ಕನ್ನಡದಲ್ಲಿ ಹೊಸ ಕಾವ್ಯ ಪ್ರಯೋಗ

RilkeTreeಕೆಂಡಸಂಪಿಗೆಯಲ್ಲಿ ನಡೆದಿರುವ ಪ್ರಯೋಗವೊಂದು ಕನ್ನಡ ಕಾವ್ಯಕ್ಕೆ ಹೊಸದು. ಈ ಹಿಂದೆ ಟಿ.ಎಸ್.ಎಲಿಯಟ್‌ನ ಪದ್ಯವೊಂದರ ಕುರಿತೂ ಇದೇ ಬಗೆಯ ಪ್ರಯೋಗ ನಡೆದಿತ್ತು.

ಈ ಬಾರಿ ನಾನೂ ಆ ಪ್ರಯೋಗದಲ್ಲಿ ಭಾಗಿಯಾಗಿರುವುದರಿಂದ ಈ ಪುಟ್ಟ ಬ್ಲಾಗನ್ನು ಹಾಕುತ್ತಿದ್ದೇನೆ.

ರಿಲ್ಕ್‌ನ eingang ಎಂಬ ಪದ್ಯದ ಡಾ. ಯು.ಆರ್‍.ಅನಂತಮೂರ್ತಿಯವರ ಅನುವಾದವನ್ನು ಪ್ರಕಟಿಸಿ ಉಳಿದವರನ್ನೂ ಆ ಪದ್ಯ ಅನುವಾದಿಸಲು ಸಂಪಾದಕರು ಆಹ್ವಾನಿಸಿದ್ದಾರೆ. ನಂತರ ಅದಕ್ಕೆ ಫ್ರೊ. ಓ. ಎಲ್. ನಾಗಭೂಷಣಸ್ವಾಮಿ ತಮ್ಮ ಅನುವಾದವನ್ನು ಒದಗಿಸಿದರು. ಈಗ ಮತ್ತೂ ನಾಕು ಜನರ ಅನುವಾದ ಪ್ರಕಟಗೊಂಡಿದೆ.

“೧೯೦೨ರಲ್ಲಿ ಪ್ರಕಟಗೊಂಡ ರಿಲ್ಕನ the book of images ಪುಸ್ತಕದ ಮೊದಲ ಪದ್ಯ ಇದು. eingang ಗೆ preface ಎಂದೂ ಅರ್ಥೈಸಬಹುದಂತೆ. ಹಾಗಾಗಿ ಇದೊಂದು ಮುನ್ನುಡಿಯ ಪದ್ಯವಾಗಿ ಕಂಡಿತು. ಪುಸ್ತಕಕ್ಕೆ ಮೆಲುದನಿಯ ಆಹ್ವಾನವಾಗಿ, ಓದುಗನನ್ನು ಉತ್ತೇಜಿಸುವ ಕಿವಿಮಾತಿನ ಹಾಗೆ ಕಂಡಿತು. ಪುಸ್ತಕದ ಹೆಸರಿಗೆ ಅನ್ವಯದಂತೆ ಓದುಗ ತನ್ನ ಲೋಕವನ್ನು ತಾನೇ ಚಿತ್ರಿಸಿಕೊಳ್ಳುವ, ಅದರಿಂದ ಬಿಡುಗಡೆ ಪಡೆಯುವ ಸ್ವಾತಂತ್ರ್ಯವನ್ನು ನೆನಪಿಸುತ್ತಿದ್ದಂತೆ ಕಂಡಿತು. ಪದ್ಯದ ಸಂದರ್ಭವನ್ನು ಮನಸ್ಸಿನಲ್ಲಿಟ್ಟುಕೊಂಡು, ಅದರ ಅರ್ಥವನ್ನು ತೀರ ಹಿಗ್ಗಿಸಿಕೊಳ್ಳದೆ ಅನುವಾದಿಸಿಕೊಂಡೆ.”

ನನ್ನ ಅನುವಾದ ಮತ್ತು ಎಲ್ಲ ಅನುವಾದಗಳನ್ನು ಓದಲು ಈ ಕೊಂಡಿಯ ಮೇಲೆ ಚಿಟುಕಿಸಿ : ಸುದರ್ಶನ್ ಮತ್ತು ಯೋಗೀಂದ್ರ ಅನುವಾದಗಳು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

%d bloggers like this: