ಗುದ್ದಾಡುವ ಮನಗಳು

ತುಂಬಾ ದಿನದ ಹಿಂದೆ ತಂದಿಟ್ಟುಕೊಂಡು ನೋಡಿರದ september ಎಂಬ ಆಸ್ಟ್ರೇಲಿಯದ ಚಿತ್ರವನ್ನು ಮೊನ್ನೆ ನೋಡಿದೆ. ೧೯೬೮ರಲ್ಲಿ ಅಬಾರಜಿನಿ ಕೆಲಸಗಾರರಿಗೂ ಬಿಳಿಯರಂತೇ ಸಮಾನ ಸಂಬಳ ಕೊಡಬೇಕೆಂಬ ಕಾನೂನು ಬಂದ ಹಿನ್ನೆಲೆಯಲ್ಲಿ ನಡೆಯುವ ಚಿತ್ರ. sept_01

ಹದಿನೈದು ವರ್ಷ ವಯಸ್ಸಿನ ಎಡ್ ಎಂಬ ಬಿಳಿ ಹುಡುಗನ ಹಾಗು ಪ್ಯಾಡಿ ಎಂಬ ಕಪ್ಪು ಹುಡುಗನ ಗೆಳೆತನದ ಚಿತ್ರ. ಎಡ್ ಶಾಲೆಗೆ ಹೋಗಿ ವಾಪಾಸು ಬಸ್ಸಲ್ಲಿ ಬಂದಿಳಿದಾಗ, ಮನೆಯಲ್ಲೇ ಕೆಲಸ ಮಾಡಿಕೊಂಡಿರುವ ಪ್ಯಾಡಿ ಹೋಗಿ ಅವನ ಜತೆ ಮಾತಾಡುತ್ತಾ ಆಟವಾಡುತ್ತಾ ಮನೆಗೆ ಓಡುವುದು ದಿನಚರಿ. ಕಣ್ಣಗಲಕ್ಕೂ ಇರುವ ಗೋಧಿಹೊಲದ ನಡುವೆ ನಾಕು ಕಂಬ ಹುಗಿದುಕೊಂಡು, ಹಗ್ಗ ಕಟ್ಟಿ ಕುಸ್ತಿ ಕಣ ಮಾಡಿಕೊಂಡು, ಒಬ್ಬೊಬ್ಬರು ಒಂದೊಂದು ಗ್ಲವ್ ಹಾಕಿಕೊಂಡು ಕುಸ್ತಿ ಆಡುವುದು ಇಬ್ಬರಿಗೂ ಪ್ರೀತಿ.sept_02

ಅವರ ಅಪ್ಪಂದಿರು ಚಿಕ್ಕಂದಿನ ಗೆಳೆಯರು. ಎಡ್‌ನ ಅಪ್ಪನ ಹೊಲದಲ್ಲಿ ಪ್ಯಾಡಿಯ ಅಪ್ಪ ಕೆಲಸಗಾರ. ಕಾನೂನಿನ ಒತ್ತಡ ಎಡ್‌ನ ಅಪ್ಪನ ಮೇಲೆ ಮಾಡಿದಷ್ಟೇ ಪರಿಣಾಮ ಪ್ಯಾಡಿಯ ಅಪ್ಪನ ಮೇಲೂ ಮಾಡುತ್ತದೆ. ಆದರೆ ಪ್ಯಾಡಿಯ ಅಪ್ಪ ತನ್ನ ಧೀರ್ಘ ಕಾಲದ ಗೆಳೆತನದ ಆಧಾರದ ಮೇಲೆ ಒಂದು ಒಪ್ಪಂದಕ್ಕೆ ಬಂದುಕೊಂಡಿರುತ್ತಾನೆ. sept_05ಅದು ಸುಲಭವಲ್ಲದಿದ್ದರೂ, ಅದರಲ್ಲಿ ಅಪಾರ ನೋವಿದ್ದರೂ ಅವನಿಗೆ ಅನಿವಾರ್ಯವಾಗಿರುತ್ತದೆ. ಈ ಕಾನೂನಿನಿಂದಾಗಿ ಹಲವು ಕುಟುಂಬಗಳು ಹೊಲಗಳಿಂದ ಎತ್ತಂಗಡಿಯಾಗುತ್ತಿರುವುದು ಅವನ ಕಣ್ಣೆದುರಿನ ವಾಸ್ತವ.

ಈ ನಡುವೆ ಎಡ್‌ನಿಗೆ ತನ್ನ ಶಾಲೆಗೆ ಬಂದ ಹೊಸ ಹುಡುಗಿಯ ಪರಿಚಯ ಒಡನಾಟ. ಅವಳ ಮನೆಯ ಹತ್ತಿರ ಕತ್ತಲಲ್ಲಿ ಪ್ಯಾಡಿಗೆ ಎಡ್‌ನಿಂದಾಗಿ ಆಗುವ ನೋವು ಅವಮಾನ. ಅದಕ್ಕೆ ಹುಡುಗರು ತಮ್ಮದೇ ಕುಸ್ತಿಯ ಕಣದಲ್ಲಿ ಉತ್ತರ ಕಂಡುಕೊಳ್ಳುತ್ತಾರೆ. sept_03ಆದರೆ ಅದು ಅಷ್ಟಕ್ಕೆ ನಿಲ್ಲದೆ, ಪ್ಯಾಡಿಯನ್ನು ಆಳದಲ್ಲಿ ಎಚ್ಚರಿಸಿರುವುದು ನಮಗೆ ಗೊತ್ತಾಗುವುದು- ಅವನು ಎಡ್‌ನ ಅಪ್ಪನಿಗೆ ಎದುರು ನಿಲ್ಲುವುದರಲ್ಲಿ. ಅಪ್ಪನೂ ಎಡ್ ಅಪ್ಪನ ಪರವಾಗಿ ನಿಂತಾಗ, ತನ್ನ ಬಟ್ಟೆ ಬರೆ ಒಂದು ಬ್ಯಾಗಲ್ಲಿ ತುಂಬಿಕೊಂಡು, ಅಮ್ಮಕೊಟ್ಟ ಸಣ್ಣ ಬುತ್ತಿ ಹಿಡಕೊಂಡು ಮನೆ ಬಿಟ್ಟು ನಡೆದುಬಿಡುತ್ತಾನೆ. ಅವನನ್ನು ತಡೆಯಲಾರದ ಒದ್ದಾಟದಲ್ಲಿ ತಾಯಿ ಕಣ್ಣೀರಿಟ್ಟು ಚಡಪಡಿಸುತ್ತಾಳೆ.

sept_04ಪ್ಯಾಡಿಯ ಅಮ್ಮ ಅಳುವಾಗ, ಎಡ್‌ನ ಅಮ್ಮನೂ ಬೇರೆಯೇ ಕಾರಣಕ್ಕೆ ಅಳುತ್ತಿರುತ್ತಾಳೆ.

ಗೆಳತಿಯ ಮನೆಯೆದುರು ಪ್ಯಾಡಿಗೆ ತಾನು ಮಾಡಿದ ತಪ್ಪಿನಿಂದ ಹಿಂಸೆಪಡುವ ಎಡ್ ತನ್ನ ಜೀಪು ತೆಕ್ಕೊಂಡು ಪ್ಯಾಡಿಯನ್ನು ಹಿಂಬಾಲಿಸುತ್ತಾನೆ. ಊರ ಬಳಿ ಒಬ್ಬರನ್ನೊಬ್ಬರು ಮನ್ನಿಸಿಬಿಡುತ್ತಾರೆ. ಸೆಪ್ಟೆಂಬರಿನಲ್ಲಿ ಊರಿಗೆ ಬಂದಿಳಿವ ಕುಸ್ತಿ ಪ್ರದರ್ಶನಕ್ಕೆ ಇಬ್ಬರೂ ಮೊದಲಿಂದಲೂ ಕಾದಿರುತ್ತಾರೆ. ಅದರ ಎದುರು ಈಗ ಪ್ಯಾಡಿಯನ್ನು ಕೊನೆಯ ಬಾರಿಗೆಂಬಂತೆ ಎಡ್‌ ಬೀಳ್ಕೊಡುತ್ತಾನೆ.

ಬಿತ್ತರಕ್ಕೂ ಗೋಧಿ ಹೊಲ ಕಣ್ಣುತುಂಬುವ ನೆಲದ ಹರಹಿನಲ್ಲಿ,  ಯಾವುದೇ ಅಬ್ಬರದ ನಾಟಕೀಯತೆ ಇಲ್ಲದೆ,  ಆಸ್ಟ್ರೇಲಿಯದ ಚರಿತ್ರೆಯ ಒಂದು ಮುಖ್ಯ ತಿರುವಿನಲ್ಲಿ, ಗುದ್ದಾಡುವ ಮನಗಳ ಚಿತ್ರಣ ಮನಸ್ಸಿನೊಳಗೆ ಇಳಿದು ಕೂರುತ್ತದೆ.

[ಚಿತ್ರಗಳು ಡಿವಿಡಿಯಿಂದ ಎಬ್ಬಿಕೊಂಡಿದ್ದು]

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

Up ↑

%d bloggers like this: