NYE Sydney fireworks 2016

ಸಿಡ್ನಿಯ ಗಲ್ಲಿಯೊಂದರಿಂದ ಹೊಸ ವರುಷದ ಉನ್ಮಾದ…

NYE-2016.gif

Advertisements

ನಿರ್ದಾಕ್ಷಿಣ್ಯ ಹೃದಯವಂತ

mmk-blogವರ್ಷ ೨೦೦೪. ಕುವೆಂಪು ಜನ್ಮ ಶತಮಾನೋತ್ಸವ. ದಕ್ಷಿಣ ಭೂಗೋಲದ ವಸಂತದ ಕಡೆಯ ಮಾಸ. ಆಸ್ಟ್ರೇಲಿಯಾದ ಚುರುಗುಟ್ಟುವ ಬಿಸಿಲಿನ ನವೆಂಬರ್ ೬ರ ಮುಂಜಾನೆ. ನಾವೆಲ್ಲಾ ಶ್ರೀಯುತ ಪರಮೇಶರ ಮನೆಯಲ್ಲಿ ಸೇರಿದ್ದೆವು. ಆಸ್ಟ್ರೇಲಿಯಾ ಪ್ರವಾಸದಲ್ಲಿ ತೊಡಗಿದ್ದ ಪ್ರೊ.ಎಂ.ಎಂ.ಕಲ್ಬುರ್ಗಿಯವರ ಜತೆಗಿನ ಒಡನಾಟ ಆ ಸಂಜೆಯ ಕನ್ನಡ ಸಂಘದ ಕಾರ್ಯಕ್ರಮಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿ ನಮಗೆ ಕಂಡಿತ್ತು.

ಕನ್ನಡದ ಇತಿಹಾಸದ ಬಗ್ಗೆ, ಲಿಂಗಾಯತ ಧರ್ಮದ ಬಗ್ಗೆ, ವಚನ ಹಾಗು ವಚನಕಾರರ ಬಗ್ಗೆ, ಕಲ್ಯಾಣದ ಕ್ರಾಂತಿಯ ಬಗ್ಗೆ ನಮ್ಮ ಪ್ರಶ್ನೆ, ಅನುಮಾನಗಳನ್ನು ಅವರ ಮುಂದಿಟ್ಟು ಚರ್ಚಿಸಬಹುದಾದ ಅವಕಾಶ ಮಹತ್ತರವಾದದ್ದು ಎಂದು ಅಲ್ಲಿದ್ದ ನಮಗೆ ಚೆನ್ನಾಗಿ ಗೊತ್ತಿತ್ತು. ಅವರ ಜತೆಗಿನ ಚರ್ಚೆ-ಮಾತುಕತೆ ಹೊಸ ಸಂಗತಿಗಳತ್ತ ನಮ್ಮ ಗಮನ ಸೆಳೆಯುತ್ತದೆ ಹಾಗು ಹೊಸ ದಿಕ್ಕಿನಲ್ಲಿ ನಮ್ಮನ್ನು ಯೋಚಿಸುವಂತೆ ಮಾಡಬಲ್ಲುದು ಎಂಬುದು ನಮ್ಮ ಸಂಭ್ರಮಕ್ಕೆ ಕಾರಣ.

ಹಲವಾರು ಪ್ರಶ್ನೆಗಳನ್ನು, ಆಸಕ್ತ ವಿಷಯಗಳನ್ನು ಗುರುತು ಹಾಕಿಕೊಂಡು ಭೇಟಿಗೆ ಮೊದಲೇ ಅವರಿಗೆ ಕೊಟ್ಟಿದ್ದೆವು. ಅವುಗಳನ್ನು ಕಲ್ಬುರ್ಗಿಯವರು ಅತ್ಯಂತ ಉತ್ಸಾಹದಿಂದ ಗಂಭೀರವಾಗಿ ಪರಾಮರ್ಶಿಸಿ ನಮ್ಮೊಡನೆ ಸುದೀರ್ಘ ವಿಚಾರ ವಿನಿಮಯದಲ್ಲಿ ತೊಡಗಿಕೊಂಡರು. ನಾವು ಕೇಳಿದ ಸಹಜ ಸಾಮಾನ್ಯ ಪ್ರಶ್ನೆಗಳಿಗೂ ಗಹನವಾದ ಉತ್ತರಗಳನ್ನು ಮನದಟ್ಟಾಗುವಂತೆ ವಿವರಿಸಿದರು.

ಬಸವಣ್ಣ-ಬಿಜ್ಜಳ, ಕಲ್ಯಾಣದ ಕ್ರಾಂತಿ, ಲಿಂಗಾಯತ ಧರ್ಮದ ಇತಿಹಾಸ, ವಿಜಯನಗರದ ಕೃಷ್ಣದೇವರಾಯನ ಚರಿತ್ರೆ, ಕವಿರಾಜಮಾರ್ಗದ ವೈಶಿಷ್ಟ್ಯ, ಕನ್ನಡ ಕವಿಗಳ ಕಾಣ್ಕೆ ಹೀಗೆ ಹಲವಾರು ಸಂಗತಿಗಳನ್ನು ಸರಳ ಸಹೃದಯದಿಂದ ನಮ್ಮ ಮುಂದೆ ಬಿಚ್ಚಿ ಬಿಡಿಸಿಟ್ಟರು. ಸುಮಾರು ಎರಡು ಗಂಟೆಗಳ ಕಾಲ ನಿರರ್ಗಳವಾಗಿ ಮಾತನಾಡಿದ ಅವರು ನಿಜಕ್ಕೂ ಹಲವು ವಿಷಯಗಳ ಬಗ್ಗೆ ನಮ್ಮ ಕಣ್ಣು ತೆರೆಸಿದರು ಎಂದೇ ಹೇಳಬೇಕು. ನಮ್ಮೆಲ್ಲರನ್ನೂ ಉನ್ಮತ್ತ ಸ್ಥಿತಿಯಲ್ಲಿರುವಂತೆ ಮಾಡಿದ ಸಂದರ್ಶನ, ಮಾತುಕತೆ ಅದಾಗಿತ್ತು.

ಮಾತನಾಡುವಾಗ ಕಲ್ಬುರ್ಗಿಯವರ ಹೊಳೆಯುವ ಕಣ್ಣುಗಳು ಅವರೊಳಗಿನ ವಿಚಾರವಂತಿಕೆ, ಉಮೇದು ಹಾಗು ಕರ್ತೃತ್ವಶಕ್ತಿಯನ್ನು ಜಾಹೀರು ಮಾಡುತ್ತಿತ್ತು. ಬದುಕಿನ ದಿನದಿನದ ಸಂಗತಿಗೂ ಮಹತ್ವದ ಹೊಳಹುಗಳನ್ನು ಕೊಡುತ್ತಿದ್ದರು. ಕವಿರಾಜಮಾರ್ಗವನ್ನು ಉಲ್ಲೇಖಿಸುವಾಗ ಕನ್ನಡ ಜನಪದರ ಕವಿತ್ವನ್ನು ಎತ್ತಿತೋರಿಸುತ್ತಾ ಸ್ವತಃ ಹಾಡೊಂದನ್ನು ಗುನುಗಿಸಿದ್ದು-ಅವರ ನಿರ್ದಾಕ್ಷಿಣ್ಯ ವೈಚಾರಿಕತೆಯ ನಡುವೆಯೂ ನಲಿಯುವ ಸಜ್ಜನಿಕೆ ಹಾಗು ಮೃದು ಹೃದಯ ನಮ್ಮನ್ನು ಆರ್ದ್ರಗೊಳಿಸಿತು.

ಆಗ ನನಗೆ ಅನ್ನಿಸಿದ ಒಂದು ಸಂಗತಿ ಇಂದಿಗೂ ಮರೆಯುವಂತಿಲ್ಲ. ಆ ಸಂಜೆ ಸಿಡ್ನಿ ಕನ್ನಡ ಸಂಘದಲ್ಲಿ ಅವರು ಕೊಟ್ಟ ಮಹತ್ವಪೂರ್ಣ ಭಾಷಣವಲ್ಲದೆ ಅವರೊಡನೆ ಎದುರು ಬದುರು ಕೂತು ಮಾತನಾಡುವ ಅವಕಾಶ ಕನ್ನಡದ ಸಮುದಾಯಕ್ಕೆ ಸಿಕ್ಕಲೇ ಇಲ್ಲ ಎಂಬ ವಿಷಾದ. ಕನ್ನಡ ಸಂಘವೂ ಅಂತಹದೊಂದು ಅವಕಾಶವನ್ನು ಕಲ್ಪಿಸಲಿಲ್ಲ. ಇಡೀ ಜೀವನವನ್ನು ವಿದ್ವತ್‌ಪೂರ್ಣ ಸಂಶೋಧನೆ, ಚರ್ಚೆ ಹಾಗು ವಿಚಾರ ಮಂಥನದಲ್ಲೇ ಕಳೆದ ಕಲ್ಬುರ್ಗಿಯಂತವರು ಅದರಿಂದಾಗಿಯೇ ಘೋರ ಹತ್ಯೆಗೆ ಈಡಾಗಿ ಇಂದು ನಮ್ಮೊಡನಿಲ್ಲ. ಅವರ ಅಮಾನುಷ ಸಾವಿನ ಸಂದರ್ಭದಲ್ಲೂ ಕೂಡ ಸಿಡ್ನಿಯ ಕನ್ನಡ ಸಮುದಾಯ ಒಟ್ಟಿಗೆ ಬಂದುದು ಕಾಣಲಿಲ್ಲ. ಬಸವ ಸಮಿತಿ ಹಮ್ಮಿಕೊಂಡ ಸಂತಾಪ ಸಭೆಯನ್ನು ಹೊರತು ಪಡಿಸಿದರೆ ಮತ್ತಾರೂ ಏನೂ ಆಸಕ್ತಿ ತೋರಿಸಲಿಲ್ಲ.

ಸಿಡ್ನಿಯ ಕನ್ನಡ ಸಮುದಾಯ ಪೂಜೆ, ಪುನಸ್ಕಾರ, ಭಜನೆ, ಹಬ್ಬ ಹರಿದಿನಕ್ಕೆ ತೋರಿಸುವ ಉತ್ಸಾಹವನ್ನು ವೈಚಾರಿಕತೆ ಹಾಗು ವಿಚಾರಮಂಥನಕ್ಕೆ ತೋರಿಸುವಲ್ಲಿ ಹಿಂದುಳಿದಿದೆ ಎಂದೇ ಹೇಳಬೇಕು. ಇಲ್ಲಿಗೆ ಬರುವ ಹಿರಿಯರ ಹಾಗು ಸ್ವಾಮಿಗಳ ಪಾದಪೂಜೆಯಲ್ಲೇ ಸಾರ್ಥ್ಯಕ್ಯ ಕಾಣುವ ನಾವಿನ್ನೂ ಮಧ್ಯಯುಗೀನ ಹಂತದಿಂದ ಹೊರಬರದೇ ಉಳಿದಿರುವುದು ನಿಜಕ್ಕೂ ಶೋಚನೀಯ. ಕಲ್ಬುರ್ಗಿಯವರ ನೆನಪು ಹಾಗು ವಿಚಾರವಂತಿಕೆಯ ಮಾದರಿ ನಮ್ಮನ್ನು ಮಂಪರಿನಿಂದ ಎಚ್ಚರಿಸಬೇಕಾದ ಅಗತ್ಯ ಇಂದಿನ ಅನಿವಾರ್ಯವಾಗಿದೆ.

ನವನಾಗರೀಕತೆಯ ಕೊಲಾಜು

ಟಿಪ್ಪೂ ಸುಲ್ತಾನ್ ಎಂಬ ಹದಿನೆಂಟನೇ ಶತಮಾನದ ದೊರೆಯೂ, ಏರ್ಪೋರ್ಟಿನ ನಾಮಧೇಯವೂ, ಮೈನಾರಿಟೀ ಮುಸ್ಲೀಮರ ಓಲೈಕೆಯೂ, ಕೆಂಪೇಗೌಡನೆಂಬ ಪಾಳೆಯಗಾರನೂ, ನ್ಯೂಸೌತ್‌ವೇಲಿನ ಪಾರ್ಲಿಮೆಂಟಿನಲ್ಲಿ ದೀಪಾವಳಿಯೂ ಒಂದಕ್ಕೊಂಡು ಕೊಂಡಿ ಬೆಸೆದುಕೊಂಡು ‘ನವನಾಗರೀಕತೆ’ಯ ಪ್ರತೀಕವೆಂಬಂತೆ ಗುಡ್ಡೆಯಾಗಿ ಎದುರಿಗೆ ಬಿದ್ದಿದೆ.

tsultanಅಶೋಕನಿಂದ ಹಿಡಿದು ಭಾರತೀಯ ರಾಜರಲ್ಲಿ ಎಷ್ಟೆಷ್ಟು ಪಾಲು ಸದ್ಗುಣ ದುರ್ಗುಣ ಬೆರೆತಿದೆ ಎಂಬ ಜಗಳದಲ್ಲಿ ಟೈಮ್‌ಪಾಸ್ ಸುಲಭ. ಅಂದಿನ ರಾಜರಂತೆ ನಡೆದುಕೊಳ್ಳುವ ಡೆಮಾಕ್ರಸಿಯ ಇಂದಿನ ದೊರೆಗಳ ಬಿಸಿತುಪ್ಪದಂತಹ ಅಹಂಕಾರವನ್ನು ಬೆಣ್ಣೆಯಂತೆ ನುಂಗುವುದೂ ಕೂಡ. ಪ್ರಶ್ನಿಸದೇ ಬಿಟ್ಟರೆ, ಉತ್ತರದ ನಿರೀಕ್ಷೆಯೂ ಇಲ್ಲ, ದಾರಿ ಸುಗಮ.

ಏರ್ಪೋಟಿನಂತ ಹೊಸ ತಾಂತ್ರಿಕ ಆವಿಷ್ಕಾರಕ್ಕೆ ಮಧ್ಯಯುಗೀನ ಹೆಸರುಗಳೇ ಹೊಳೆಯುವ ಮನಸ್ಸಿಗೆ ನಮ್ಮ ದೇಶದ ಮೊದಲ ಪೈಲೆಟ್ಟಿನ ಹೆಸರು ಹೊಳೆಯುವದಿಲ್ಲವಲ್ಲ! ಅಷ್ಟೇ ಯಾಕೆ ನಮ್ಮ ಮೊದಲ ಮಹಿಳಾ ಪೈಲೆಟ್ಟಿನ ಹೆಸರು ಇಟ್ಟಿದ್ದಿದ್ದರೆ ಇಂದಿನ ಹೆಣ್ಣು ಮಕ್ಕಳಿಗೆ, ಮುಂದಿನ ಜನಾಂಗಕ್ಕೆ ಅದೆಂತಹ ಬಳುವಳಿಯಾಗಬಹುದಿತ್ತಲ್ಲ…!

airportಬಲಿ ಮತ್ತೆ ಬಾ ಎಂದು ಹಾಡುವ, ಬಲಿರಾಜ್ಯದ ಹೊನ್ನನ್ನು ನೆನೆಯುವ ಸಂತತಿಯವರೂ ಬಲಿಯ ಕೊಲೆಯನ್ನು ಸಂಭ್ರಮಿಸುವ ದೀಪ ಸ್ಪೋಟದಲ್ಲಿ ಮುಳುಗಿರುವುದು ವ್ಯಂಗ್ಯವೋ, ಬೆಳವಣಿಗೆಯೋ, ಜಾಣ ಅಪಸ್ಮಾರವೋ? ಹ್ಯಾಪಿ ದಿವಾಳಿ ಎಂದು ಅನ್ನಿಸಿಕೊಳ್ಳುವಾಗ ಸಿಟ್ಟಿಗೇಳಬೇಕೋ, ಮುಜುಗರದ ನಗುವಿನಲ್ಲೇ ಮಾತು ಮುಗಿಸಬೇಕೋ? ಇದು ದುರ್ಗಮ…!

ಟಿಪ್ಪೂ ಸುಲ್ತಾನನ ಹುಟ್ಟುಹಬ್ಬದ ಅವಕಾಶವಾದೀ ಘೋಷಣೆಯ ತಂತ್ರಗಾರಿಕೆ ಹಾಗು ಸಣ್ಣತನ ದಂಗುಬಡಿಸುವ ನಡುವೆಯೂ ಮುಸ್ಲಿಮರ ಅಪೀಸ್‌ಮೆಂಟೆಂಬ ಹಳಸುವಾದಕ್ಕೆ ಇನ್ನೂ ಕಾಲಿನ ಶಕ್ತಿ ಕುಂದಿಲ್ಲ ಎಂದು ಆಶ್ಚರ್ಯವಾಗುತ್ತದೆ. ಒಂದೆಡೆ ತಂತ್ರಗಾರಿಕೆಯೂ, ಮತ್ತೊಂದೆಡೆ ಓಲೈಕೆ ಎಂದು ತೊಳಲಾಡುವುದೂ ಚಲಾವಣೆಗೆ ಬರದ ನಾಣ್ಯದ ಎರಡು ಮುಖಗಳಷ್ಟೆ! ಅಷ್ಟೆಯೆ…?

sydneydiwaliಓಬಾಮಾನಿಂದ ಹಿಡಿದು ಹೊಸಕಾಲದ ನೇತಾರರೆಲ್ಲಾ ದೀಪಾವಳಿಯ ನೆರಳಿನಲ್ಲಿ ನಗುವುದು ಓಲೈಕಯಲ್ಲ, ಅಪೀಸ್‌ಮೆಂಟಲ್ಲ ಎಂದು ವಾದಿಸೋಣವೆ? ಸಿಡ್ನಿಯಲ್ಲಿರುವ ರಾಜ್ಯದ ಪಾರ್ಲಿಮೆಂಟಿಗೆ ದೀಪಾವಳಿಯಂದು ದೀಪದ ತೋರಣ ಕಟ್ಟಿದಾಗ ಬೀಗುವುದೆ? ಅದು ಓಟಿಗಾಗಿ ಎರಡೂ ಪಕ್ಷಗಳು ನಡೆಸಿಕೊಂಡು ಬಂದಿರುವ ಓಲೈಕೆಯಲ್ಲವೆ, ಅಪೀಸ್‌ಮೆಂಟಲ್ಲವೆ? ಹೌದಾದರೆ ಅದಕ್ಕೆ ಬಲಿಯಾಗುವಷ್ಟು ಬುದ್ಧಿಮಂಕರೇ ನಾವು? ಅವರು ಹಾಗೆಂದುಕೊಂಡಿದ್ದಾರೆಂದಾದರೆ ಸಿಟ್ಟಿಗೇಳಬೇಕಲ್ಲವೆ ನಾವು?

ಸಾಹಿತಿಯೋರ್ವನ ಅನಿಸಿಕೆ ಸಮಾಜದ ಶಾಂತಿ ಕದಡುತ್ತದೆ, ನಮ್ಮನ್ನು ಕಂಗೆಡಿಸುತ್ತದೆ. ಸಾಹಿತಿಯ ಮಾತು ಅಸಂಬದ್ಧವೋ-ಸುಸಂಬದ್ಧವೋ ಎಂಬುದಕ್ಕಿಂತ ಹೆಚ್ಚಾಗಿ, ಶಾಂತಿ ಕದಡಿಕೊಂಡು ಹೊಡೆದಾಡುವ ನೆಲೆಯಿಂದ ಮೇಲೇಳದ ಸಮಾಜ ನಮ್ಮನ್ನು ಕಂಗೆಡಿಸಬೇಕಲ್ಲವೆ? ಅಸಂಬದ್ಧವೆಂದಾದರೆ, ಅಂತ ಮಾತಿಗೆಲ್ಲ ಕೆಂಪೇಗೌಡ, ಟಿಪ್ಪೂಸುಲ್ತಾನರಂತೆ ಕತ್ತಿಹಿರಿದು ಕೊಲೆಗಿಳಿಯುವ ನಾವೆಂತ ಸುಸಂಸ್ಕೃತ ಮಂದಿ, ಸಮಾಜ, ದೇಶ…?

ಎಲ್ಲರಿಗೂ ದೀಪಾವಳಿಯ ಶುಭ ಸಂತಾಪ – ಒಪ್ಪಿಸಿಕೊಳ್ಳಿ.

ಅನಾಗರಿಕರ ಹಾದಿ ಕಾಯುತ್ತಾ

ಸಿಡ್ನಿಯಿಂದ ಬೆಂಗಳೂರಿಗೆ ಬರುತ್ತ ಒಂದೇ ಉಸಿರಲ್ಲಿ ನೊಬೆಲ್ ವಿಜೇತ J.M.Coetzeeಯ ‘Waiting for the Barbarians’ ಓದಿ ಮುಗಿಸಿದೆ. ಏನನಿಸಿತು ಎಂದು ಥಟ್ಟನೆ ಹೇಳಲಾಗದ, ನಮ್ಮ ಅನಿಸಿಕೆಯನ್ನೂ ಕೂಡ ನಮ್ಮೊಳಗೆ ಅಗೆದು ತೆಗೆದು ಪರಾಮರ್ಶಿಸಬೇಕಾದಂತಹ ಕಾದಂಬರಿ ಎಂದಷ್ಟು ಮಾತ್ರ ಹೇಳಬಲ್ಲೆ.

Barbarian Book

ಎಂಪೈರಿನ ಹೊರತುದಿಯಲ್ಲಿರುವ ಹೆಸರಿಲ್ಲದ ಸಣ್ಣ ಊರೊಂದರಲ್ಲಿ ಮ್ಯಾಜಿಸ್ಟ್ರೇಟನಾಗಿ ಕೆಲಸ ಮಾಡುವ ಹೆಸರಲ್ಲಿದವನ ಕತೆ. ಮೊದಲ ಪುರುಷದಲ್ಲೇ ಇರುವ ನಿರೂಪಣೆ. ಸ್ವಂತ ಆಯ್ಕೆಯ ಮೂಲಕ ಒಳ್ಳೆಯದನ್ನೂ, ಕೆಟ್ಟದ್ದನ್ನೂ, ಹೊಲಸನ್ನೂ, ಪವಿತ್ರವನ್ನೂ ಈ ಪಾತ್ರ ನೆರವೇರಿಸುತ್ತದೆ. ಯಾವುದೋ ಒಂದು ದೊಡ್ಡ ವ್ಯವಸ್ಥೆಯ ಅಂಗವಾಗಿ ಅವೆಲ್ಲಾ ನಡೆಯುತ್ತದೆ. ಆ ವ್ಯವಸ್ಥೆಯನ್ನು ಅದಲ್ಲಿನ ತನ್ನ ಭಾಗವನ್ನು ಒರೆಗೆ ಹಚ್ಚಲು ಶುರು ಮಾಡಿದೊಡನೆ ನಿರೂಪಕನ ಬದುಕು ಅತ್ಯಂತ ತೀವ್ರ ತಿರುವನ್ನು ಪಡೆದು ಘನಘೋರ ಸಂಗತಿಗಳಿಗೆ ಎಡೆಮಾಡಿಕೊಡುತ್ತದೆ. Continue reading “ಅನಾಗರಿಕರ ಹಾದಿ ಕಾಯುತ್ತಾ”

ಹಕ್ಕಿ ಗೂಡು ತೋರಣ

ಗಿಳಿಯು ಪಂಜರದೊಳಿಲ್ಲ… ಪಂಜರದ ಹೊರಗೂ ಇಲ್ಲ.

AngelCages_01

ಸಿಡ್ನಿ ನಗರದ ನಟ್ಟ ನಡುವಲ್ಲಿ ಬಚ್ಚಿಟ್ಟುಕೊಂಡಿರುವ ಏಂಜಲ್‌ಗಲ್ಲಿ; ಅಲ್ಲಿ ತಲೆಯೆತ್ತಿ ನೋಡಿದರೆ ತೂಗಿರುವ ಈ ನೂರಾರು ಖಾಲಿ ಹಕ್ಕಿ ಪಂಜರಗಳು ನಮ್ಮ ಮನಸ್ಸನ್ನು ಸೆರೆ ಹಿಡಿಯುತ್ತವೆ. Continue reading “ಹಕ್ಕಿ ಗೂಡು ತೋರಣ”

A speech and an Essay

Just read the Quarterly Essay “Unfinished Business: Sex, Freedom and Misogyny” by Anna Goldsworthy.

The following speech by Julia Gillard has inspired the essay.

Even though the context of the speech itself may not be agreeable to you, the content, the voice and the feminist position taken is remarkable. This speech along with Anna’s essay is a must read for all.

An extract of the Essay is available here:

Missing Messiah: ‘getting stuff done’ helped Gillard dodge the Golden Girl trap but became her un-doing

ಕೆಂಡಸಂಪಿಗೆ ಪ್ರಕಾಶನದ ಮೊದಲೆರಡು ಮಕ್ಕಳು

ಅಬ್ದುಲ್ ರಶೀದರ ‘ಹೂವಿನ ಕೊಲ್ಲಿ’ ಎಲ್ಲರೂ ಓದಬೇಕಾದ ವಿಶಿಷ್ಟ ಸಂವೇದನೆಯ ವಿಭಿನ್ನ ಕಾದಂಬರಿ.

ಬ್ಲಾಗಂಬರಿಯಾಗಿ ಹುಟ್ಟು ಪಡೆದು ಕಾದಂಬರಿಯಾಗಿ ಈಗ ನಿಮ್ಮೆದುರು ನಸುನಗುತ್ತಿದೆ.

Four Planets

Alignment of Jupiter, Venus, Mercury and Mars as seen in the northern skies of the southern Hemisphere. These are my attempts at capturing them this morning around 5.30 am. Drove up to the top of the 4 level car park at the Holsworthy Railway Station to take these pictures. The next similar alignment with five planets is in 2040…

Create a free website or blog at WordPress.com.

Up ↑