ಇರುತ್ತದೆನ್ನುವುದು ಸತ್ಯ. ನಿಮ್ಮ ಮತ್ತು ಭೈರಪ್ಪನ ಸಂಖ್ಯೆಗಳಲ್ಲಿ ಈ ವ್ಯತ್ಯಾಸ ಇದೆ. ಇದನ್ನೇ ನೀವು ಭೈರಪ್ಪನನ್ನು ಓದಿ ಮಕ್ಕಳು ಪರೀಕ್ಷೆಯಲ್ಲಿ ಫೇಲಾಗುತ್ತವೆಂಬುದು ಏಕೋ ವಿಕೃತಿ ಎನಿಸುತ್ತದೆ.

 6. ಕಲೀಮ್‌ ಉಲ್ಲಾ ರವರೆ,
  ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್. ಆಗಿ ಹೋಗಿದೆ ಎಂದು ಕೈಕಟ್ಟಿ ಕೂರಬೇಕೆ? ಮತ್ತು ಇದೊಂದೇ ದಾರಿ ಅಲ್ಲ, ಹಲವು ದಾರಿಗಳಲ್ಲಿ ಇದೊಂದು ದಾರಿ ಎಂಬ ಅರಿವು ನನಗಿದೆ.
  ಪುಗಸಟ್ಟೆ ಮತ್ತು phonon,
  ನಿಮ್ಮ ಅಭಿಪ್ರಾಯಗಳಿಗೂ ಥ್ಯಾಂಕ್ಸ್.
  ಭೈರಪ್ಪರ ಬರಹದಲ್ಲಿ ಹಲವು ಏರುಪೇರುಗಳಿವೆ. ಪತ್ರಿಕೆಗಳಲ್ಲಿ ಸಮಾಜಿಕ ಕಾಮೆಂಟರಿ ಕೊಡೋರಿಗೆ ಅದರ ಸತ್ಯಾಸತ್ಯದ ಬಗ್ಗೆ ಎಚ್ಚರಿಕೆ ಬೇಡವೆ?
  quantitative statistical analysis ನಾನು ಓದಿಲ್ಲ, ಇಲ್ಲಿ ಮಾಡಿಯೂ ಇಲ್ಲ. (ಭೈರಪ್ಪನೂ ಓದಿ/ಮಾಡಿದಂತಿಲ್ಲ) ಮೇಲಿನ ಅಂಕಿ-ಅಂಶಗಳು ನನ್ನವಲ್ಲ. ಈ ಬರಹ ಓದುವವರಿಗೆ ಇಷ್ಟು ತಿಳಿಯುತ್ತದೆ ಅಂದುಕೊಂಡಿದ್ದೆ! 🙂

 7. Dear Anivaasi – When you have suggested that kids will fail in school if they read Byrappa based on the numbers above. Do you mean now by saying”ಮೇಲಿನ ಅಂಕಿ-ಅಂಶಗಳು ನನ್ನವಲ್ಲ. ಈ ಬರಹ ಓದುವವರಿಗೆ ಇಷ್ಟು ತಿಳಿಯುತ್ತದೆ ಅಂದುಕೊಂಡಿದ್ದೆ!”, kids will pass if they read Byrappa?

  This is called “Spit-and-Run” writing in journalism. I hope folks take responsibility for what they advocate, especially about the current affairs that are affecting the society.

  PS: I am neither a fan of Byrappa nor the so-called “Secular Intellecuals”. Facts should be facts.

  Best,
  Pugusatte.

 8. To dispute sombedy’s writing, you should dispute it’s code content and not like some data points used there. I agree, one should be accurate as much as possible, but these data, especially from the third world countries are never accurate. You should have considered his point like how these countries got “christinized” instead of priving that South Africa is not 78% but 80%.
  U.R. Ananthamurthy did the same for ‘Avarana’. Instead of commenting on its subject he said idaralli kaavya bashe illa! What a bullshit.

 9. ಶ್ರೀ ಸುದರ್ಶನ ಅವರೇ…
  ನಿಮ್ಮ ಲೇಖನ ಓದಿ ಗಾಬರಿಯಾಯಿತು. ಭಯರಪ್ಪನವರು ಸುಳ್ಳು ಹೇಳುತ್ತಾರೆ ಎಂದು ಆವರಣ ಬರೆದಾಗಲೇ ಗೊತ್ತಾಗಿತ್ತು. ಆದರೆ ಈ ಪಾಟಿ ಅಂಕಿ-ಅಂಶಗಳನ್ನೆಲ್ಲಾ ಸುಳ್ಳುಸುಳ್ಳೇ ದಾಖಲಿಸುತ್ತಾರೆ ಎಂದುಕೊಂಡಿರಲಿಲ್ಲ. ಕನ್ನಡಿಗರೆಲ್ಲಾ ದಡ್ಡರು ಎಂದು ಭಯರಪ್ಪನವರು ಭಾವಿಸಿರುವಂತಿದೆ!
  ಇನ್ನು ವಿಜಯಕರ್ನಾಟಕಕ್ಕೆ ಬೇಕಾಗಿರುವುದು ಸತ್ಯಾಸತ್ಯತೆಗಳೆಲ್ಲಾ ಎಂಬ ಮಾತು ನೂರಕ್ಕೆ ನೂರರಷ್ಟು ನಿಜ!
  ಆದರೂ ನೀವು ಒಮ್ಮೆ ಕಳುಹಿಸಿ ನೋಡಬೇಕಿತ್ತು. ಅವರಿಂದ ಏನು ಉತ್ತರ ಬಂತು ಎಂದು ತಿಳಿದರೆ ಅವರ ನಿಜ ಬಣ್ಣ ಬಯಲಾಗುತ್ತದೆ. ಅದನ್ನೂ ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಿ.
  ಇನ್ನೂ ಒಂದು ಕೋರಿಕೆ. ನೀವು ಒಪ್ಪಿಗೆ ಸೂಚಿಸುವುದಾದರೆ, ನಿಮ್ಮ ಲೇಖನದ ಯಥಾವತ್ ಅಂಕಿ-ಅಂಶಗಳನ್ನು ನಿಮ್ಮ ಹೆಸರಿನಲ್ಲೇ ನಾನು ವಿಜಯ ಕರ್ನಾಟಕ ಕಚೇರಿಗೆ ನೇರವಾಗಿ ತಲುಪಿಸಲೇ. ನಾನು ಬೆಂಗಳೂರಿನಲ್ಲೇ, ಅದೂ ವಿಜಯಕರ್ನಾಟಕದ ಕಚೇರಿಗೆ ಕೂಗಳತೆಯಲ್ಲೇ ಇರುವುದು.
  ನಿಮ್ಮ ೊಪ್ಪಿಗೆಯಿದ್ದರೆ ಮಾತ್ರ ಮುಂದುವರೆಯುತ್ತೇನೆ.

 10. ಸನ್ಮಾನ್ಯ ಸುದರ್ಶನ ಅವರೇ ವಿಜಯ ಕರ್ನಾಟಕ ಪತ್ರಿಕೆ ಸಮಾನ ವೇದಿಕೆ ಕಲ್ಪಿಸಿ ಕೊಟ್ಟಿದ್ದೇನೆ ಎಂದು ಭೈರಪ್ಪನವರ ಹಾಗೆ ಎದೆ ತಟ್ಟಿಕೊಡು ಸತ್ಯ(!) ಹೇಳುತ್ತಿದೆ. ಆದರೆ ಅದು ಸುಳ್ಳು. ಕೇವಲ ಖ್ಯಾತನಾಮರ ಲೇಖನಗಳನ್ನು -ಅವುಗಳಲ್ಲಿ ಸತ್ವವಿಲ್ಲದಿದ್ದರೂ- ಮಾತ್ರ ಪ್ರಕಟಿಸಿ ಪ್ರಚಾರ ಪಡೆಯುತ್ತಿದೆ. ಆದರೆ ವಾಸ್ತವಾಂಶಗಳಿಂದ ಕೂಡಿದ ಲೇಖನಗಳನ್ನು ಅದರ ಲೇಖಕರು ಹೊಸಬರು ಎನ್ನುವ ಕಾರಣಕ್ಕೆ ಪ್ರಕಟಿಸುತ್ತಿಲ್ಲ. ನಾನು ವಿಜಯ ಕರ್ನಾಟಕಕ್ಕೆ ಕಳುಹಿಸಿದ ಲೇಖನದ ಯಥಾವತ್ ಪ್ರತಿಯನ್ನು ಕಳುಹಿಸುತ್ತೇನೆ. ನೋಡಿ.

  ಗೇ,
  ಸಂಪಾದಕರು
  ‘ವಿಜಯಕರ್ನಾಟಕ’ ದಿನಪತ್ರಿಕೆ
  ಬೆಂಗಳೂರು.
  ಮತಾಂತರ ಒಂದು ಸಂವಾದ
  ಪ್ರಕಟಣೆಗಾಗಿ

  ಸನ್ಮಾನ್ಯ ಎಸ್.ಎಲ್.ಭೈರಪ್ಪಾಜಿಯವರೆ,
  ಪತ್ರಿಕೆಯಲ್ಲಿ ಮತಾಂತರದ ಬಗ್ಗೆ ನಿಮ್ಮ ಲೇಖನ ಬರುತ್ತದೆ ಎಂದು ತಿಳಿದಾಗಲೇ ನಿಮ್ಮ ಲೇಖನ ಹೀಗಿದ್ದಿರಬಹುದು ಎಂದು ಊಹಿಸಿದ್ದೆವು! ಇದಕ್ಕಿಂತ ಹೆಚ್ಚಿಗೇನನ್ನೂ ನಾವು ನಿಮ್ಮಿಂದ ನಿರೀಕ್ಷಿಸಲಾಗುವುದಿಲ್ಲ. ನಿಮ್ಮ ಸಿದ್ಧಾಂತವನ್ನು ಒಪ್ಪದವರನ್ನು ಬಿಡಿ, ಒಪ್ಪುವವರೂ ಕೂಡ ನಿಮ್ಮಿಂದ ಇದಕ್ಕಿಂತ ಭಿನ್ನವಾದುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ! ನಿಮ್ಮ ಅಧ್ಯಯನಶೀಲತೆಗೆ ಅತ್ಯತುತ್ತಮ ಉದಾಹರಣೆ ಈ ಲೇಖನ. ಅಭಿನಂದನೆಗಳು!
  ನಿಮ್ಮ ಲೇಖನವನ್ನು ಓದಿದ ಮೇಲೆ ನನ್ನಲ್ಲೂ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿವೆ. ‘ವಾಸ್ತವವಾಗಿ ಏಸುವೆಂಬ ಒಬ್ಬ ವ್ಯಕ್ತಿ ಇದ್ದನೆ ಎಂಬ ಸಂಶಯವೂ ಸಂಶೋಧಕರಲ್ಲಿದೆ’ ಎಂದಿದ್ದೀರಿ. ಹಾಗಾದರೆ ‘ಹಿಂದೂ ಧರ್ಮದಲ್ಲಿ ಇದ್ದಾವೆಂದು ಹೇಳಲಾದ ಮುವತ್ತುಮೂರುಕೋಟಿ ದೇವತೆಗಳಲ್ಲಿ ಒಬ್ಬನಾದರೂ ಇದ್ದಾನೆಯೇ?’ ಎಂಬ ಸಂಶಯ ನಿಮ್ಮನ್ನು ಕಾಡಲಿಲ್ಲವೇಕೆ? ನೀವು ಸಂಶೋಧಕರಲ್ಲವೆ!? ಈ ದೇವರುಗಳ ವಿಚಾರವನ್ನು ಬಿಡಿ. ನಿಮ್ಮ ಶಂಕರಾಚಾರ್ಯರ ಕಾಲವನ್ನಾದರು ನಿರ್ಧಾರವಾಗಿ ಹೇಳಲು ಸಾಧ್ಯವೆ? ಅವರು ಬರೆದ ಕೃತಿಗಳು ಯಾವುವು ಎಂಬ ಬಗ್ಗೆಯಾದರೂ ಖಚಿತ ಆಧಾರಗಳಿವೆಯೆ? ಮೊದಲು ಸಂಶೋಧನೆ ಮಾಡುವುದು ಒಳಿತು.
  ಬೇಟೆಗಾರ ಮತಗಳನ್ನು ಓದಿ ವಿಶ್ಲೇಷಿಸಿದ್ದು ದಯಾನಂದ ಸರಸ್ವತೀ ಮತ್ತು ಸ್ವಾಮಿ ವಿವೇಕನಂದ ಮಾತ್ರ ಎಂದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಅವರನ್ನು ನೀವು ಬಳಸಿಕೊಂಡಿದ್ದೀರಿ. ಅದೇ ಸ್ವಾಮಿ ವಿವೇಕಾನಂದರು ಹಿಂದೂ ಮತದಲ್ಲಿನ ಅಸ್ಪೃಷ್ಯತೆ, ಮೇಲು-ಕೀಳು, ಮಡಿ-ಮೈಲಿಗೆ, ಮೂಢನಂಬಿಕೆ, ಕಂದಾಚಾರಗಳನ್ನೆಲ್ಲಾ ವಿರೋಧಿಸಿದ್ದರು ಎಂಬ ಸತ್ಯವನ್ನು ಮರೆಮಾಚಿದ್ದೀರಿ. ಇವುಗಳಾವುದಕ್ಕೂ ಬೇಡದ ವಿವೇಕಾನಂದರು ನಿಮಗೆ ಮತಾಂತರದ ವಿಷಯಕ್ಕೆ ಬೇಕಾಗುತ್ತಾರೆ! ನಿಮ್ಮ ತ್ರಿಮತಸ್ಥ ಬ್ರಾಹ್ಮಣರಲ್ಲಿಯೇ ಪರಸ್ಪರ ಮುದ್ರೆಗಳನ್ನು ಬದಲಾಯಿಸಿಕೊಂಡು ಮತಾಂತರವಾಗುವುದಿಲ್ಲವೆ. ಹನ್ನೆರಡನೇ ಶತಮಾನದಲ್ಲಿ ನಡೆದ ಶರಣಕ್ರಾಂತಿಯಲ್ಲಿ ಕಾಡಿನ-ನಾಡಿನ ಜನ, ಅಲೆಮಾರಿಗಳು ಹೀಗೆ ಸಿಕ್ಕಸಿಕ್ಕವರಿಗೆಲ್ಲಾ ಲಿಂಗ ಹಾಕಿ ಲಿಂಗಾಯ್ತರನ್ನಾಗಿ ಮಾಡಿದರಲ್ಲ ಅದು ಮತಾಂತರವಲ್ಲವೆ? ಇವಾವೂ ಬೇಡ. ಈಗ ಬಿಜೆಪಿಯವರು ಆಮಿಷ ತೋರಿ ಶಾಶಕರನ್ನು ಪಕ್ಷಾಂತರ ಮಾಡಿಸಿದರಲ್ಲ ಅದು ಮತಾಂತರದ ಇನ್ನೊಂದು ರೂಪವಲ್ಲವೆ?
  ಇಂದಿಗೂ ಹಿಂದೂ ಮತದಲ್ಲಿ ಅಸ್ಪೃಷ್ಯತೆ ಎಂಬುದು ದೂರವಾಗಿಲ್ಲ. ಕರ್ನಾಟಕದ ಪ್ರಮುಖ ಮಠಗಳಲ್ಲಿಯೇ ಬ್ರಾಹಣರಿಗೆ ಪ್ರತ್ಯೇಖ ಊಟದ ಪಂಕ್ತಿಗಳಿವೆ. ಬ್ರಾಹ್ಮಣ ಮತ್ತು ಬ್ರಾಹ್ಮಣೇತರರಿಗೆಂದು ಪ್ರತ್ಯೇಖ ಸಂಸ್ಕೃತ ಶಾಲೆಗಳನ್ನು ಮಠಗಳು ನಡೆಸುತ್ತಿಲ್ಲವೆ? ಮತಾಂತರದ ವಿಷಯ ಬಂದಾಗ ರಸ್ತೆಗಿಳಿದು ಪ್ರದರ್ಶನ ನೀಡುವ ಮಠಾಧಿಪತಿಗಳು ಅಸ್ಪೃಷ್ಯತೆಯ ಮಾತು ಬಂದಾಗ ಮೌನವಾಗಿರುವುದು ನಿಮಗೆ ಕಾಣುವುದಿಲ್ಲವೆ? ಒಬ್ಬನಾದರೂ ಮಠಾಧಿಪತಿ ಒಬ್ಬನೇ ಒಬ್ಬ ದಲಿತ ಯುವಕನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿಲ್ಲವೆಂದು ನಿಮಗೆ ಅನ್ನಿಸುವುದಿಲ್ಲವೆ? ಒಬ್ಬ ಹಿಂದೂ ತನ್ನ ಸಹಜೀವಿಯನ್ನು ಅವನೂ ತನ್ನಂತೆಯೇ ಎಂದು ನೋಡಿದ್ದರೆ ಈ ಮತಾಂತರದ ಗೊಂದಲವೇ ಹುಟ್ಟುತ್ತಿರಲಿಲ್ಲ ಎಂಬ ಸತ್ಯ ನಿಮಗೇಕೆ ಹೊಳೆಯುವುದಿಲ್ಲ? ಮತಾಂತರವನ್ನು ತಡೆಯಲು ಪ್ರಯತ್ನಿಸುವ ಹಿಂದೂ ಯುವಕರ ಕಾರ್ಯವನ್ನು ಮಾದ್ಯಮಗಳು ದೊಡ್ಡ ಗದ್ದಲವೆಂಬಂತೆ ಚಿತ್ರಿಸುತ್ತಾರೆ ಎನ್ನುವ ನಿಮಗೆ, ಅದೇ ಹಿಂದೂ ಯುವಕರು ಹಿಂದೂ ಧರ್ಮದಲ್ಲಿನ ಅಸ್ಫೃಷ್ಯತೆಯ ಬಗೆಗಿನ ಹೋರಾಟಗಳನ್ನು ಏಕೆ ಸಂಘಟಿಸುವುದಿಲ್ಲ? ಇಂದು ಮುಸಲ್ಮಾನರು ಗೋಮಾಂಸವನ್ನು ತಿನ್ನುವುದನ್ನು ವಿರೋಧಿಸುವ ನಿಮ್ಮ ಹಿಂದೂ ಯುವಕರು, ನಾಳೆ ನೀವೇ ಹೇಳುವಂತೆ ಹಿಂದೂಗಳೇ ಆಗಿರುವ, ಮಾಂಸಹಾರ ಮಾಡುವ ದಲಿತರು, ಕೆಳವರ್ಗದವರು, ಒಕ್ಕಲಿಗರು ಮೊದಲಾದವರಿಗೆ ನೀವು ಮಾಂಸ ತಿನ್ನಬೇಡಿ ಎಂದು ಹೇಳುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯೇನು? ನಿಮ್ಮ ಭಿತ್ತಿ ಹಾಗೂ ಕಾದಂಬರಿಗಳನ್ನು ಓದಿ ನಿಮ್ಮ ಊರಿನವನೇ (ನಿಮ್ಮ ತಾಯಿಯ ತವರು ಮನೆಯವರಿಗೆ ಸೇರಿರುವ ಬ್ಯಾಡರಹಳ್ಳಿ ಕಾವಲು) ಆದ ನನಗೆ ನಿಮ್ಮ ಬಗ್ಗೆ ಹೆಮ್ಮೆಯೆನ್ನಿಸಿತ್ತು. ನೀವು ಕಷ್ಟದಲ್ಲಿದ್ದಾಗ ನಿಮಗೆ ಕೈಹಿಡಿದವರು ನಮ್ಮ ಹಳ್ಳಿಯ ಕೆಳವರ್ಗದ ಜನರೇ ಎಂಬುದು ನಿಮಗೆ ಮರೆತು ಹೋಗಿರಬಹುದು. ಕೆಳವರ್ಗದ ಜನರ ಪ್ರೀತಿಯನ್ನುಂಡು ಬೆಳೆದ ನಿಮಗೂ ಹಿಂದೂ ಮತಾಂಧತೆಯ ಮಂಕು ಆವರಿಸಿದೆಯಲ್ಲಾ ಎಂಬುದೇ ನನ್ನ ಮತ್ತು ನನ್ನಂತಹ ಯುವಕರ ಚಿಂತೆಗೆ ಕಾರಣವಾಗಿದೆ.
  ಇನ್ನು ನೀವು ಉಲ್ಲೇಖಿಸಿರುವ ಆಕರಗ್ರಂಥಗಳನ್ನು ನೋಡಿದರೆ ಅವುಗಳೆಲ್ಲವೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿರುವ ಸತ್ಯ ಯಾರಿಗಾದರೂ (ನಿಮ್ಮ ಪರ ಮತ್ತು ವಿರೋಧ ಇರುವವರಿಗೂ) ಗೋಚರಿಸುತ್ತದೆ. ಅದೇ ಆಕರ ಗ್ರಂಥಗಳಲ್ಲಿ ನಿಮ್ಮ ಅಭಿಪ್ರಾಯಕ್ಕೆ ವಿರೋಧವಾಗಿರುವ ನೂರಾರು ಉಲ್ಲೇಖಗಳು ಸಿಗುತ್ತವೆ! ಆದರೆ ನೀವು ನಿಮ್ಮ ಹಿಂದೂ ಕನ್ನಡಕವನ್ನು ತೆಗೆಯಬೇಕು ಅಷ್ಟೆ.
  * ಡಾ. ಬಿ.ಆರ್. ಸತ್ಯನಾರಾಯಣ
  ಬೆಂಗಳೂರು-೦೪

 11. ಡಾ. ಬಿ.ಆರ್‍.ಸತ್ಯನಾರಾಯಣರೆ,
  ನಿಮ್ಮ ಪ್ರತಿಕ್ರಿಯೆ ಮತ್ತು ಬರಹಕ್ಕೆ ಥ್ಯಾಂಕ್ಸ್.
  ಭೈರಪ್ಪನವರ ಮಾತುಗಳನ್ನು ಒಂದು ವಾದ ಎಂದಷ್ಟೇ ನೋಡಬೇಕು. “ಸಂಶೋಧನೆ” “ವಿಚಾರ” ಎಂದೆಲ್ಲಾ ನೋಡಿದರೆ ಎಡವಟ್ಟು. ಆ ವಾದಕ್ಕೆ ಅವರು ಬಳಸಿರುವ ಅಂಕಿ-ಅಂಶಗಳು ಸಂದೇಹಾಸ್ಪದ. ಅಷ್ಟೇ ಅಲ್ಲ, ಅದರ ಮೂಲ ಕೂಡ ಸಂದೇಹಾಸ್ಪದವೇ.
  ವಿಜಯಕರ್ನಾಟಕಕ್ಕೆ ನಿಮಗೆ ಕೊಡಬಹುದು ಅನ್ನಿಸಿದರೆ ನನ್ನ ಅಭ್ಯಂತರವಿಲ್ಲ. ಅದನ್ನು ಅವರು ಗಂಭೀರವಾಗಿ ತೆಕ್ಕೊಳ್ತಾರೆ ಅನ್ನೋ ಭರವಸೆ ಕಡಿಮೆ. ಕೊಡುವುದಾದರೆ, ಇದರೊಟ್ಟಿಗಿನ “ಭೈರಪ್ಪನವರ ಸಂಶೋಧನೆ” ಕೂಡ ಸೇರಿಸಿ ಕೊಡುವುದು ಸೂಕ್ತ ಅನಿಸುತ್ತದೆ.
  ಧನ್ಯವಾದಗಳು

 12. ವಾಹ್, ಭೈರಪ್ಪನವರ ಬುದ್ದಿವಂತಿಕೆಗೆ ಒಳ್ಳೆ ಉದಾಹರಣೆ ಇದು. ಜನರನ್ನ ನಂಬಿಸಲಿಕ್ಕೆ ಅರ್ ಎಸ್ ಎಸ್ ಮಿಶನರಿಗಳು ಇಂಥಹ ಹಲವು ಟ್ರಿಕ್ಸ್ ಮಾಡುತ್ತಲೇ ಬಂದಿದ್ದಾರೆ. ಮತಾಂತರ ಸರಿಯೋ ತಪ್ಪೋ ಅನ್ನೋ ಬಗ್ಗೆ ನಮಗೆ ಯಾವ ಅಭಿಪ್ರಾಯ ಇದೆ ಅನ್ನುವುದು ಬೇರೆ ವಿಚಾರ, ಆದರೆ ಮಾಹಿತಿಯನ್ನು ತಮ್ಮ ಚಿಂತನೆಯ (ಕನಿಷ್ಠ) ಮಟ್ಟಕ್ಕೆ ಇಳಿಸಿ ಬಿಡೋ ಇಂಥ ಚಿಂತಕರ ಬಗ್ಗೆ ಮೈಯೆಲ್ಲ ಎಚ್ಚರದಿಂದಿರುವುದು ಸೂಕ್ತ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

%d bloggers like this: