ಗೋಮೂತ್ರಮಹಿಮೆ [Banned on ಸಂಪದ]

ಭಕ್ತಿ ತುಳುಕಾಡಿ
ಭಗವದ್ಗೀತೆಯ ನ್ಯೂ
ಎಡಿಷನ್-ಹಾರ್ಡ್ ಬೌಂಡ್ ಕಾಪಿಯನ್ನು
ಗೋಮೂತ್ರದಲ್ಲಿ ಅದ್ದಿದೊಡನೇ
ಭಕ್ತಿಸ್ಖಲನ; ಕಾಮ,
ಫುಲ್‌ಸ್ಟಾಪು,
ಕೋಲನ್ನು, ಸೆಮಿ-ಕೋಲನ್ನು,
ಅಪಾಸ್ಟಫಿ ಎಲ್ಲವೂ ಗಂಜಲಮಯ
ಸುತ್ತಲೂ ಪವಿತ್ರಾತ್ಮಗಳ
ಎತ್ತುಚ್ಚೆಯ ಘಾಟೋ ಘಾಟು

Advertisements

8 thoughts on “ಗೋಮೂತ್ರಮಹಿಮೆ [Banned on ಸಂಪದ]

Add yours

 1. ಭಗವದ್ಗೀತೆಯನ್ನು ಪವಿತ್ರ ಎಂದು ಭಾವಿಸುವವರ ಮನಸ್ಸಿಗೆ ಘಾಸಿ ಉಂಟುಮಾಡುವುದೇ ಉದ್ದೇಶವೇ? ಏನು ಸಾಧಿಸಿದಿರಿ? positive ಆಗಿಲ್ಲ ಎಂದು ಹೇಳಲು ಬೇಸರವಾಗುತ್ತಿದೆ.

 2. ಕುಮಾರ್‌ರವರೆ,
  ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
  ನನಗೆ ಕಂಡ ಹಾಗೆ ಹೇಳಿದ್ದು – ಮನಸ್ಸಿಗೆ ಘಾಸಿ ಯಾಕೆ ಮಾಡಬೇಕು? ಏನು ಸಾಧಿಸಿದಿರಿ ಎಂದು ಎಲ್ಲ ಬರಹಗಳ ಬಗ್ಗೆಯೂ ಕೇಳಬಹುದು. ಇಲ್ಲಿ ನೆಗೆಟಿವೆ ಏನು ಎಂದು ಹೇಳುತ್ತೀರ?
  sharat,
  ಟೀಕೆ ಅನ್ನುವುದಕ್ಕಿಂತ – ಇವುಗಳ ಗಮನ ಹರಿಸಬೇಕು ಅನ್ನುವುದು ಮುಖ್ಯ. ಥ್ಯಾಂಕ್ಸ್.

 3. ನೀವು ಹೇಳೋದು ಸರಿ. ನಾವು ಇನ್ನೂ ಎಲ್ಲೋ ಇದ್ದೇವೆ. ರೋಗ ಬಂದರೆ ಆಸ್ಪತ್ರೆಗೆ ಹೋಗುವ ಬದಲು ದೇವಸ್ಥಾನಕ್ಕೋ ತಾಯತ ಕಟ್ಟುವವರ ಬಳಿಗೋ ಹೋಗುವವರಲ್ಲವೇ ನಾವು ? ಹಾಗಂತ ಗೊಮೂತ್ರದಂಥ ಹಲವು ವಸ್ತುಗಳಿಗೆ ಔಶಧೀಯ ಗುಣಗಳಿರುವುದು ನಿಜವಷ್ಟೆ. (ಆಯುರ್ವೇದದಲ್ಲಿ “ಗೊಮೂತ್ರಾಸವ” ಎಂಬ ಕಷಾಯ ಇದೆ.) ಹಾಗಂತ ಸರ್ವ ರೋಗಕ್ಕೆ ಔಶಧಿ ಅದುವೇ ಅಂತ ಭಾವಿಸುವುದೂ ತಪ್ಪಾದೀತು ಆಲ್ವಾ..

  1. ಮಿಂಚುಳ್ಳಿ,
   >>ಹಾಗಂತ ಗೊಮೂತ್ರದಂಥ ಹಲವು ವಸ್ತುಗಳಿಗೆ ಔಶಧೀಯ ಗುಣಗಳಿರುವುದು ನಿಜವಷ್ಟೆ.

   ಹೌದೆ? ನಾವು ಮದ್ದುಗಳನ್ನು ಬಳಸುವ ಮುನ್ನ ಅದರ ಪರಿಣಾಮದ ಬಗ್ಗೆ ನಡೆಸುವ ನಿಷ್ಠುರ ಹಾಗು ರಿಗರಸ್ ಪರೀಕ್ಷೆಗೆ “ಗೋಮೂತ್ರ”ವನ್ನೂ ಒಳಪಡಿಸಿದ್ದೇವೆಯೆ? ಅದರ ಬಗ್ಗೆ ವೈಜ್ಞಾನಿಕ ಕಾಣ್ಕೆ ಇದ್ದರೆ ದಯವಿಟ್ಟು ತಿಳಿಸುವಿರ?

 4. ಗೋಮೂತ್ರ ಮಾತ್ರವಲ್ಲ ಯಾವ ಮದ್ದುಗಳನ್ನು ತಾನೇ ನಾವು ಪರಿಣಾಮ ಮತ್ತು ವೈಜ್ಞಾನಿಕ ಸತ್ಯ ತಿಳಿದುಕೊಂಡು ಬಳಸುತ್ತೇವೆ ? ಬ್ರೂಫಿನ್ ಥರದ ಸಾವಿರಾರು ಮಾತ್ರೆಗಳನ್ನು ಸುಲಭೋಪಾಯ ಎಂದು ತಿನ್ನುವ ಜನ. ಹಲವಾರು ರಾಷ್ಟ್ರಗಳಲ್ಲಿ ಆರೋಗ್ಯ ವಿರೋಧಿ ಎಂದು ಬ್ಯಾನ್ ಆದ ಮದ್ದುಗಳು ನಮ್ಮಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೇಲ್ ಆಗ್ತಾವೆಂದು ಕೇಳಿ ಬಲ್ಲೆ.

  ಇನ್ನು ಗೋಮೂತ್ರ ಸೇರಿಸಿ ಮಾಡಿರುವ ಮದ್ದು ನಮ್ಮ ಕ್ಲಿನಿಕ್ ನಲ್ಲಿದೆ. (ನನ್ನ ಹುಡುಗ ಆಯುರ್ವೇದ ವೈದ್ಯರು) ಅದು ಶತಮಾನ ಹಿಂದಿನ “ವೈದ್ಯರತ್ನಂ” ಎಂಬ ಕಂಪನಿಯ ತಯಾರಿಕೆ. ಅವರು ಯಾವುದನ್ನೂ ಪರೀಕ್ಷೆಗೆ ಒಳಪಡಿಸದೆ ಮತ್ತು ಪರಿಣಾಮಗಳ ಅಧ್ಯಯನ ನಡೆಸದೆ ಮದ್ದು ಕೊಡುವುದೇ ಇಲ್ಲ. ಬರಿಯ ಲಾಭಾಸಕ್ತಿಯಿಂದ ನಡೆವ ಕಂಪನಿ ಅದಲ್ಲ. ಆದ್ದರಿಂದ ಅದರ ಬಗ್ಗೆ ನಂಗೆ ನಂಬಿಕೆ ಹೊರತು ನಾನು ಖುದ್ದಾಗಿ ಯಾವುದೇ ಅಧ್ಯಯನ ಮಾಡಿಲ್ಲ. ನಿಮಗೆ ಮಾಹಿತಿ ಬೇಕಾದಲ್ಲಿ ತಿಳಿದು ಹೇಳಲು ಖಂಡಿತ ಪ್ರಯತ್ನಿಸುವೆ. ಆದ್ರೆ ನಂಗೆ ಸಮಯ ಸಿಕ್ಕಿದಾಗ. ಅರ್ಜಂಟ್ ಆಗಿ ಆಗುವ ಕೆಲಸ ಅಲ್ಲ.

  ಮತ್ತೆ ಇನ್ನೊದು ವಿಚಾರ ಹೇಳಬಯಸುವೆ. ಹಲವು ಪೂಜೆಗಳ ಸಂದರ್ಭದಲ್ಲಿ ಪಂಚಗವ್ಯ ಎಂಬೊಂದು ಪ್ರಸಾದ ತಯಾರಿಸುತ್ತಾರೆ. ಅದರಲ್ಲಿನ ಪಂಚ ವಸ್ತುಗಳಲ್ಲಿ ಗೋಮೂತ್ರ ಕೂಡ ಒಂದು. ಅದು ಆರೋಗ್ಯಕ್ಕೆ ಹಾನಿಕರ ಎಂದಿದ್ದಲ್ಲಿ ನಮ್ಮ ಪೂರ್ವಜರು ಅದನ್ನು ಬಳಸುತ್ತಿರಲಿಲ್ಲ ಅನಿಸುತ್ತೆ. ಯಾಕೆಂದರೆ ನಾನು ಗಮನಿಸಿದಂತೆ ಬಹಳಷ್ಟು ನಂಬಿಕೆ ಮತ್ತು ಆಚರಣೆಗಳ ಹಿಂದೆ ವೈಜ್ಞಾನಿಕ ಹಿನ್ನೆಲೆ ಇರುವುದು ಕಾಣಿಸಿದೆ. ಈ ನಿಟ್ಟಿನಲ್ಲಿ ನೋಡಿದರೆ ಅದರಲ್ಲಿ ಮದ್ದಿನ ಗುಣ ಇರಬಹುದು ಎನಿಸುತ್ತೆ.

  ಮತ್ತೆ ಹಿಂದಿನ ಕಾಲದಲ್ಲಿ ಗೋಮೂತ್ರವನ್ನು ಗಿಡಗಳಿಗೆ ಕೀಟನಾಶಕದಂತೆ (ಅದೂ ಒಂದು ಮದ್ದು ತಾನೇ) ಸಿಂಪಡಿಸುತ್ತಿದ್ದರು ಅಂತ ಅಜ್ಜಿ, ಮಾವಂದಿರು ಹೇಳುತ್ತಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ನೋಡಿದರೆ ಅದರಲ್ಲಿ ಪಾಸಿಟಿವ್ ಆದೊಂದು ಅಂಶವಿದೆ ಎಂಬುದು ನಂಗೆ ಅನಿಸಿತು.

  ಆದ್ರೆ ನನ್ನನ್ನು ಕಾಡುವ ವಿಷಯ ಏನು ಗೊತ್ತಾ ? ಪರದೇಶಗಳಲ್ಲಿ ನಿಷೇಧ ಆಗಿರುವ ಮದ್ದುಗಳನ್ನೂ ಯಾವುದೇ ಸಂಶಯ ಇಲ್ಲದೆ ಬಳಸುವುದರ ವಿರುಧ್ಧ ಯಾರೂ ಚಕಾರ ಎತ್ತುವುದಿಲ್ಲ ಯಾಕೆ ? ಮತ್ತು ನಮ್ಮಲ್ಲಿನ ಮದ್ದುಗಳ ಬಗ್ಗೆ ಬರೀತಾತ್ಸಾರವೇ ಹೊರತು ಅದರ ಬಗ್ಗೆ ಅಧ್ಯಯನ ಮಾಡಬೇಕೆಂಬ ಹಂಬಲ ಯಾರಲ್ಲೂ ಯಾಕಿಲ್ಲ ? ನಂಗೆ ಅಂತ ಒಂದು ಅವಕಾಶ ಮತ್ತು ಸಂಬಂಧಿಸಿದಂತೆ ವಿದ್ಯೆ ಇದ್ದಿದ್ದರೆ ನಾನು ಮಾಡುತ್ತಿದ್ದೆ. ಆದರೆ ವಿಜ್ಞಾನ ಚೂರು ಕೂಡ ತಲೆ ಹೊಕ್ಕದ ಐಟಂ.

  ಮದ್ದು ಯಾವುದೇ ಆಗಿರಲಿ, ಅದರ ಪರಿಣಾಮಗಳ ಅಧ್ಯಯನ ನಡೆಸದೆ ಬಳಸುವುದು ಬಹಳ ಅಪಾಯಕಾರಿ ಎಂಬುದು ಸತ್ಯ. ಗೋವು ಪೂಜನೀಯ ಎಂಬ ಒಂದೇ ಕಾರಣಕ್ಕೆ ಅಧ್ಯಯನ ನಡೆಸದೆ ಅದರ ಉತ್ಪತ್ತಿಗಳನ್ನು ನಾವು ಮದ್ದು ಎಂಬಂತೆ ಬಳಸುವ ವಿಚಾರಕ್ಕೆ ವಿರೋಧಿ ನಾನು. ಬೆಂಗಳೂರಲ್ಲಿ ಪ್ಲಾಸ್ಟಿಕ್ ತಿನ್ನುವ ಗೋವುಗಳ ಹಾಲು ಕೂಡ ಕೆಟ್ಟ ವಾಸನೆ ಇರುತ್ತದೆ. ಇದೊಂದು ವಸ್ತು ಮಾತ್ರವಲ್ಲ ನಮ್ಮ ಸನಾತನ ವೈದ್ಯ ಪಧ್ಧ್ತಿಯಲ್ಲಿ ನಮ್ಮ ಸುತ್ತ ಸಿಗುವ ಹಲವು ವಸ್ತುಗಳಲ್ಲಿನ ಔಶಧೀಯ ಗುಣಗಳನ್ನು ಕಂಡುಕೊಂಡು ಬಳಸುತ್ತಿದ್ದರು. ಆದ್ರೆ ನಮಗೆ ಫಾಸ್ಟ್ ರಿಲೀಪ್ ಬೇಕಿದ್ದರಿಂದ ಅದು ಮೂಲೆಗುಂಪಾಗಿದೆ ಅಷ್ಟೇ. ನೀವು ಇಲ್ಲಿ ಬಂದಾಗ ಬಂದ್ರೆ ನನ್ನ ಹುಡುಗ ಗಿರಿ, ನನ್ನ ತಮ್ಮ ಮಧು ಇವೆಲ್ಲವುಗಳ ಬಗ್ಗೆ ಬೇಕಾದಷ್ಟು ಮಾಹಿತಿ ನೀಡಬಲ್ಲರು.

  1. shamaರವರೆ,
   ನಿಮ್ಮ ಧೀರ್ಘ ಪ್ರತಿಕ್ರಿಯೆಗೆ ಮೊದಲಿಗೆ ಥ್ಯಾಂಕ್ಸ್.
   ನೀವು ಹಲವು ವಿಷಯಗಳನ್ನು ಹೇಳಿದ್ದೀರ.
   ೧) ಬ್ಯಾನ್ ಆದ ಮದ್ದುಗಳನ್ನು ನಮ್ಮಲ್ಲಿ ಮಾರಲಾಗುವುದನ್ನು ತಡೆಯಬೇಕು. ಅದನ್ನು ಯಾರೂ ಇಲ್ಲ ಎನ್ನುತ್ತಿಲ್ಲ. ನನಗೆ ಗೊತ್ತಿರುವ ಮಟ್ಟಿಗೆ ಡಾಕ್ಟರರು ತಿಳಿದಾಗ ಅದರ ಬಗ್ಗೆ ಎಚ್ಚರಿಕೆ ಕೊಡುತ್ತಾರೆ ಕೂಡ.
   ೨) ಗೋಮೂತ್ರದ ವೈಜ್ಞಾನಿಕ ಅರಿವಿನ ಬಗ್ಗೆ ಗಂಭೀರವಾದ ಅಧ್ಯಯನ ನಡೆದಿರುವ ಮಾಹಿತಿ ನನಗೆ ಎಲ್ಲೂ ಸಿಕ್ಕಿಲ್ಲ.
   ೩) ಕೀಟನಾಶಕಗಳು ಮನುಷ್ಯರಿಗೆ ಮದ್ದಾಗಬಹುದು ಎಂದು ಹೇಳುವಂತಿಲ್ಲ.
   ೪) ಮದ್ದಿನ ಬಗ್ಗೆ ವೈಜ್ಞಾನಿಕ ಅಧ್ಯಯನಕ್ಕೆ “ನಮ್ಮದು – ಅವರದು” ಎಂದು ಇರುವುದಿಲ್ಲ. ಯಾವುದೇ ಪರಿಣಾಮಕಾರಿ ಮದ್ದಾದರೂ ಸರಿಯೇ. ಹಾಗಲ್ಲದೇ ಇದ್ದಿದ್ದರೆ ಈವರೆಗಿನ ವೈದ್ಯಕೀಯ ಬೆಳವಣಿಗೆ ಸಾಧ್ಯವಾಗುತ್ತಿರಲಿಲ್ಲ. ವಿಜ್ಞಾನಿಗಳಿಗೆ ತಮ್ಮ ಕೆಲಸದಿಂದ ಒಳ್ಳೆಯದಾಗುವುದಿದ್ದರೆ ಖುಷಿಯೇ ಎಂದು ನನ್ನ ಅನಿಸಿಕೆ.
   ೫) ಹಳೆಯ ಕಾಲದ ಮದ್ದಿನ ಬಳಕೆಯಲ್ಲಿ ವೈಜ್ಞಾನಿಕ ಅರಿವಿಗಿಂತ empirical evidenceನ ಆಧಾರ ಹೆಚ್ಚು ಇದ್ದಿದ್ದು ನಮಗೆಲ್ಲಾ ಗೊತ್ತಿದೆ ಅಲ್ಲವೆ? ವಿಜ್ಞಾನಕ್ಕೆ ಅದಕ್ಕಿಂತ ಹೆಚ್ಚಿನ ಸಂಶೋಧನೆಯ ಅಗತ್ಯ ಇರುತ್ತದೆ.
   ವಂದನೆಗಳೊಂದಿಗೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

Up ↑

%d bloggers like this: