ಮನದಾಟ

subhashita1
ಸು-
ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ
ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ
ಎಗ್ಗಿಲ್ಲದೆ ಅಲೆದಾಡಲು ಬಿಟ್ಟುಕೊಂಡೆ ಅವಳನ್ನು
ನನ್ನ ಮನದ

ಗೂಡೊಳಗೆ
ಏಕಾಂತದ ಸಂಗದಲ್ಲಿ ಅವಳಂಗದ
ಅನಂಗವಾಸನೆ ಹಾಗು ಸೋಂಕಿನೊತ್ತಲ್ಲೇ
ಮುಳುಗಿ ಮೈ
ಮರೆತು ಎಚ್ಚರ

ವಾಗಿದ್ದು
ಅವಳೊದ್ದು ಹೋಗುತ್ತ ಕತ್ತು ಕೊಂಕಿಸಿದಾಗ-
‘ಕವಿಯಾದರೇನು, ಗಂಡುಮನವೇ ಇಷ್ಟು’ ಎಂದು
ಮೆದುಳಿಗೆಳೆದ ಬರೆ
ಗೆಲ್ಲಾ ಮದ್ದು ಹೇಳಲು ಮೇಷ್ಟರಿಗೇನು
ಗೊತ್ತಿತ್ತು ಈ
ವ್ಯಾಕರಣದ ಜಿಗುಟು.

[ಸ್ಪೂರ್ತಿ : ಈ ಕೆಳಗಿನ ಧರ್ಮಕೀರ್ತಿಯ ಸುಭಾಷಿತ]

ಎರಡು ಭಿನ್ನ ಸಂಸ್ಕೃತ ಪಾಠ:

ನಪುಂಸಕಮಿತಿ ಜ್ಞಾತ್ವಾ ತಾಂ ಪ್ರತಿ ಪ್ರೇಷಿತಂ ಮಯಾ|
ಮನಸ್ ತತ್ರೈವ ರಮತೇ ಹತಾಃ ಪಾಣಿನಿನಾ ವಯಮ್

[ಧರ್ಮಕೀರ್ತಿ, ೧೨೩೨, ವಲ್ಲಭದೇವನ ಸುಭಾಷಿತಾವಳಿ]

ನಪುಂಸಕಮಿತಿ ಜ್ಞಾತ್ವಾ ತಾಂ ಪ್ರತಿ ಪ್ರೇಷಿತಂ ಮನಃ
ರಮತೇ ತಚ್ಚ ತತ್ರೈವ ಹತಾಃ ಪಾಣಿನಿನಾ ವಯಮ್

[ಧರ್ಮಕೀರ್ತಿ, ೪೭೮:ವಿದ್ಯಾಕರನ ಸುಭಾಷಿತರತ್ನಕೋಶ]

ಸಹಾಯಕ್ಕೆ ಬಂದ ಮೂರು ಇಂಗ್ಲೀಷ್ ಅನುವಾದಗಳು:

Glory be to Panini
Grammarian of antiquity
Who says that “heart” is neuter.
Thinking this would suit her
I sent her my heart
Mysterious conjugation!
It suffered a declension!
I do not think that Panini
Grammarian of antiquity
Explains such art

[P.Lal, Sanskrit Love lyrics]

Knowing that ‘heart’ is neuter,
I sent her mine;
but there it fell in love;
so Panini undid me.

[Daniel H. H. Ingalls, An anthology of Sanskrit Court poetry]

The grammar-books all say that ‘mind’ is neuter,
And so I thought it safe to let my mind
Salute her.
But now it lingers in embraces tender:
For Panini made a mistake, I find,
In gender.

[John Brough, Poems from the Sanskrit]

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

%d bloggers like this: