ಕನಸಿನ ಪ್ರಾಯ ಹಾಗು ಮರೆತದ್ದು

ಕನಸಿನ ಪ್ರಾಯ

“ಯೌವ್ವನದಲ್ಲಿ ಕನಸದವರಿಲ್ಲವಂತೆ
ನಡುವಯಸ್ಸಲ್ಲಿ ಕನಸದವರು ವ್ಯರ್ಥವಂತೆ
Continue reading “ಕನಸಿನ ಪ್ರಾಯ ಹಾಗು ಮರೆತದ್ದು”

Advertisements

ಏನಕ್ಕಾಗಿ, ನುಂಗಿಕೊಂಡದ್ದು

ಏನಕ್ಕಾಗಿ

ನಲ್ಲ-
ಮುಂಜಾನೆ ಜಗಳವಾಡಿ ಹೋದ ನಿನ್ನ
ದಾರಿ ಕಾಯುವಾಗ ಸಂಜೆ
ಮೆಲ್ಲನೆ ಕತ್ತಲಿಳಿಯುತ್ತಾ
ಕಿಟಕಿಗಾಜಿನ ಮೇಲೆ ಮಳೆಯ ಹನಿ
ಆತುರಪಡದೆ ಸಾವಕಾಶ ಜಾರುತ್ತದೆ.

————————————

ನುಂಗಿಕೊಂಡದ್ದು

ನಗುತ್ತೀನೋ ನಲ್ಲ-
ಹೊಸತರಲ್ಲಿ ಚಳಿಗಾಲದ ಬಿಸಿಲಂತಿದ್ದವನು
ಇತ್ತಿತ್ತ
ರಣಬೇಸಿಗೆಯ ಬಿಸಿಲಾಗಿ
ಒಣಗಿಸುತ್ತಿದ್ದೀಯ
ಅಂತ ನಿನಗೇ ಗೊತ್ತಿಲ್ಲದೆ
ಉದಾರವಾದಿಯಂತಾಡಿದಾಗ.

ನೀಳ್ಗತೆ

ಮೆಲ್ಲಗೆ ಜಾರುವ ರೈಲಲ್ಲಿ
ಹಣ್ಣುಹಣ್ಣು ಮುದುಕ ಮುದುಕಿ
ಆಕೆಯ ಸುಕ್ಕುಗಟ್ಟಿದ ಅಂಗೈಯೊಳಗೆ
ಆತನ ಸುಕ್ಕುಗಟ್ಟಿದ ಅಂಗೈ
ದಾರಿಯುದ್ದಕ್ಕೂ ಮಾತುಕತೆ-
ಮುದುಕಿ : “ಕೇಳಿಸ್ತ?”; ಮುದುಕ : “ಅಂ?”
ಮುದುಕಿ : “ಕೇಳಿಸ್ತ?”; ಮುದುಕ : “ಅಂ?”
ಮುದುಕಿ : “ಕೇಳಿಸ್ತ?”; ಮುದುಕ : “ಅಂ?”

ಅಂಗೈಗಳು
ಒಂದನ್ನೊಂದು ಸವರುತ್ತಲೇ ಇದ್ದವು.

Create a free website or blog at WordPress.com.

Up ↑