ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

ನಾನು ಕವಿಯಲ್ಲ. ಆಗಾಗ ಪದ್ಯ ಬರೆಯುವ ಪ್ರಯತ್ನ ಮಾಡುತ್ತೇನಾದರೂ ಕೂಡ. ಏಕೆಂದರೆ ಕವಿಯಾಗಲು ಬೇಕಾದ ಕಾವ್ಯದ ವಿಸ್ತೃತ ಓದು, ಶ್ರದ್ಧೆಯ ಕೊರತೆ ನನ್ನಲ್ಲಿ ನನಗೇ ಕಂಡಿದೆ. ಆದರೆ ಅಡಿಗರು ಹೇಳುವಂತೆ ನನ್ನ ಪದ್ಯವನ್ನು ನಾನೇ ವಿಮರ್ಶೆಗೆ ಒಡ್ಡಿಕೊಳ್ಳುವುದು ಅಗತ್ಯ ಎಂದು ಬಗೆಯುತ್ತೇನೆ. ಕೆಲವೊಮ್ಮೆ ಪದ್ಯ ಸೊರಗುವಷ್ಟು ಅದನ್ನು ತಿದ್ದುತ್ತೇನೆ ಕೂಡ.

ಕೆಂಡಸಂಪಿಗೆಯಲ್ಲಿ ಯು.ಆರ್‍.ಅನಂತಮೂರ್ತಿ ಅನುವಾದಿಸಿದ ಈ ಒಂದು ಪದ್ಯ ಓದಿದೆ. ಪದ್ಯ ವಿಲಕ್ಷಣವಾಗಿ ಸೆಳೆಯಿತು. ಆದರೆ ಅನುವಾದ ಯಾಕೋ ಸರಿ ಅನಿಸಲಿಲ್ಲ. ಮೂಲವನ್ನು ಹುಡುಕಿ ಓದಿದೆ.

ಆಗಾಗ ಪದ್ಯ ಸುಲಭದಲ್ಲಿ ದಕ್ಕದೇ ಹೋದಾಗ ಕನ್ನಡಕ್ಕೆ ಅನುವಾದಿಸಿಕೊಂಡು ಓದುವ ಪ್ರಯತ್ನ ಮಾಡುತ್ತೇನೆ. ಟೈಮಿದ್ದರೆ ವಿಸ್ತೃತವಾಗಿ. ಇಲ್ಲದಿದ್ದರೆ ಕೆಲವು ಸಾಲುಗಳನ್ನು ಮನಸ್ಸಲ್ಲೆ ಅನುವಾದಿಸಿಕೊಳ್ಳುತ್ತೇನೆ. ಆಗ ಪದ್ಯದ ಸಾರ ನಿಚ್ಚಳವಾಗುತ್ತಾ, ಜತೆಜತೆಗೆ ಮೂಲ ಕವಿಯ ಕುಸುರಿ ಕೆಲಸ ತೆರೆದುಕೊಳ್ಳುತ್ತಾ ಹೋಗುತ್ತದೆ.

ನಾನಿಲ್ಲಿ ಚರ್ಚಿಸಬೇಕೆಂದುಕೊಳ್ಳುತ್ತಿರುವುದು ಕಾವ್ಯವನ್ನಲ್ಲ. ಕವಿತೆಯನ್ನೂ ಅಲ್ಲ. ಆದರೆ, ಅವೆರಡನ್ನೂ ಒಳಗೊಂಡೂ, ಅವೆರಡಕ್ಕೂ ಬೆಂಬಲವಾಗಬೇಕಾದ ಬೇಸಿಕ್ ಕವಿಯ ಕುಶಲ ಕೆಲಸವನ್ನು. ಪದಗಳ ಆಯ್ಕೆ, ಸಾಲಿನ ಕಟ್ಟು/ಒಡೆತ ಇತ್ಯಾದಿ. ಇದಕ್ಕೆ ಸ್ವಂತ ಪದ್ಯಗಳಿಗಿಂತ ಅನುವಾದದಲ್ಲಿ ಹೆಚ್ಚು ಚರ್ಚಿಸಲು ಅವಕಾಶವಿದೆ ಎಂದುಕೊಳ್ಳುತ್ತೇನೆ. ಏಕೆಂದರೆ, ನಿರ್ಣಾಯಕವಾದ ಒಂದು ಪಠ್ಯವನ್ನು ಇಟ್ಟುಕೊಂಡು ಅದಕ್ಕೆ ಹತ್ತಿರವಾಗುವಂತೆ ಕೆಲಸ ಮಾಡುವುದು. ಅದರಿಂದ ಬೇರಾಗುವುದಾದರೆ ಅದಕ್ಕೊಂಡು ಕಾರಣ ಕೊಟ್ಟುಕೊಳ್ಳುವುದು. ಸಾಧ್ಯವಾದರೆ ಮೂಲಕ್ಕಿಂತ ಮುಂದೆ ಹೋಗುವುದು.

ಹೀಗೆ ಚರ್ಚಿಸಲು ಅನಂತಮೂರ್ತಿಯವರ “ಭಾವಾನುವಾದ” (ಪದ್ಯಗಳ ಭಾವಾನುವಾದಗಳ ಬಗ್ಗೆ ನನ್ನ ಅನುಮಾನವಿದೆ) ಒಂದು ಕಡೆಯಾದರೆ. ನನ್ನದೇ ಅನುವಾದವನ್ನು ಈ ಚರ್ಚೆಗೆ ಒಡ್ಡಿಕೊಳ್ಳುತ್ತಿದ್ದೇನೆ. ಅನಂತಮೂರ್ತಿಯವರ ಅನುವಾದದಲ್ಲಿ ಕೆಲವು ಚೆಂದದ ಸಾಲುಗಳಿವೆ. ಆದರೆ, ನನಗವು ಬೇರೆ ರೀತಿ ಅನುವಾದಬೇಕಿತ್ತು ಅನಿಸಿತು. ಮೂಲಕವಿ/ಪದ್ಯಕ್ಕೆ ಹತ್ತಿರವಾಗಿದ್ದೂ, ಕನ್ನಡದಲ್ಲಿ ಓದಿಸಿಕೊಳ್ಳುವಂತೆ ಬರೆಯಬಹುದೇ ಎಂದು ನನ್ನ ಪ್ರಯತ್ನ

ಪೂರಕ ಓದಿಗೆ ಇಲ್ಲಿ ನೋಡಿ: ಇಷ್ಟಾರ್ ದೇವತೆಯ ಬಗ್ಗೆ

ಮೂಲ ಇಂಗ್ಲೀಷ್ ಪದ್ಯ:
Song for Ishtar
by Denise Levertov

The moon is a sow
and grunts in my throat
Her great shining shines through me
so the mud of my hollow gleams
and breaks in silver bubbles

She is a sow
and I a pig and a poet

When she opens her white
lips to devour me I bite back
and laughter rocks the moon

In the black of desire
we rock and grunt, grunt and
shine

ನನ್ನ ಅನುವಾದ:

ಶಶಿಯೊಬ್ಬಳು ಹಂದಿ
ನನ್ನ ಗಂಟಲಲ್ಲಿ ಗುರುಗುಟ್ಟುತ್ತಾಳೆ
ನನ್ನ ಟೊಳ್ಳಿನ ರಾಡಿಯನ್ನು ಬೆಳಗಿಸಲು
ಅವಳ ಮಹತ್ಕಾಂತಿ ನನ್ನೊಳಗೆ ಹೊಳೆದು
ಬೆಳ್ಳಿಗುಳ್ಳೆಗಳಲ್ಲಿ ಚೆದುರುತ್ತದೆ

ಅವಳು ಹಂದಿ
ಹಾಗು ನಾನು ಗಂಡು-
ಹಂದಿ ಹಾಗು ಕವಿ

ನನ್ನ ಕಬಳಿಸಲು
ತನ್ನ ಬೆಳ್ದುಟಿಗಳನ್ನು ಅವಳು ಬಿರಿದಾಗ
ನಾನು ಕಚ್ಚುತ್ತೇನೆ
ಆಗ ಉಲ್ಲಾಸ ಶಶಿಯನ್ನು ಓಲಾಡಿಸುತ್ತದೆ.

ಕಾಳ ಕಾಮನೆಯಲ್ಲಿ
ನಾವು ಓಲಾಡಿ ಗುರುಗುಡುತ್ತೇವೆ
ಗುರುಗುಟ್ಟಿ ಹೊಳೆಯುತ್ತೇವೆ

Advertisements

9 thoughts on “ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

Add yours

 1. ಮಾಯ್ಸ-
  ‘ಹಂದಿ ಗುಟುರುತ್ತಾಳೆ’ ಯಾಕೆ ತಪ್ಪು? ಹಂದಿ ಅಂದರೆ ಗಂಡು ಹಂದಿಯೇ ಆಗಿರಬೇಕ?
  ಪದ್ಯ ಚೆನ್ನಾಗಿಲ್ಲ, ಪರವಾಗಿಲ್ಲ. ಪ್ರಾಸಗೀಸ ಇದ್ದಿದ್ದರೆ ಇನ್ನೂ ಕೆಟ್ಟದಾಗಿರುತ್ತಿತ್ತು! 🙂
  ಇಲ್ಲೊಂದಿಷ್ಟು ಬೇರೆಯವರ ಅನುವಾದಗಳು/ಚರ್ಚೆ ಇವೆ ನೋಡಿ!
  http://www.sampada.net/blog/anivaasi/07/02/2009/16612

 2. ’ಹಂದಿ ಗುಟುರುತ್ತದೆ’ ಸರಿಯಾದ ಸಾಲು

  ಕನ್ನಡದಲ್ಲಿ ಮನುಶ್ಯರಲ್ಲದ ಎಲ್ಲ ಸಂಗತಿಗಳು ನಪುಂಸಕ.

  ’ಹಸು ಬಂತು, ಎತ್ತು ಬಂತು, ಹಂದಿ ಬಂತು, ಹೆಣ್ಣುಹಂದಿ ಬಂತು, ಹೆಣ್ಣುನಾಯಿ ತಿಂತು.’ ಹೊರತು

  ’ಹಸು ಬಂದಳು, ಎತ್ತು ಬಂದನು, ಹಂದಿ ಬಂದಳು/ನು, ಹೆಣ್ಣುಹಂದಿ ಬಂದಳು, ಹೆಣ್ಣುನಾಯಿ ತಿಂದಳು, ’ಅಲ್ಲ.

 3. ಸರಿ, ‘ಗಂಗೆ ಬಾರೆ, ಗೌರಿ ಬಾರೆ’ ಹೀಗೆಂದು ಕರೆದದ್ದು ಹುಡುಗಿಯರನ್ನಲ್ಲ ದನಗಳನ್ನಲ್ಲವೆ? 🙂
  ಅಂದ ಹಾಗೆ, ಪದ್ಯ/ಕತೆಗಳಲ್ಲಿ ವ್ಯಾಕರಣ ಕೆಡಸುವುದೂ ಯೋಚಿಸುವಂತೆ ಮಾಡುವ ಇನ್ನೊಂದು ದಾರಿ!

 4. ಗಂಗೆ ಬಾರೇ ಗೌರಿ ಬಾರೇ ತಾಯಿ ಬಾರೆ ಎಂದು ಕರೆದುದು ಕವಿತೆಯಲ್ಲೇ! ಅದಕ್ಕೆ ಕವನ ಎಂದು ವ್ಯಾಕರಣವನ್ನು ಬಿಡುವುದು.

  ಆದರೆ ಚಂದ್ರ ನಮಗೆ ಗಂಡು, ಹೆಣ್ಣಲ್ಲ. ಇದೂ ಕೂಡ ಹಡಗು ಇಂಗ್ಲಿಶರಿಗೆ ಹೆಣ್ಣು ಆದ ಹಾಗೆ….

  ವ್ಯಾಕರಣವಾದರೂ ಕೆಡೆಸಿಕೊಳ್ಳಿ.. ಈ ತರದ ಪದ್ಯಗಳು ಅರ್ಥವಾಗದೇ ತುಕ್ಕು ಹಿಡಿಯುವುದಂತೂ ದಿಟ….

  ಆದರೂ ಯಾಕೆ ಬಿಡಿ……. ಏನೋ ಆಗಾಧವಾದ ಅರ್ಥವಿದೆ. ನನಗೇ ಅರ್ಥಮಾಡಿಕೊಳ್ಳೊಷ್ಟು ಬುದ್ಧಿಶಕ್ತಿ ಇಲ್ಲ ಬಿಡಿ….

 5. ಇರಲಿ ಮಾಯ್ಸ-
  ಏನೂ ಅರ್ಥ ಆಗಲಿಲ್ಲ ಅಂತ ಸುಮ್ಮನೆ ತಮಾಷೆ ಯಾಕೆ? ಅಗಾಧವಾದ ಅರ್ಥ ನನಗೆ ಗೊತ್ತಿಲ್ಲ. “ಸಾಮಾನ್ಯ” ಅರ್ಥನೂ ಗೊತ್ತಿಲ್ಲ. ನನಗೆ ಇಷ್ಟ ಆಗಿದ್ದು – ಈ ಪದ್ಯದ ಅನುಭವ ಅಷ್ಟೆ.
  ಇದನ್ನ ಗುರು ಬಾಳಿಗರು ಎಲ್ಲಮ್ಮನ ಹಾಡು ಮಾಡಿದ್ದಾರೆ!

  ಇದೆಲ್ಲಾ ಬುದ್ಧಿಶಕ್ತಿ ಸಮಾಚಾರಾನೆ ಅಲ್ಲ ಅನ್ಸತ್ತೆ!
  ನಿಮ್ಮ ಅಂಬಾರಿ ಬ್ಲಾಗು ಸಕತ್ತಾಗಿದೆ! ಓದಿ ತುಂಬಾ ಖುಷಿಯಾಯ್ತು…

 6. ಗುರುಬಾಳಿಗರ ಹಾಡು ಹುಡುಕಿ ಓದ್ತೀನಿ…

  ಒಂದು ಮಾತು ನೇರವಾಗಿ ಹೇಳ್ತೀನಿ.. ನೀವು ಬೇಜಾರಾಗಲ್ಲ ಅದಕ್ಕೆ ಎಂದು ಗೊತ್ತು…

  ನಿಮ್ಮ ಗದ್ಯ ಬರಹಗಳು ನನಗೆ ದಿಟವಾಗಲು ಕವನದಂತೆ. ಬಹಳ ಓರಣದ ಅಚ್ಚುಕಟ್ಟಾದ ರಮ್ಯವಾದ ಸಾಲುಗಳು, ಪದಗಳು …

  ಆದರೆ ನಿಮ್ಮ ಪದ್ಯ.. ಕಗ್ಗಂಟು..

  ನನ್ನ ’ಅಂಬಾರಿ’ ಬ್ಲಾಗ್ಗೆ ನಿಮ್ಮ ಕಮೆಂಟು ಮೆರಗು ತಂತು. ನನ್ನಿ.!

 7. Khavi,
  ನಿಮ್ಮ ಮೆಚ್ಚುಗೆಯ ಮಾತಿಗೆ ಥ್ಯಾಂಕ್ಸ್. ಹೀಗೆ ಬರ್ತಿರಿ 🙂
  ಮಾಯ್ಸ-
  >>ನಿಮ್ಮ ಗದ್ಯ ಬರಹಗಳು ನನಗೆ ದಿಟವಾಗಲು ಕವನದಂತೆ. ಬಹಳ ಓರಣದ ಅಚ್ಚುಕಟ್ಟಾದ ರಮ್ಯವಾದ ಸಾಲುಗಳು, ಪದಗಳು …
  ಸದ್ಯ ಪೂರ್ತಿ ನಷ್ಟ ಆಗಲಿಲ್ಲ ಅಂದಂಗಾಯ್ತು! 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

Up ↑

%d bloggers like this: