ಕಪಾಳ ಮೋಕ್ಷ

ರಿಚರ್ಡ್ ಫ್ಲಾನಗನ್ ತನ್ನ ತಂದೆಯ ಯುದ್ಧದ ಅನುಭವದ ಬಗ್ಗೆ Life after Death ಡಾಕ್ಯುಮೆಂಟರಿಯಲ್ಲಿ ಹೇಳಿದ ಸಂಗತಿ: ತುಂಬಾ ಮೃದು ಸ್ವಭಾವದ ಅವನ ತಂದೆ ಎರಡನೇ ಮಹಾಯುದ್ಧದಿಂದ ಹಿಂದಿರುಗಿ ಬಂದಾಗ ತಾನು ಬಂಧಿಯಾಗಿದ್ದ ಒಬ್ಬ ಜಾಪನೀಸ್ ಆಫೀಸರನನ್ನು ಸಿಕ್ಕಾಪಟ್ಟೆ ಬಯ್ಯುತ್ತಿದ್ದನಂತೆ. ತಂದೆಯ ಜಾಯಮಾನಕ್ಕೆ ಅವನ ಈ ನಡತೆ ತುಂಬಾ ಅಸಹಜವಾಗಿ ಕಾಣುತ್ತಿತ್ತಂತೆ. ಅಷ್ಟೇ ಅಲ್ಲದೆ, ಅವನು ಪದೇಪದೇ ಆ ಜಾಪನೀಸ್ ಆಫೀಸರನ ಹೊಟ್ಟೆಯನ್ನು ರೈಫಲ್ಲಿನ ಬಯೊನೆಟ್ಟಿನಿಂದ ಬಗೆದು ಬಗೆದು ರಕ್ತಸಿಕ್ತ ಜಠರವನ್ನು ಹೊರಗೆಲ್ಲಾ ಚೆಲ್ಲಾಡಿದಂತೆ ಕನಸು ಕಾಣುತ್ತಿದ್ದನಂತೆ. […]

Read More ಕಪಾಳ ಮೋಕ್ಷ

ನಿರ್ದಾಕ್ಷಿಣ್ಯ ಹೃದಯವಂತ

ವರ್ಷ ೨೦೦೪. ಕುವೆಂಪು ಜನ್ಮ ಶತಮಾನೋತ್ಸವ. ದಕ್ಷಿಣ ಭೂಗೋಲದ ವಸಂತದ ಕಡೆಯ ಮಾಸ. ಆಸ್ಟ್ರೇಲಿಯಾದ ಚುರುಗುಟ್ಟುವ ಬಿಸಿಲಿನ ನವೆಂಬರ್ ೬ರ ಮುಂಜಾನೆ. ನಾವೆಲ್ಲಾ ಶ್ರೀಯುತ ಪರಮೇಶರ ಮನೆಯಲ್ಲಿ ಸೇರಿದ್ದೆವು. ಆಸ್ಟ್ರೇಲಿಯಾ ಪ್ರವಾಸದಲ್ಲಿ ತೊಡಗಿದ್ದ ಪ್ರೊ.ಎಂ.ಎಂ.ಕಲ್ಬುರ್ಗಿಯವರ ಜತೆಗಿನ ಒಡನಾಟ ಆ ಸಂಜೆಯ ಕನ್ನಡ ಸಂಘದ ಕಾರ್ಯಕ್ರಮಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿ ನಮಗೆ ಕಂಡಿತ್ತು. ಕನ್ನಡದ ಇತಿಹಾಸದ ಬಗ್ಗೆ, ಲಿಂಗಾಯತ ಧರ್ಮದ ಬಗ್ಗೆ, ವಚನ ಹಾಗು ವಚನಕಾರರ ಬಗ್ಗೆ, ಕಲ್ಯಾಣದ ಕ್ರಾಂತಿಯ ಬಗ್ಗೆ ನಮ್ಮ ಪ್ರಶ್ನೆ, ಅನುಮಾನಗಳನ್ನು ಅವರ ಮುಂದಿಟ್ಟು ಚರ್ಚಿಸಬಹುದಾದ […]

Read More ನಿರ್ದಾಕ್ಷಿಣ್ಯ ಹೃದಯವಂತ

ನವನಾಗರೀಕತೆಯ ಕೊಲಾಜು

ಟಿಪ್ಪೂ ಸುಲ್ತಾನ್ ಎಂಬ ಹದಿನೆಂಟನೇ ಶತಮಾನದ ದೊರೆಯೂ, ಏರ್ಪೋರ್ಟಿನ ನಾಮಧೇಯವೂ, ಮೈನಾರಿಟೀ ಮುಸ್ಲೀಮರ ಓಲೈಕೆಯೂ, ಕೆಂಪೇಗೌಡನೆಂಬ ಪಾಳೆಯಗಾರನೂ, ನ್ಯೂಸೌತ್‌ವೇಲಿನ ಪಾರ್ಲಿಮೆಂಟಿನಲ್ಲಿ ದೀಪಾವಳಿಯೂ ಒಂದಕ್ಕೊಂಡು ಕೊಂಡಿ ಬೆಸೆದುಕೊಂಡು ‘ನವನಾಗರೀಕತೆ’ಯ ಪ್ರತೀಕವೆಂಬಂತೆ ಗುಡ್ಡೆಯಾಗಿ ಎದುರಿಗೆ ಬಿದ್ದಿದೆ. ಅಶೋಕನಿಂದ ಹಿಡಿದು ಭಾರತೀಯ ರಾಜರಲ್ಲಿ ಎಷ್ಟೆಷ್ಟು ಪಾಲು ಸದ್ಗುಣ ದುರ್ಗುಣ ಬೆರೆತಿದೆ ಎಂಬ ಜಗಳದಲ್ಲಿ ಟೈಮ್‌ಪಾಸ್ ಸುಲಭ. ಅಂದಿನ ರಾಜರಂತೆ ನಡೆದುಕೊಳ್ಳುವ ಡೆಮಾಕ್ರಸಿಯ ಇಂದಿನ ದೊರೆಗಳ ಬಿಸಿತುಪ್ಪದಂತಹ ಅಹಂಕಾರವನ್ನು ಬೆಣ್ಣೆಯಂತೆ ನುಂಗುವುದೂ ಕೂಡ. ಪ್ರಶ್ನಿಸದೇ ಬಿಟ್ಟರೆ, ಉತ್ತರದ ನಿರೀಕ್ಷೆಯೂ ಇಲ್ಲ, ದಾರಿ ಸುಗಮ. […]

Read More ನವನಾಗರೀಕತೆಯ ಕೊಲಾಜು

ತಾಂಡವ

ಹಿಮಾಲಯದ ತುತ್ತ ತುಟಿಯ ಬಿಳೀಹಿಮದ ನಿಲುಕಿನಾಚೆ ನೇಲುವ ತಿಳಿ ತಿಂಗಳ ನಗು ಶಿವರಾತ್ರಿಯ ಕತ್ತಲಲ್ಲಿ ಗಂಗೆಯ ಪರಿಶುದ್ದ ಜಲದಿ ತೇಲುವ ಬಿಳಿ ಪುಣ್ಯಬಿಂಬ  ಉಮೆಯ  ಎದೆಯ ನಿರಿಯಿತು. ಶಿವ ಭದ್ರಬಾಹು ಬಂಧ ಹರಿವ ನೀರಲಾಡಿತು. ಬೆಟ್ಟದ ಸುಳಿಗಾಳಿಯಲ್ಲಿ ಡಮರುಗ ದನಿ ಅಡಗಿತು. ~~ಶಿವರಾತ್ರಿ ‘೧೪

Read More ತಾಂಡವ

ಅನಾಗರಿಕರ ಹಾದಿ ಕಾಯುತ್ತಾ

ಸಿಡ್ನಿಯಿಂದ ಬೆಂಗಳೂರಿಗೆ ಬರುತ್ತ ಒಂದೇ ಉಸಿರಲ್ಲಿ ನೊಬೆಲ್ ವಿಜೇತ J.M.Coetzeeಯ ‘Waiting for the Barbarians’ ಓದಿ ಮುಗಿಸಿದೆ. ಏನನಿಸಿತು ಎಂದು ಥಟ್ಟನೆ ಹೇಳಲಾಗದ, ನಮ್ಮ ಅನಿಸಿಕೆಯನ್ನೂ ಕೂಡ ನಮ್ಮೊಳಗೆ ಅಗೆದು ತೆಗೆದು ಪರಾಮರ್ಶಿಸಬೇಕಾದಂತಹ ಕಾದಂಬರಿ ಎಂದಷ್ಟು ಮಾತ್ರ ಹೇಳಬಲ್ಲೆ. ಎಂಪೈರಿನ ಹೊರತುದಿಯಲ್ಲಿರುವ ಹೆಸರಿಲ್ಲದ ಸಣ್ಣ ಊರೊಂದರಲ್ಲಿ ಮ್ಯಾಜಿಸ್ಟ್ರೇಟನಾಗಿ ಕೆಲಸ ಮಾಡುವ ಹೆಸರಲ್ಲಿದವನ ಕತೆ. ಮೊದಲ ಪುರುಷದಲ್ಲೇ ಇರುವ ನಿರೂಪಣೆ. ಸ್ವಂತ ಆಯ್ಕೆಯ ಮೂಲಕ ಒಳ್ಳೆಯದನ್ನೂ, ಕೆಟ್ಟದ್ದನ್ನೂ, ಹೊಲಸನ್ನೂ, ಪವಿತ್ರವನ್ನೂ ಈ ಪಾತ್ರ ನೆರವೇರಿಸುತ್ತದೆ. ಯಾವುದೋ ಒಂದು […]

Read More ಅನಾಗರಿಕರ ಹಾದಿ ಕಾಯುತ್ತಾ