ನವನಾಗರೀಕತೆಯ ಕೊಲಾಜು

ಟಿಪ್ಪೂ ಸುಲ್ತಾನ್ ಎಂಬ ಹದಿನೆಂಟನೇ ಶತಮಾನದ ದೊರೆಯೂ, ಏರ್ಪೋರ್ಟಿನ ನಾಮಧೇಯವೂ, ಮೈನಾರಿಟೀ ಮುಸ್ಲೀಮರ ಓಲೈಕೆಯೂ, ಕೆಂಪೇಗೌಡನೆಂಬ ಪಾಳೆಯಗಾರನೂ, ನ್ಯೂಸೌತ್‌ವೇಲಿನ ಪಾರ್ಲಿಮೆಂಟಿನಲ್ಲಿ ದೀಪಾವಳಿಯೂ ಒಂದಕ್ಕೊಂಡು ಕೊಂಡಿ ಬೆಸೆದುಕೊಂಡು ‘ನವನಾಗರೀಕತೆ’ಯ ಪ್ರತೀಕವೆಂಬಂತೆ ಗುಡ್ಡೆಯಾಗಿ ಎದುರಿಗೆ ಬಿದ್ದಿದೆ. ಅಶೋಕನಿಂದ ಹಿಡಿದು ಭಾರತೀಯ ರಾಜರಲ್ಲಿ ಎಷ್ಟೆಷ್ಟು ಪಾಲು ಸದ್ಗುಣ ದುರ್ಗುಣ ಬೆರೆತಿದೆ ಎಂಬ ಜಗಳದಲ್ಲಿ ಟೈಮ್‌ಪಾಸ್ ಸುಲಭ. ಅಂದಿನ ರಾಜರಂತೆ ನಡೆದುಕೊಳ್ಳುವ ಡೆಮಾಕ್ರಸಿಯ ಇಂದಿನ ದೊರೆಗಳ ಬಿಸಿತುಪ್ಪದಂತಹ ಅಹಂಕಾರವನ್ನು ಬೆಣ್ಣೆಯಂತೆ ನುಂಗುವುದೂ ಕೂಡ. ಪ್ರಶ್ನಿಸದೇ ಬಿಟ್ಟರೆ, ಉತ್ತರದ ನಿರೀಕ್ಷೆಯೂ ಇಲ್ಲ, ದಾರಿ ಸುಗಮ. […]

Read More ನವನಾಗರೀಕತೆಯ ಕೊಲಾಜು

ಯಾರು ಹಿತವರು ನಿನಗೆ…

ಇದೀಗ ಸೆಪ್ಟೆಂಬರ್ ಏಳರಂದು ಆಸ್ಟ್ರೇಲಿಯಾದಲ್ಲಿ ಫೆಡರಲ್ ಚುನಾವಣೆ. ಬರುವ ವರ್ಷ ಭಾರತದಲ್ಲಿ ನಡೆಯಲಿದೆ. ಈ ಹೊತ್ತಿನಲ್ಲಿ ರಾಜಕೀಯ ಪ್ರಕ್ರಿಯೆಯ ಬಗ್ಗೆ ಒಂದೆರಡು ಯೋಚನೆಗಳನ್ನು ಇಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದೇನೆ. ಚುನಾವಣೆ ಹತ್ತಿರವಾದ ಹಾಗೆ ರಾಜಕೀಯ ನಮ್ಮ ಮನಸ್ಸನ್ನು ಆವರಿಸಿಕೊಳ್ಳುವುದು ಸಾಮಾನ್ಯ. ಆದರೆ ಚುನಾವಣೆಯ ಹೊತ್ತಿನಲ್ಲಿ ಮಾತ್ರ ರಾಜಕೀಯ ವಿಚಾರಗಳು ಜಾಗೃತವಾಗುವುದು ಅಪಾಯಕಾರಿ. ಯಾಕೆಂದರೆ ಉಳಿದ ಹೊತ್ತಿನಲ್ಲಿ ಎಚ್ಚರಿಕೆಯಿಂದ ರಾಜಕೀಯ ಆಗುಹೋಗುಗಳನ್ನು ಗಮನಿಸದೇ ಇದ್ದರೆ, ಪ್ರತಿಕ್ರಯಿಸದೇ ಉಳಿದರೆ ಚುನಾವಣೆಯ ಹೊತ್ತಿನಲ್ಲಿ ಗೊಂದಲಕ್ಕೆ ಒಳಗಾಗಿ ಪಕ್ಷಗಳ ಸುಳ್ಳು ಮೋಸಗಳಿಗೆ ಬಲಿಯಾಗುವುದನ್ನು ತಪ್ಪಿಸಲಾಗದು. […]

Read More ಯಾರು ಹಿತವರು ನಿನಗೆ…