NYE Sydney fireworks 2016

ಸಿಡ್ನಿಯ ಗಲ್ಲಿಯೊಂದರಿಂದ ಹೊಸ ವರುಷದ ಉನ್ಮಾದ…

NYE-2016.gif

Advertisements

ಹಕ್ಕಿ ಗೂಡು ತೋರಣ

ಗಿಳಿಯು ಪಂಜರದೊಳಿಲ್ಲ… ಪಂಜರದ ಹೊರಗೂ ಇಲ್ಲ.

AngelCages_01

ಸಿಡ್ನಿ ನಗರದ ನಟ್ಟ ನಡುವಲ್ಲಿ ಬಚ್ಚಿಟ್ಟುಕೊಂಡಿರುವ ಏಂಜಲ್‌ಗಲ್ಲಿ; ಅಲ್ಲಿ ತಲೆಯೆತ್ತಿ ನೋಡಿದರೆ ತೂಗಿರುವ ಈ ನೂರಾರು ಖಾಲಿ ಹಕ್ಕಿ ಪಂಜರಗಳು ನಮ್ಮ ಮನಸ್ಸನ್ನು ಸೆರೆ ಹಿಡಿಯುತ್ತವೆ. Continue reading “ಹಕ್ಕಿ ಗೂಡು ತೋರಣ”

Background images

I have been playing with Inkscape to create some backgound designs. Here are some if you like to use them. They are in png (portable network graphics) format.

They are in original SVG (Scalable Vector Graphics). I can’t upload them here, since they are not recognised as media file, I think. I can email them if you want.

You should use them in your image editing program to lay them repeatedly and create a pattern.

You can get variations by changing colour, filling colour, blurring or changing transparency.

suda_bg_1

suda_bg_3

suda_bg_2

Four Planets

Alignment of Jupiter, Venus, Mercury and Mars as seen in the northern skies of the southern Hemisphere. These are my attempts at capturing them this morning around 5.30 am. Drove up to the top of the 4 level car park at the Holsworthy Railway Station to take these pictures. The next similar alignment with five planets is in 2040…

ಬೆಂಗಳೂರು – ಹುಡುಗಿ

ಹೋದ ಸಲ ನಿನ್ನನ್ನು ಭೇಟಿಯಾದಾಗ ನಾವು ಹೇಗಿದ್ದೆವು? ಎಲ್ಲಾ ಹೇಗಿತ್ತು? ಮರೆತೇ ಹೋಗಿದೆ. ಅಂತಹ ದಿನಗಳಿವು. ದೂರದಿಂದಲೇ ಮಾತಾಡುತ್ತಿದ್ದೆವು. ಆದರೂ ಮುಖಾಮುಖಿಯಾಗುವ ಚಂದವೇ ಬೇರೆ ತಾನೆ? ಇದು ನಿನಗೂ ಗೊತ್ತು. ಆದರೂ ನಿನಗೆ ಒಂದು ಗುಟ್ಟು ಹೇಳಬೇಕು. ಇದನ್ನು ಹಿಂಜರಿಕೆಯಿಂದಲೇ ಹೇಳುತಾ ಇದ್ದೀನಿ. ಈ ಸಲ ನಿನ್ನನ್ನ ನೋಡಬೇಕು ಅನ್ನೋ ಉಮೇದು ಯಾಕೋ ಮುಂಚಿನಷ್ಟು ಇಲ್ಲ. ಈ ಸಲ ಎಲ್ಲ ತುಸು ಯಾಂತ್ರಿಕ ಅನ್ನಿಸ್ತಾ ಇದೆ.

ಆದರೂ ನಾನು ಅಲ್ಲಿಗೆ ಬಂದಕೂಡಲೇ ಅಪ್ಪಿಕೋತೀವಿ. ಮುದ್ದಾಡತೀವಿ. ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ದೀರ್ಘವಾಗಿ ನೋಡುತೀವಿ. ಕಳೆದ ದಿನಗಳ ಬಗ್ಗೆ, ಅವುಗಳಲ್ಲಿ ಕಳೆದು ಹೋದ ಸಾಧ್ಯತೆಗಳ ನೆನಪಾಗಿ ನಿಟ್ಟುಸಿರು ಬಿಡತೀವಿ ಅಂತೆಲ್ಲಾ ಅನಿಸದೇ ಇಲ್ಲ.  ಇದನ್ನು ನಿರ್ಲಜ್ಜೆಯಿಂದ ಹೇಳಬಲ್ಲೆ. ಯಾಕೆಂದರೆ ನನ್ನೆಲ್ಲಾ ಮಾನಗೆಟ್ಟ ಕೆಲಸಗಳನ್ನು ನೀನು ನೋಡಿದ್ದೀಯ, ನಕ್ಕಿದ್ದೀಯ, ಒಪ್ಪಿಕೊಂಡಿದ್ದೀಯ.

ಈ ಸಲ ನೀನು ಎಂದಿನಂತೆ ಸುಂದರವಾಗಿ ಮಲಗಿರುವಾಗ ಭಾನುವಾರ ನಡುರಾತ್ರಿ ಬಂದು ಇಳಿತೀನಿ. ಆ ಹೊಂಬಣ್ಣದ ದೀಪದ ಬೆಳಕಲ್ಲಿ ಬದಲಾಗಿದ್ದನ್ನು, ಬದಲಾಗದ್ದನ್ನು ನಿದ್ದೆಗಣ್ಣಲ್ಲೇ ಹೀರಿಕೊಳ್ಳುತ್ತಾ ನಿನಗೆ ಎಚ್ಚರವಾಗದಂತೆ ಸದ್ದುಮಾಡದೆ ಮನೆ ಸೇರಿಕೋತೀನಿ.

ಸೋಮವಾರ ಬೆಳಿಗ್ಗೆ ನೀನೆದ್ದು ಕಣ್ಣುಜ್ಜಿಕೊಳ್ಳುವಾಗ ಎದುರಿಗೆ ಬರುತೀನಿ. ನೀನು ನಿರ್ಲಕ್ಷ್ಯದಿಂದ ನನ್ನ ಪರಿಚಯವೇ ಇಲ್ಲವೆಂಬಂತೆ ಮುಖ ತಿರುಗಿಸುತ್ತೀಯ. ನಿನ್ನನ್ನು ಒಲಿಸಿಕೊಳ್ಳಲು ನಾನು ಪಾಡು ಪಡುತೀನಿ. ನನ್ನನ್ನು ಮರೆತದ್ದು ನೆನಪಾಗಿ ನೀನು ಮೆಲ್ಲಗೆ ನಗುವಾಗ ನಾನು ಹೊರಡುವ ದಿನ ಬಂದಿರತ್ತೆ. ಅಷ್ಟರಲ್ಲಿ ನೀನು ನನ್ನನ್ನು ನಿನ್ನದೇ ಗೆರೆಗಳಲ್ಲಿ ಕೊರೆದು ಚಿತ್ರಿಸು, ನಾನು ನಿನ್ನನ್ನ ನನ್ನದೇ ಗೊಗ್ಗರು ದನಿಯ ಹಾಡಲ್ಲಿ ಕಟ್ಟಿ ಹಾಕ್ತೀನಿ.

ಈ ಸಲ ತುಸು ಬೇರೆ ಬಗೆಯಾಗಬಹುದು. ಯಾಕೆಂದರೆ ನಾನೂ ನಿನ್ನಷ್ಟೇ ನಿರ್ಲಕ್ಷದಿಂದ ಇರಬೇಕು, ಹಾಗೆ ಹೀಗೆ ಅಂತ ಅಂದಕೊಂಡಿದ್ದೀನಿ. ಎದುರಾದಾಗ ಏನಾಗುತ್ತದೋ ಅನ್ನೋ ಕುತೂಹಲದಲ್ಲಿ ಇದ್ದೀನಿ. ನನ್ನ ಲೆಕ್ಕಾಚಾರ ತಲೆಕೆಳಗಾಗಬಹುದು ಅನ್ನೋ ಭಯವಿಲ್ಲ. ಏನೋ ನಿರಾಳ ಆವರಿಸಿಕೊಂಡಿದೆ.

ಸಿಗುವ. ನನ್ನ ಚುಂಬನಕ್ಕೆ ಕಾಯುತ್ತಿರು.

ದೇವರ ಕಾಣುವ ಕೈ

ಅರಿಶಿನ ಕುಂಕುಮದ ಡಬ್ಬಕ್ಕೆ ತಡಕಾಡುವ ಮೊದಲೇ ಹೇಳಿಬಿಡುತ್ತೇನೆ – ಇದು ದೇವರ “ಕಾಣದ ಕೈ” ಅಲ್ಲ. ಈ ಹಿಂದೆ “ದೇವರ ಕಣ್ಣು” ಎಂಬ ಚಿತ್ರ ನೀವು ನೋಡಿರಬಹುದು. ಇನ್ನು “ರಾಮಸೇತು” ಥರ ಏನೇನೋ ಆಧಾರ ಕೊಡೋಕೆ ಮುಂದಾಗೋ ಮುಂಚೆ ಹೇಳಿಬಿಡ್ತೀನಿ – ಇದು ಭೂಮಿಯಿಂದ ೫೮೦ ಕಿ.ಮಿ ದೂರದಲ್ಲಿ ಸುತ್ತುತ್ತಿರುವ ನಾಸಾದ “ಚಂದ್ರ ಎಕ್ಸ್-ರೇ” ಅಬ್ಸರರ್ವೇಟರಿಯಿಂದ ತೆಗೆದ ಚಿತ್ರ. Continue reading “ದೇವರ ಕಾಣುವ ಕೈ”

Blog at WordPress.com.

Up ↑