ನೀಲುಗಳು · ಪದ್ಯ

ಕನಸಿನ ಪ್ರಾಯ ಹಾಗು ಮರೆತದ್ದು

ಕನಸಿನ ಪ್ರಾಯ

“ಯೌವ್ವನದಲ್ಲಿ ಕನಸದವರಿಲ್ಲವಂತೆ
ನಡುವಯಸ್ಸಲ್ಲಿ ಕನಸದವರು ವ್ಯರ್ಥವಂತೆ
ಇಳಿವಯಸ್ಸಲ್ಲಿ ಕನಸುಳಿಸಿಕೊಂಡವರು ಧನ್ಯರಂತೆ”
ಎನ್ನುವುದು ಬರೀ ಪ್ರಾಸಕ್ಕಾಗಿ ಅಲ್ಲ, ಅಲ್ಲವೆ?

.

.

.

ಮರೆತದ್ದು

ನನ್ನ ಲೋಕಟ್ ವಯ್ಯಾರ ನೋಡಿ
ಹಿರಿಯತ್ತಿಗೆ ನಗುತ್ತಾ ನಲ್ಮೆಯಿಂದ-
“ನಿನಗೂ ಸೆರಗು ಬೇಕಾಗತ್ತೆ ನೋಡು ಒಂದು ದಿನ”
ಎಂದು ನಕ್ಕು – ಯಾಕೆಂದು ಹೇಳಿರಲಿಲ್ಲ.
ಹೇಳಿದ್ದರೂ ಕೇಳಿಸಿರಲಿಲ್ಲ.
ಕೇಳಿಸಿದ್ದರೂ ಈಗದು ಬೇಕಿಲ್ಲ.

Advertisements

9 thoughts on “ಕನಸಿನ ಪ್ರಾಯ ಹಾಗು ಮರೆತದ್ದು

  1. ಹಾಯ್,

    ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

    ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ

    ಧನ್ಯವಾದಗಳು,
    ಶಮ, ನಂದಿಬೆಟ್ಟ
    http://minchulli.wordpress.com

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s