ಹಕ್ಕಿ ಗೂಡು ತೋರಣ

ಗಿಳಿಯು ಪಂಜರದೊಳಿಲ್ಲ… ಪಂಜರದ ಹೊರಗೂ ಇಲ್ಲ.

AngelCages_01

ಸಿಡ್ನಿ ನಗರದ ನಟ್ಟ ನಡುವಲ್ಲಿ ಬಚ್ಚಿಟ್ಟುಕೊಂಡಿರುವ ಏಂಜಲ್‌ಗಲ್ಲಿ; ಅಲ್ಲಿ ತಲೆಯೆತ್ತಿ ನೋಡಿದರೆ ತೂಗಿರುವ ಈ ನೂರಾರು ಖಾಲಿ ಹಕ್ಕಿ ಪಂಜರಗಳು ನಮ್ಮ ಮನಸ್ಸನ್ನು ಸೆರೆ ಹಿಡಿಯುತ್ತವೆ.

AngelCages_02

ಯಾರು ತೂಗಿ ಬಿಟ್ಟಿದ್ದಾರೆ? ಹಕ್ಕಿಗಳು ಬಂದು ಪಂಜರದೊಳಗೆ ಕೂರಲಿ ಎಂದೆ? ಅದು ಸಾಧ್ಯವೆ? ಈ ಪಂಜರ ತೋರಣದ ಅರ್ಥವೇನು ಎಂಬೆಲ್ಲಾ ಪ್ರಶ್ನೆಗಳು ತಲೆ ತುಂಬಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಅದೊಂದು ಸ್ಮಾರಕ. ಕಾಣೆಯಾಗಿರುವ ಹಕ್ಕಿಗಳ ನೆನಪು ಗಾಢವಾಗಿ ರೂಪುಗೊಂಡಿರುವ ನಗರದ ಕಲಾ ಸ್ಥಾವರ.

AngelCages_03

ಬೆಂಗಳೂರಿನಿಂದ ಕಾಗೆಗಳು ಗುಬ್ಬಚ್ಚಿಗಳು ಕಾಣೆಯಾದಂತೆ ಸಿಡ್ನಿಯಲ್ಲೂ ಹೊರದೂಡಲ್ಪಟ್ಟಿವೆ. ನಗರವನ್ನು ಕಟ್ಟುವ ಧಾವಂತದಲ್ಲಿ, ಹತ್ತಾರು ಮಹಡಿ ಕಟ್ಟಡಗಳನ್ನು ಎಬ್ಬಿಸುವ ಹಟದಲ್ಲಿ ಇಲ್ಲಿಯ ಹಕ್ಕಿಗಳು ಕಾಣೆಯಾಗಿವೆ.

AngelCages_04

ಸಿಡ್ನಿಯ ಮೂಲ ವಾಸ್ತವದ ಹತ್ತಲ್ಲ ಐವತ್ತು ಹಕ್ಕಿ ಜಾತಿಗಳ ಪಟ್ಟಿ ಮಾಡಿದ್ದಾರೆ. ಮರ-ಗಿಡ-ಹಣ್ಣು-ಹಂಪಲು ನೆಲಸಮವಾದಂತೆ ಹಕ್ಕಿಗಳ ಮನೆಮಾರುಗಳೂ ಕಾಣೆಯಾಗಿವೆ. ಅವುಗಳೀಗ ಸಿಡ್ನಿಯ ಅಂಚಿಗೆ ಸರಿದಿರುವ ಸಂಗತಿಗೆ ದ್ಯೋತಕವಾಗಿ, ನಮ್ಮ ಬೂಟುಗಾಲಿನ ಧಾಂಗುಡಿಯಲ್ಲಿ ರೆಕ್ಕೆಜೀವಿಗಳು ಪುರ್ರೆಂದು ಹಾರಿರಿರುವ ವಿದ್ಯಮಾನವನ್ನು ಮರೆಯದಿರಲು ಈ ಖಾಲಿ ತೂಗುವ ಗೂಡುಗಳು ನಮ್ಮನ್ನು ಬೇಡಿಕೊಳ್ಳುತ್ತವೆ.

ಈ ತೂಗುವ ಗೂಡುಗಳ ಹೆಸರು ‘ಫರ್ಗಾಟನ್ ಸಾಂಗ್ಸ್‘, ಮರೆತ ಕಲರವ, ಮೈಕಲ್ ಥಾಮಸ್ ಹಿಲ್‌ನ ಕಲಾಕೃತಿ.

ಅದರ ಹೆಸರು ನನಗೆ ಕೆ.ಎಸ್.ಎನ್‌ರ ಪದ್ಯ ‘ಮರೆತ ಹಾಡು’ ನೆನಪಿಗೆ ತಂದಿತು.

One thought on “ಹಕ್ಕಿ ಗೂಡು ತೋರಣ

Leave a comment