ಕಪಾಳ ಮೋಕ್ಷ

ರಿಚರ್ಡ್ ಫ್ಲಾನಗನ್ ತನ್ನ ತಂದೆಯ ಯುದ್ಧದ ಅನುಭವದ ಬಗ್ಗೆ Life after Death ಡಾಕ್ಯುಮೆಂಟರಿಯಲ್ಲಿ ಹೇಳಿದ ಸಂಗತಿ:

ತುಂಬಾ ಮೃದು ಸ್ವಭಾವದ ಅವನ ತಂದೆ ಎರಡನೇ ಮಹಾಯುದ್ಧದಿಂದ ಹಿಂದಿರುಗಿ ಬಂದಾಗ ತಾನು ಬಂಧಿಯಾಗಿದ್ದ ಒಬ್ಬ ಜಾಪನೀಸ್ ಆಫೀಸರನನ್ನು ಸಿಕ್ಕಾಪಟ್ಟೆ ಬಯ್ಯುತ್ತಿದ್ದನಂತೆ. ತಂದೆಯ ಜಾಯಮಾನಕ್ಕೆ ಅವನ ಈ ನಡತೆ ತುಂಬಾ ಅಸಹಜವಾಗಿ ಕಾಣುತ್ತಿತ್ತಂತೆ. ಅಷ್ಟೇ ಅಲ್ಲದೆ, ಅವನು ಪದೇಪದೇ ಆ ಜಾಪನೀಸ್ ಆಫೀಸರನ ಹೊಟ್ಟೆಯನ್ನು ರೈಫಲ್ಲಿನ ಬಯೊನೆಟ್ಟಿನಿಂದ ಬಗೆದು ಬಗೆದು ರಕ್ತಸಿಕ್ತ ಜಠರವನ್ನು ಹೊರಗೆಲ್ಲಾ ಚೆಲ್ಲಾಡಿದಂತೆ ಕನಸು ಕಾಣುತ್ತಿದ್ದನಂತೆ. ಯುದ್ಧ ತನ್ನ ತಂದೆಯ ಅಂತರಂಗವನ್ನು ವಿರೂಪಗೊಳಿಸಿರುವುದನ್ನು ಮಕ್ಕಳೆಲ್ಲಾ ತಪ್ತರಾಗಿ ಅನುಭವಿಸುತ್ತಿದರಂತೆ.

archflanagaanww2
ರಿಚರ್ಡ್ ಫ್ಲಾನಗನ್ ತಂದೆ ಆರ್ಚ್ ಫ್ಲಾನಗನ್

ರಿಚರ್ಡ್ ದೊಡ್ಡವನಾದ ಮೇಲೆ, ಆ ಜಾಪನೀಸ್ ಆಫೀಸರನ್ನು ಭೇಟಿಮಾಡಿದನಂತೆ. ತುಂಬಾ ಮೃದು ಸ್ವಭಾವದ ಮುದಕನನ್ನು ನೋಡಿ ಚಕಿತನಾದನಂತೆ. ಅವನು ಯುದ್ಧಬಂಧಿಗಳ ಕಪಾಳಕ್ಕೆ ಹೊಡೆಯುತ್ತಿದ್ದದ್ದನ್ನು ರಿಚರ್ಡ್ ಕೇಳಿದ್ದನಂತೆ. ತಂದೆಯ ಆತ್ಮೀಯ ಗೆಳೆಯನನ್ನು ಹೊಡೆದು ಬಡಿದು ಇವನ ತಂದೆ ಹಾಗು ಉಳಿದವರ ಮುಂದೆಯೇ ಕೊಂದಿದ್ದರಂತೆ. ತನ್ನೆಲ್ಲಾ ಆಕ್ರೋಶವನ್ನೂ ಅದುಮಿ ಹಿಡಿದುಕೊಂಡು ಗೆಳೆಯನ ಸಾವನ್ನು ನೋಡಿದ್ದಷ್ಟೆ ಅಲ್ಲದೆ ಜೀವಮಾನವಿಡೀ ಆ ನೋವು ಹಾಗೂ ಅವಮಾನವನ್ನು ಹೊತ್ತಲೆಯುತ್ತಿದ್ದನಂತೆ.

ಟೋಕಿಯೋದಲ್ಲಿ ಆ ಆಫೀಸರನನ್ನು ಭೇಟಿಯಾದಾಗ ತನ್ನ ತಂದೆಯ ಕಪಾಳಕ್ಕೆ ಹೊಡೆದಂತೇ ತನಗೂ ಹೊಡೆಯುವಂತೆ ರಿಚರ್ಡ್ ಬಿನ್ನವಿಸಿಕೊಂಡನಂತೆ. ಅವನು ಆಗುವುದಿಲ್ಲ ಎಂದರೂ ಬಿಡದೆ ಕೇಳಿಕೊಂಡನಂತೆ. ಕಡೆಗೆ, ಆ ಮುದುಕ ಭುಜ ಹಿಂದಕ್ಕೆ ಎಳೆದು ಬೀಸಿ ಇವನ ಕಪಾಳಕ್ಕೆ ಮತ್ತೆ ಮತ್ತೆ ಹೊಡೆದನಂತೆ. ರಿಚರ್ಡನ ತಲೆ ಸುತ್ತಿಬಂದಂತಾಗಿ, ಭೂಮಿ ಬಾಯಿ ಬಿಟ್ಟಂತಾಗಿ, ತಾವಿದ್ದ ಕಟ್ಟಡ ಹೊಯ್ದಾಡಿದಂತೆ ಆಯಿತಂತೆ.

archflanagan
ವಯಸ್ಸಾದ ಆರ್ಚ್ ಫ್ಲಾನಗನ್

ಕತೆಗಾರನ ಶಾಪವೋ ಎಂಬಂತೆ ಆಗಷ್ಟೆ ಜಪಾನಿನಲ್ಲಿ ಭೂಕಂಪವಾಗುತ್ತಿರುವುದು ಅರಿವಿಗೆ ಬಂದು ಎಲ್ಲರೂ ಹೊರಗೋಡಿದರಂತೆ. ಹೊಡೆದವನು, ಹೊಡೆಸಿಕೊಂಡವನು, ನೋಡುತ್ತಿದ್ದವರು, ಎಲ್ಲರೂ.

 

[ಚಿತ್ರಕೃಪೆ : ಅಂತರ್ಜಾಲ ಪುಟಗಳು]

ಅನಾಗರಿಕರ ಹಾದಿ ಕಾಯುತ್ತಾ

ಸಿಡ್ನಿಯಿಂದ ಬೆಂಗಳೂರಿಗೆ ಬರುತ್ತ ಒಂದೇ ಉಸಿರಲ್ಲಿ ನೊಬೆಲ್ ವಿಜೇತ J.M.Coetzeeಯ ‘Waiting for the Barbarians’ ಓದಿ ಮುಗಿಸಿದೆ. ಏನನಿಸಿತು ಎಂದು ಥಟ್ಟನೆ ಹೇಳಲಾಗದ, ನಮ್ಮ ಅನಿಸಿಕೆಯನ್ನೂ ಕೂಡ ನಮ್ಮೊಳಗೆ ಅಗೆದು ತೆಗೆದು ಪರಾಮರ್ಶಿಸಬೇಕಾದಂತಹ ಕಾದಂಬರಿ ಎಂದಷ್ಟು ಮಾತ್ರ ಹೇಳಬಲ್ಲೆ.

Barbarian Book

ಎಂಪೈರಿನ ಹೊರತುದಿಯಲ್ಲಿರುವ ಹೆಸರಿಲ್ಲದ ಸಣ್ಣ ಊರೊಂದರಲ್ಲಿ ಮ್ಯಾಜಿಸ್ಟ್ರೇಟನಾಗಿ ಕೆಲಸ ಮಾಡುವ ಹೆಸರಲ್ಲಿದವನ ಕತೆ. ಮೊದಲ ಪುರುಷದಲ್ಲೇ ಇರುವ ನಿರೂಪಣೆ. ಸ್ವಂತ ಆಯ್ಕೆಯ ಮೂಲಕ ಒಳ್ಳೆಯದನ್ನೂ, ಕೆಟ್ಟದ್ದನ್ನೂ, ಹೊಲಸನ್ನೂ, ಪವಿತ್ರವನ್ನೂ ಈ ಪಾತ್ರ ನೆರವೇರಿಸುತ್ತದೆ. ಯಾವುದೋ ಒಂದು ದೊಡ್ಡ ವ್ಯವಸ್ಥೆಯ ಅಂಗವಾಗಿ ಅವೆಲ್ಲಾ ನಡೆಯುತ್ತದೆ. ಆ ವ್ಯವಸ್ಥೆಯನ್ನು ಅದಲ್ಲಿನ ತನ್ನ ಭಾಗವನ್ನು ಒರೆಗೆ ಹಚ್ಚಲು ಶುರು ಮಾಡಿದೊಡನೆ ನಿರೂಪಕನ ಬದುಕು ಅತ್ಯಂತ ತೀವ್ರ ತಿರುವನ್ನು ಪಡೆದು ಘನಘೋರ ಸಂಗತಿಗಳಿಗೆ ಎಡೆಮಾಡಿಕೊಡುತ್ತದೆ. Continue reading “ಅನಾಗರಿಕರ ಹಾದಿ ಕಾಯುತ್ತಾ”

Pickles from home

Before slipping into sleep on cold winter nights in this far off land, I am picking through the articles in this book. I am reading the vignettes randomly, not following the order in which it is presented. I just pick what fancies me at the time and throw the pickled bit into my mouth. The taste of spices tickle my taste buds. The piece rolls and rollicks on my tongue, that can also speak in many tongues. Slowly the deep taste of the pickled fruit emerges and seeps through my senses. It takes me back in time and space. Some forgotten, some never known instances flood into my mind.

I have only covered half the book, but cannot not share the following…

The memory of that evening H.S.Shivaprakash read the early version of his anti-war poem in Feb 1992 lingered on. I had also read a bad poem, which is now lost and until now rightly forgotten. I can’t remember my lines except the play on the word ‘maraLu’- sand and the images of the blood crystallized on that hot desert sand…

Thanks Sugata Raju for the book.

ನಾಟಕ, celtx, latex ಕುರಿತಾಗಿ.

celtx ಎಂಬ ಬರಹದ ಸಾಫ್ಟ್‌ ವೇರ್ ಒಂದಿದೆ. ಅದರಲ್ಲಿ ಸಿನೆಮಾ ಚಿತ್ರಕತೆ, ನಾಟಕ , ಕಾದಂಬರಿ ಮುಂತಾದವನ್ನೆಲ್ಲಾ ಬರೆಯಬಹುದು. ಆಯಾ ಮಾಧ್ಯಮಕ್ಕೆ ತಕ್ಕಂತೆ ಬೇಕಾದ ಅನುಕೂಲಗಳು ಇವೆ.
ಸುಮಾರು ವರ್ಷದಿಂದ ಅದರ ಜತೆ ಆಟವಾಡುತ್ತಾ ಇದ್ದರೂ ಕೂಡ, ಪೂರ್ತಿ ಕೃತಿಯನ್ನು ಅದರಲ್ಲಿ ಈ ಹಿಂದೆ ಬರೆದಿರಲಿಲ್ಲ. ಮೊದಲಿಗೆ ಕನ್ನಡ ಬರೆಯಲು ಆಗುತ್ತಾ ಇರಲಿಲ್ಲ. ಆಮೇಲೆ, ಆದರೂ ಕೂಡ ಅದನ್ನು ಉಳಿಸಲು ಆಗುತ್ತಿರಲಿಲ್ಲ. ಆಮೇಲೆ ಅದನ್ನು ಮುದ್ರಿಸಲು ಆಗುತ್ತಿರಲಿಲ್ಲ. ಆದಾಗಲೂ ಕೆಲವು ಸಣ್ಣ ಪುಟ್ಟ ತೊಡಕುಗಳು ಇದ್ದೇ ಇದ್ದುವು. ಈಗಲೂ ಕೆಲವು ತೊಡಕು ಇದೆ. ಆದರೆ ಅದಕ್ಕೊಂದು ದಾರಿ ಕಂಡು ಕೊಂಡು celtx ಅನ್ನೇ ಬಳಸಿ ಒಂದು ನಾಟಕವನ್ನು ಬರೆಯಲು ಕೂತೆ. ಈಗ ಒಂದು ವಾರದ ಕೆಳಗೆ ಅದನ್ನು ಬರೆದು ಮುಗಿಸಿದೆ. ಈ ಬರಹ ಆ ನಾಟಕದ ಬಗ್ಗೆ ಅಲ್ಲ. ಅದಕ್ಕಿನ್ನೂ ತುಸು ಮರುಬರವಣಿಗೆಯ ಕೆಲಸವಿದೆ. ಆದರೆ ಇಲ್ಲಿ ಹೇಳ ಹೊರಟಿದ್ದು – ಬರೆದು ಮುಗಿಸಿದ ಮೇಲೆ ಅದನ್ನು ಪಿಡಿಎಫ್ ಆಗಿ ಮಾರ್ಪಡಿಸಲು ನಾನು ಇಟ್ಟ ಹೆಜ್ಜೆಗಳ ಬಗ್ಗೆ.
celtx ನಲ್ಲಿ ಬರೆದದನ್ನು ಕನ್ನಡದಲ್ಲೇ ಮುದ್ರಿಸಲು ಬರುತ್ತದೆ. ಹಾಗೆ ಮುದ್ರಿಸುವಾಗ – ಅದನ್ನು ಒಂದು ಕಡತಕ್ಕೆ ಉಳಿಸಿಕೊಳ್ಳಲು ಅನುಕೂಲವಿದೆ. ಆ ಕಡತ ಪಿಡಿಎಫ್ ಕೂಡ ಆಗಿರಬಹುದು. ಅಂದ ಮೇಲೆ ಆಯಿತಲ್ಲ? ಇಲ್ಲ, celtx ಕನ್ನಡದ ಸಾಲುಗಳನ್ನು ಪಿಡಿಎಫ್‌ನಲ್ಲಿ ಉಳಿಸುವಾಗ ತುಂಬಾ ಒತ್ತೊತ್ತಾಗಿ ಸಿಬಿಡುತ್ತದೆ. ಅದು ಬಳಸುವ ಕನ್ನಡದ ಅಚ್ಚನ್ನು (font) ಬದಲಿಸಲು ಬರುವುದಿಲ್ಲ. ಅದನ್ನು ನಮಗೆ ಬೇಕಾದ ಹಾಗೆ ದೂರಮಾಡಲು ಬರುವುದಿಲ್ಲ. ಈ ತೊಂದರೆಯನ್ನು ಬಗೆಹರಿಸಿಕೊಳ್ಳಲು ಈ ಕೆಳಗಿನಂತೆ ಮಾಡಿದೆ.
೧. celtxನಲ್ಲಿ ಬರೆದ ನಾಟಕವನ್ನು export textಆಗಿ ಮೊದಲು ಸಾಗಿಸಿಕೊಂಡೆ.
೨. ಹಾಗೆ ಸಾಗಿಸಿ ಕೊಂಡ ಕಡತದಲ್ಲಿ ನಾಟಕದ text ಯಾವ ಬಗೆಯಲ್ಲಿ ಅಚ್ಚಾಗಿದೆ ಎಂದ ಗಮನಿಸಿಕೊಂಡೆ. ಅಂದರೆ, ಪಾತ್ರದ ಹೆಸರಿನ ಮೊದಲು ಎಷ್ಟು ಸ್ಪೇಸಿದೆ, ಮಾತಿನ ಮೊದಲು ಎಷ್ಟು ಸ್ಪೇಸಿದೆ ಇತ್ಯಾದಿ.
೩. ಒಂದು perl program ಬರೆದು – ನನಗೆ ಬೇಕಾದ ಕಡೆ, ಬೇಕಾದಂತೆ xelatex control sequence ಅಳವಡಿಸಿ tex ಕಡತ ತಯಾರಿಸಿಕೊಂಡೆ.
೪. ಕಡೆಗೆ xelatex ಪ್ರೋಗ್ರಾಂನ ಮೂಲಕ ನನ್ನ tex ಕಡತವನ್ನು ಹಾಯಿಸಿ ದಾಗ ಅದು ನನಗೆ ಬೇಕಾದಂತೆ ಪಿಡಿಎಫ್ ಕಡತವನ್ನು ಹುಟ್ಟಿಸಿ ತು.

perl program ಬರೆಯುವ ಮೊದಲು ನನಗೆ ಬೇಕಾದ control sequence ಯೋಜಿಸಿಕೊಂಡೆ. ಆ sequenceಗಳನ್ನು ನನ್ನದೆ ಒಂದು packageಆಗಿ ಉಳಿಸಿಕೊಂಡೆ: ಅದು ಹೀಗಿದೆ:
======================================================
%create pdf from text file exported from celtx stageplay
%package file for required sequences
%
\usepackage{fontspec}
\usepackage{polyglossia}
\setmainfont[Script=Kannada]{Kedage}
\topmargin=0pt\textheight=640pt
\linespread{1.3}
\pagestyle{myheadings}
\markright{“play-title”} %name of the play in the curlybraces
\newenvironment{stage} % stage directions
{\itshape\vspace{16 pt}\par\noindent\leftskip=3cm\parskip=.5cm\ignorespaces}

\newenvironment{dial} % dialogue
{\par\noindent\leftskip=1.5cm\ignorespaces}

\newenvironment{paren} % parentheses
{\par\noindent\leftskip=3.5cm\rightskip=3cm\ignorespaces}

\newenvironment{charname} %character names
{\par\noindent\leftskip=4.5cm\ignorespaces}
==========================================================

ನನ್ನ perl program ಈ ಮೇಲಿನ \newenvironment ಎಂಬ ಸಾಲುಗಳನ್ನು ಬೇಕಾದಕಡೆ ಹಾಕಿಕೊಂಡು ಪಿಡಿಎಫ್ ಪುಟತಯಾರಾಯಿತು.
ಬಳಸಿದ ವರ್ಷನ್ ಗಳು:
celtx : 2.9.1 (2011040514)
texlive: 2011 on ubuntu 10.04

ಸ್ಯಾಂಪಲ್ ಪಿಡಿಎಫ್ ಪ್ರತಿಗೆ ಇಲ್ಲಿ ಚಿಟುಕಿ: https://anivaasi.files.wordpress.com/2011/10/sample.pdf

ನನಗೆ ಸಹಾಯಕ್ಕೆ ಬಂದ ಪುಟಗಳು:
ಅರವಿಂದ ಅವರ: http://aravindavk.in/view/kannada_in_latex
summer_glau ಅವರ: http://sampada.net/latex-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6%E0%B2%B2%E0%B3%8D%E0%B2%B2%E0%B2%BF-latex
ಇನ್ನಿತರ ಆನ್ ಲೈನ್ ನೆರವಿನ ಕೈಪಿಡಿಗಳು, lab.latex.org ಇತ್ಯಾದಿ.