ಭೈರಪ್ಪನವರ “ಸಂಶೋಧನೆ”

ಶ್ರೀಯವರು “ಭೈರಪ್ಪನ್ನ ನಂಬ್ಕೊಂಡರೆ ಪರೀಕ್ಷೆ ಫೇಲ್!” ಅನ್ನೋ ಬರಹಕ್ಕೆ ಸಂಪದದಲ್ಲಿ ಪ್ರತಿಕ್ರಿಯೆ ಕೊಡುತ್ತಾ, ಭೈರಪ್ಪನವರ ಅಂಕಿ-ಅಂಶದ ಮೂಲ ಇದು ಎಂದು http://www.christianaggression.org/features_statistics.php ಕೊಟ್ಟರು. ಆ ಬರಹ ಬರೆಯುವಾಗ ಭೈರಪ್ಪನವರ ಅಂಕಿ-ಅಂಶದ ಮೂಲ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಆ ಅಂಕಿ-ಅಂಶ ಬರೇ ತಪ್ಪು ಅನ್ನುವುದಕ್ಕಿಂತ ಹೆಚ್ಚು ಆತಂಕಕಾರಿ ಅನಿಸುತ್ತಿದೆ.

ಭೈರಪ್ಪನವರ ಅಂಕಿ-ಅಂಶದ ಮೂಲ ಒಂದು ಅನಾಮಿಕ ವೆಬ್‌ಸೈಟ್. ಅನಾಮಿಕವಾಗಿರೋದು ತಪ್ಪೇನಲ್ಲ. ಆದರೆ ಬೇಜವಾಬ್ದಾರಿ ಮಾತುಗಳನ್ನು ಹೇಳುವುದಕ್ಕಾಗಿಯೇ ಅನಾಮಿಕರಾಗಿರೋದು ಅಪಾಯ. ಕ್ರಿಶ್ಚಿಯಾನಿಟಿಯನ್ನು ದೂರುತ್ತಾ ಉಳಿದವರನ್ನು “ಸಂತುಷ್ಟ”ರನ್ನಾಗಿಸುವ ಉತ್ಕಟ ಆಸೆ ಅದರ ಎಲ್ಲ ಹಾಳೆಗಳಲ್ಲಿ ನೀವು ಕಾಣಬಹುದು. ಅಂತಹವು ಎಲ್ಲ ಧರ್ಮಗಳ ವಿರುದ್ಧ ಹಲವು ವೆಬ್‌ಸೈಟುಗಳಿವೆ ಅನ್ನುವುದೂ ನಿಜ.

ವಿಷಯ ಅದಲ್ಲ. ಅಲ್ಲಿಂದ ಅನಾಮತ್ತಾಗಿ ತಮ್ಮ ಅಂಕಿ-ಅಂಶಗಳನ್ನು ಎತ್ತಿಕೊಂಡಿರುವ ಭೈರಪ್ಪನವರು ತಮ್ಮ ಪತ್ರಿಕೆಯ ಲೇಖನದಲ್ಲಿ ಅದರ ಹೆಸರು ಹೇಳಿಲ್ಲ. ಭೈರಪ್ಪನವರಿಗೂ, ಆ ವೆಬ್‌ಸೈಟಿಗೂ ಒಂದು ಕಾಮನ್ ಮೂಲ ಇರಬಹುದು. ವೆಬ್‌ಸೈಟಿನವರೂ ಅದನ್ನು ಹೇಳಿಲ್ಲದೇ ಇರೋದರಿಂದ. ಭೈರಪ್ಪರ ಬರಹಕ್ಕಿಂತ ಮುಂಚೆಯೇ ಆ ವೆಬ್‌ಸೈಟಿರೋದರಿಂದ, ಅಲ್ಲಿಂದ ಎತ್ತಿಕೊಂಡಿದ್ದಾರೆ ಅಂದುಕೊಳ್ಳಲು ಅಡ್ಡಿಯಿಲ್ಲ.

ಕನ್ನಡದ ಹೆಸರಾಂತ, “ಜವಾಬ್ದಾರಿಯುತ(?)”, ಲೇಖಕ ಹೀಗೆ ಮೂಲ ಹೇಳದೆ ತನ್ನದೇ ಸಂಶೋಧನೆ ಎಂಬಂತೆ ಬರಿಯುವುದು ಬರೀ ತಪ್ಪಷ್ಟೇ ಅಲ್ಲ – ಸಂಶೋಧಕರ ಪ್ರಕಾರ “ಘೋರ ಅಪರಾಧ” ಕೂಡ. ತತ್ವಶಾಸ್ತ್ರದ ಕಂಪಾರಿಟಿವ್ ಸ್ಟಡಿ ಎಂಬಂತ ಸಂಶೋಧನೆ ಮಾಡಿರುವ ಭೈರಪ್ಪನವರಿಗೆ ಇದು ತಿಳಿಯದ ಸಂಗತಿಯಲ್ಲ. ತಿಳಿದಿದ್ದೂ ಮಾಡುವುದರ ಹಿಂದಿನ ಉದ್ದೇಶ, ಕುಟಿಲತೆ ಅಪಾಯಕಾರಿ. ಇಂಟರ್ನೆಟ್ ಕೈಗೆಟುಕದ ಎಷ್ಟೋ ಮಂದಿ ಓದುಗರು ಇವರ ಮಾತುಗಳನ್ನು “ಸಾಬೀತಾದ ಮಾತು” ಎಂದು ಪರಿಗಣಿಸುವ ಅಪಾಯವಿದೆ. “ಅಗಾಧ ಸಂಶೋಧನೆಯ ಫಲ” ಅಂದುಕೊಳ್ಳುವ ಅಪಾಯವಿದೆ. ಹೆಸರಾಂತ ಪತ್ರಿಕೆಯ ಬೆಂಬಲ ಇರುವುದರಿಂದ ಜನರ ಮನಸ್ಸನ್ನು ಕೆಡಿಸುವ ಅಪಾಯವಂತೂ ಇದ್ದೇ ಇದೆ.

ಹೀಗೆಲ್ಲಾ ಏಕೆ ಅಂದುಕೊಳ್ಳುತ್ತಿದ್ದೇನೆಂದು ಕೆಳಗಿನ ಎರಡು ಭಾಗಗಳನ್ನು ಗಮನಿಸಿದರೆ ನಿಮಗೇ ಗಟ್ಟಿಯಾಗುತ್ತದೆ. ಇವಲ್ಲದೆ ಆ ಲೇಖನದಲ್ಲಿ ಬೇರೆ ಹಲವು ಮಾಹಿತಿಗಳು ಇವೆ. ಇವನ್ನು ನೋಡಿದ ಮೇಲೆ ಅವುಗಳನ್ನೂ ಅನುಮಾನದಿಂದಲೇ ನೋಡಬೇಕಾಗುತ್ತದೆ. ಎಡಗಡೆ ಭೈರಪ್ಪನವರ ಲೇಖನದ ತುಣುಕುಗಳು, ಎಡಗಡೆ ಆ ಅನಾಮಿಕ ವೆಬ್‌ಸೈಟಿನ ತುಣುಕುಗಳು.


———————————————-

———————————————-

ಕಡೆಗೆ ಇದು “ಪ್ರಾಮಾಣಿಕ” “ಜವಾಬ್ದಾರಿಯುತ” ಭೈರಪ್ಪನವರು ಉಳಿದವರಿಗೆ ಕೊಡುವ ಉಪದೇಶ!

Advertisements

5 thoughts on “ಭೈರಪ್ಪನವರ “ಸಂಶೋಧನೆ”

Add yours

 1. ಅನಿವಾಸಿ,
  ನಿಮ್ಮ ಲೇಖನದಲ್ಲಿ ವ್ಯಕ್ತವಾದ ಕಾಳಜಿ ನನ್ನದು ಕೂಡಾ. ಜವಾಬ್ದಾರಿಯುತ ಲೇಖಕರಷ್ಟೆ ಅಲ್ಲ. ಬರೆಯಲೆಳಸುವ ಎಲ್ಲರೂ ಕೂಡ ತಮ್ಮ source ಹಾಗೂ ಅದರ authenticity ಬಗ್ಗೆ ಕಾಳಜಿ ವಹಿಸುವುದು ಅತ್ಯವಶ್ಯಕ ಅನ್ಸತ್ತೆ ನಂಗೆ. ಎಲ್ಲೆಡೆ ಮಾಹಿತಿಯ ಮಹಾಪೂರವೆ ಹರಿದು ಬರ್ತಾ ಇದೆ. ಇಂಥದ್ರಲ್ಲಿ ನಾವು ಯಾವ ಅಂಕಿ ಅಂಶಗಳನ್ನು ನಂಬಬೇಕು, ಬಿಡಬೇಕು ಅನ್ನುವ ಗೊಂದಲ. ಇದೆಲ್ಲ ಆದಮೇಲೆ ಐಡಿಯಾಲಜಿಗಳ ತಾಕಲಾಟ, ಪರ್ಸನಲ್ ಕಹಿಗಳು ಪಬ್ಲಿಕ್ ಅರೀನಾಗೆ ಹೊರಬಂದು ಉಂಟುಮಾಡುವ ಹಿಂಸೆಗಳು….ಉಫ್!! ತಲೆಕೆಟ್ಟು ಮೊಸ್ರಾಗತ್ತೆ. ಆದರೆ ಇಲ್ಲಿ ಕೊನೆಗೆ ಸತ್ಯ ಯಾವುದು ಅನ್ನೋ ಪ್ರಶ್ನೆಗೆ ಉತ್ತರಿಸೋರು ಕಡಿಮೆಯಾಗಿ ಇನ್ಯಾವುದೋ ಅಸಂಬದ್ಧ ಎಳೆಯನ್ನ ಹಿಡ್ಕೊಂಡು ಗುದ್ದಾಡೋದು ಶುರುವಾಗತ್ತಲ್ಲ ಅದು ಬೇಸರದ ವಿಷಯ. ಇಲ್ಲಿ victims, secularism ಎಲ್ಲ ಮೂಲೆಗುಂಪಾಗಿಬಿಡುವುದು ನನಗೆ ರೇಜಿಗೆ ಹುಟ್ಟಿಸಿದ್ದು. ನಾವು ನಿಯೋ ನಾತ್ಸೀಯಿಸಮ್ಮಿನ ಆರಂಭದ ಹಂತದಲ್ಲಿದೇವೆಯೆ? ಆರಾಮಾಗಿ ನೇರವಾಗಿ ಯೋಚಿಸೋದು ನಮ್ಮಿಂದ ಸಾಧ್ಯವಾಗೊದಿಲ್ವೆ ಅನ್ಸತ್ತೆ.
  ಏನಾದರಾಗಲಿ ಅನಿವಾಸಿ. ನಿಮ್ಮ ಕಾಳಜಿಯನ್ನ ಅರ್ಥಮಾಡಿಕೊಂಡು ಮೆಚ್ಚಿದೆ. ಧನ್ಯವಾದ.
  -ಟೀನಾ.

 2. balagopal,
  ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್. ಹೌದು ಅದೊಂದು ಅಚ್ಚರಿಯೆ.
  ಟೀನಾ-
  ವೆಲ್‌ಕಂ ಬಾಕ್! 🙂
  ಯಾವುದೋ ಒಂದು ಸತ್ಯ ಎಂಬುದಕ್ಕಿಂತ – ವಾಸ್ತವದ ಹಲವು ಮುಖಗಳೇ ಹೆಚ್ಚು ಇಷ್ಟ ಮತ್ತು ಮುಖ್ಯ ನನಗೆ. ಅಂದ ಹಾಗೆ, ಈಗಿನ ಪರಿಸ್ಥಿತಿ ನೀವು ಹೇಳಿದ ಹಾಗೆ ಕಳವಳಕಾರಿಯೆ.
  ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

Up ↑

%d bloggers like this: