ಅನಾಗರಿಕರ ಹಾದಿ ಕಾಯುತ್ತಾ

ಸಿಡ್ನಿಯಿಂದ ಬೆಂಗಳೂರಿಗೆ ಬರುತ್ತ ಒಂದೇ ಉಸಿರಲ್ಲಿ ನೊಬೆಲ್ ವಿಜೇತ J.M.Coetzeeಯ ‘Waiting for the Barbarians’ ಓದಿ ಮುಗಿಸಿದೆ. ಏನನಿಸಿತು ಎಂದು ಥಟ್ಟನೆ ಹೇಳಲಾಗದ, ನಮ್ಮ ಅನಿಸಿಕೆಯನ್ನೂ ಕೂಡ ನಮ್ಮೊಳಗೆ ಅಗೆದು ತೆಗೆದು ಪರಾಮರ್ಶಿಸಬೇಕಾದಂತಹ ಕಾದಂಬರಿ ಎಂದಷ್ಟು ಮಾತ್ರ ಹೇಳಬಲ್ಲೆ.

Barbarian Book

ಎಂಪೈರಿನ ಹೊರತುದಿಯಲ್ಲಿರುವ ಹೆಸರಿಲ್ಲದ ಸಣ್ಣ ಊರೊಂದರಲ್ಲಿ ಮ್ಯಾಜಿಸ್ಟ್ರೇಟನಾಗಿ ಕೆಲಸ ಮಾಡುವ ಹೆಸರಲ್ಲಿದವನ ಕತೆ. ಮೊದಲ ಪುರುಷದಲ್ಲೇ ಇರುವ ನಿರೂಪಣೆ. ಸ್ವಂತ ಆಯ್ಕೆಯ ಮೂಲಕ ಒಳ್ಳೆಯದನ್ನೂ, ಕೆಟ್ಟದ್ದನ್ನೂ, ಹೊಲಸನ್ನೂ, ಪವಿತ್ರವನ್ನೂ ಈ ಪಾತ್ರ ನೆರವೇರಿಸುತ್ತದೆ. ಯಾವುದೋ ಒಂದು ದೊಡ್ಡ ವ್ಯವಸ್ಥೆಯ ಅಂಗವಾಗಿ ಅವೆಲ್ಲಾ ನಡೆಯುತ್ತದೆ. ಆ ವ್ಯವಸ್ಥೆಯನ್ನು ಅದಲ್ಲಿನ ತನ್ನ ಭಾಗವನ್ನು ಒರೆಗೆ ಹಚ್ಚಲು ಶುರು ಮಾಡಿದೊಡನೆ ನಿರೂಪಕನ ಬದುಕು ಅತ್ಯಂತ ತೀವ್ರ ತಿರುವನ್ನು ಪಡೆದು ಘನಘೋರ ಸಂಗತಿಗಳಿಗೆ ಎಡೆಮಾಡಿಕೊಡುತ್ತದೆ.

ಹಾಳುಗೆಡವಲು ಬರಬೇಕಾದ ಅನಾಗರಿಕ ಬಾರ್ಬೇರಿಯನ್ನರು ಬಂಧನದಲ್ಲಿ ಊರನ್ನು ಪ್ರವೇಶಿಸುವುದು ಬರೇ ವ್ಯಂಗ್ಯವಾಗಿಯಷ್ಟೇ ಕೆಲಸ ಮಾಡುವುದಿಲ್ಲ. ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳುತ್ತದೆ. ಹಾಗೆ ನೋಡಿದರೆ ಕಾದಂಬರಿಯುದ್ದಕ್ಕೂ ಅವ್ಯಕ್ತವಾಗಿ ಬಾರ್ಬೇರಿಯನ್ ಎಂದರೆ ಯಾರು ಎಂಬ ಪ್ರಶ್ನೆ ಸುಪ್ತವಾಗಿ ಸದ್ದು ಮಾಡುತ್ತಲೇ ಇರುತ್ತದೆ. ಕೊನೆಯ ಭಾಗದಲ್ಲಿ ಅತ್ಯಂತ ವಿಷಾದದಲ್ಲಿ ನಿರೂಪಕ ಬಡಬಡಿಸುತ್ತಾನೆ-

“What has made it impossible for us to live in time like fish in water, like birds in air, like children? It is the fault of the Empire! Empire has created the time of history. Empire has located its existence not in the smooth recurrent spinning time of the cycle of the seasons but in the jagged time of rise and fall, of beginning and end, of catastrophe. Empire dooms itself to live in history and plot against history. One thought alone preoccupies the submerged mind of Empire: how not to end, how not to die, how to prolong its era. By day it pursues its enemies. It is cunning and ruthless, it sends its bloodhounds everywhere. By night it feeds on images of disaster: the sack of cities, the rape of populations, pyramid of bones, acres of desolations” (ಪುಟ 146)

ಈ ಮಾತು ಹೇಳುವ ಹೊತ್ತಿಗೆ ಇದರಲ್ಲಿ ಬರುವ ಅಂಶಗಳೆಲ್ಲವೂ ಘಟನೆಗಳಾಗಿ, ಪಾತ್ರಗಳಾಗಿ, ವಿಷಮ ಘಳಿಗೆಗಳ ಮೂಲಕ ನಮ್ಮನ್ನು ಆವರಿಸಿಬಿಟ್ಟಿರುತ್ತದೆ. ನಮ್ಮನ್ನು ಒಪ್ಪಿಸಬೇಕಾಗಿಯೇ ಇರುವುದಿಲ್ಲ. ಆ ಧ್ವನಿಯೂ ಈ ಮಾತಿನಲ್ಲಷ್ಟೇ ಅಲ್ಲ, ಕಾದಂಬರಿಯಲ್ಲೆಲ್ಲೂ ನಮಗೆ ಕಾಣುವುದಿಲ್ಲ.

ಕಾದಂಬರಿಯ ಮತ್ತೊಂದು ಸ್ತರ ಮತ್ತೂ ಮೂಲಭೂತವಾದ ಸಂಗತಿಯನ್ನು ಮುಟ್ಟುತ್ತದೆ. ಅದು ನಾಗರಿಕತೆ ಹಾಗು ನ್ಯಾಯವನ್ನು ಕುರಿತದ್ದು. ನಾವು ನಾಗರಿಕತೆ ಎಂದು ವಿಜೃಂಭಿಸುವ ವಸ್ತು ಕಣ್ಣ ಮುಂದೆಯೇ ಕುಸಿಯುತ್ತಾ ಹೋಗುವುದು ನಮ್ಮನ್ನು ತೀವ್ರವಾದ ಕಸಿವಿಸಿಗೆ ತಳ್ಳುತ್ತದೆ. ಕುಸಿದ ನಾಗರಿಕತೆಯ ಗೋರಿಯ ಮೇಲೆ ಏನು ಉಳಿಯಬಹುದು, ಏನು ಬೆಳೆಯಬಹುದು ಎಂದು ಮತ್ತೆ ಮತ್ತೆ ನಮ್ಮನ್ನು ಕೆಣಕುತ್ತದೆ. ಕುಸಿಯುವ ಅಗಾಧ ಪ್ರಕ್ರಿಯೆಯಲ್ಲಿ ಅದರ ಚಲನೆ, ಚಹರೆ ಹಾಗು ಕ್ರೌರ್ಯ ತಪ್ಪದೆ ಕಣ್ಣಿಗೆ ಹೊಡೆಯುತ್ತದೆ.

ಬಂಧನದಲ್ಲಿ ತೆವಳುತ್ತಿರುವ ಅನಾಗರಿಕರು ಹಿಂಸೆಗೆ ಗುರಿಯಾಗುತ್ತಿರುವುದನ್ನು ಮೋಜಿನಿಂದ ನೋಡುತ್ತಿರುವ ಊರ ಜನರ ಘಟನೆ ನ್ಯಾಯಪರತೆ ಎಂಬ ಸಂಗತಿಯನ್ನೇ ಬೆಳಕಿಗೊಡ್ಡುತ್ತದೆ

“Would I have dared to face the crowd to demand justice for these ridiculous barbarian prisoners with their backsides in the air? Justice: once that word is uttered, where will it all end? Easier to shout No! Easier to be beaten and made a martyr. Easier to lay my head on a block than to defend the cause of justice for teh barbarians: for where can that argument lead but to laying down our arms and opening the gates of the town to the people whose land we have raped?” (ಪುಟ 118)

ಜಗತ್ತಿನ ಮಿಲಯನ್‌ಗಟ್ಟಲೆ ನಿರಾಶ್ರಿತರನ್ನು ನಾವು ಬಗೆಯುವ ಹಾಗು ನಡೆಸಿಕೊಳ್ಳುತ್ತಿರುವ ರೀತಿಯ ಮೇಲೆ ಈ ಮಾತುಗಳು ಬೆಳಕು ಚೆಲ್ಲುತ್ತದೆ. ಆ ಮ್ಯಾಜಿಸ್ಟ್ರೇಟನ ‘ರಾಜ್ಯಬಾಹಿರ’ ಪರಿಸ್ಥಿತಿ ಹೊಳೆಸುವ ಹಲವಾರು ಮುಖಗಳಲ್ಲಿ ನಿರಾಶ್ರಿತರು ಮುಖ್ಯವಾದುದು ಅನಿಸುತ್ತದೆ. ‘ರಾಜ್ಯಬಾಹಿರ’ರಿಗೆ ಸಲ್ಲಬೇಕಾದ ‘ನ್ಯಾಯ’ದ ನಮೂನೆ ಏನು? ಅದರ ರೂಪವೇನು? ಅದನ್ನು ನಡೆಸಿಕೊಡಬೇಕಾದವರು ಯಾರು? ಕೊನೆಯಿಲ್ಲದ ಪ್ರಶ್ನೆಗಳ ಸರಮಾಲೆಯನ್ನು ನಮ್ಮ ಎದುರಿಡುತ್ತದೆ. ನ್ಯಾಯದ ಕಲ್ಪನೆಯನ್ನು ಬದುಕಿನ ಮೂಲದ್ರವವಾಗಿ ನೋಡುವ ಮೂಲಕ ಈ ಮಾತುಗಳು ನ್ಯಾಯದ ಬಾಗಿಲನ್ನು ಜಗದಗಲ ಹಿಗ್ಗಿಸುತ್ತದೆ

 “I had no doubt, myself, then, that at each moment each one of us, man, woman, child, perhaps even the poor old horse turning the mill-wheel, knew what was just: all creatures come into the world bringing with them the memory of justice. “But we live in a world of laws,” I said to my poor prisoner, “a world of the second-best. There is nothing we can do about that. We are fallen creatures. All we can do is to uphold the laws, all of us, without allowing the memory of justice to fade.” (ಪುಟ 152)

ಪುಸ್ತಕ ಓದಿ ಮುಚ್ಚಿಟ್ಟ ಮೇಲೆ ನನ್ನ ಮನಸ್ಸಿನಲ್ಲಿ ಮರುಕಳಿಸಿದ ಒಂದು ವ್ಯಕ್ತಿತ್ವ ಬುದ್ಧನ ಸಮಕಾಲೀನ ಅಜಿತ ಕೇಶಕಂಬಳಿ. ತನ್ನ ಸುತ್ತ ನಡೆಯುತ್ತಿದ್ದ ಹಿಂಸೆ ಹಾಗು ಅನ್ಯಾಯಗಳಿಗೆ ಬುದ್ಧ ಕಂಡುಕೊಂಡ ಉತ್ತರ ಒಂದು ಬಗೆಯಷ್ಟೆ. ಅಜಿತ ಕೇಶಕಂಬಳಿ ಉರಿಯು ಬಿಸಿಲಿನ ಧಗೆಯಲ್ಲೂ ಕೂದಲಿಂದ ಮಾಡಿದ ಕಂಬಳಿಯನ್ನು ಹೊದ್ದು, ನಾರುತ್ತ, ಬೇಡುತ್ತಾ, ಜನರೊಡನೆ ಜಗಳವಾಡುತ್ತ ಅಮೂಲ್ಯವಾದ ರೂಪಕವೊಂದನ್ನು ನಮ್ಮ ಮುಂದೆ ಬಿಟ್ಟು ಹೋಗಿದ್ದಾನೆ. ಸಾಮ್ರಾಜ್ಯದ ಅಂಚಿನಲ್ಲಿ ಜಾರಿಹೋಗುತ್ತಿರುವ ಮನುಷ್ಯನ ಸಹಜ ಗುಣವನ್ನು ಮರಳಿ ಪಡೆಯುವ ಸಾಹಸ ಮಾಡುವ ಹೆಸರಿಲ್ಲದ ಮ್ಯಾಜಿಸ್ಟ್ರೇಟನಂತೆಯೇ.

ನೋಡಿ, ಬುದ್ಧನ ದರ್ಶನಕ್ಕಿಂತ ಅಜಿತ ಕೇಶಕಂಬಳಿ ಹೆಚ್ಚು ವಾಸ್ತವ ಎಂದು ನಮಗೆ ಅನಿಸಿದರೆ ಪ್ರಸ್ತುತಕ್ಕೆ ನಾವು ತೋರಿಸುತ್ತಿರುವ ಅಸಲಿ ಪ್ರತಿಕ್ರಯೆ ಅದು ಅಷ್ಟೆ. ಮತ್ತೇನೂ ಅಲ್ಲ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

Up ↑

%d bloggers like this: